ತುಮಕೂರು: ತುಮಕೂರು ಗ್ರಾಮಾಂತರ ಹೊನ್ನುಡಿಕೆ ಹೋಬಳಿ ರಾಮನಹಳ್ಳಿಯಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಮುಖ್ ಕೊಂಡವಾಡಿ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಲೆಟ್ ಕಾಂಗ್ರೆಸ್ ವ್ಯಾಕ್ಸಿನೇಟ್ ಅಭಿಯಾನಕ್ಕೆ ರಾಷ್ಟಿçÃಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುರಭಿ ದ್ವಿವೇದಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸುರಭಿ ದ್ವಿವೇದಿ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮತ್ತು ರಾಷ್ಟಿçÃಯ ಯುವ ಕಾಂಗ್ರೆಸ್ ಅಧ್ಯಕ್ಷರಾದ ಬಿ.ವಿ.ಶ್ರೀನಿವಾಸ್ ಅವರ ಆದೇಶದ ಮೇರೆಗೆ ಕೋವಿಡ್ ಎರಡನೇ ಅಲೆ ನಿಯಂತ್ರಣಕ್ಕೆ ತರಲು ಕಾಂಗ್ರೆಸ್ ಪಕ್ಷವೂ ಸಹ ಎಲ್ಲಾ ರೀತಿಯಿಂದಲೂ ಸಾರ್ವಜನಿಕರಿಗೆ ಸಹಾಯ ಸಹಕಾರ ನೀಡುತ್ತಿದ್ದು, ಇದರ ಭಾಗವಾಗಿ ಯುವ ಕಾಂಗ್ರೆಸ್ ವತಿಯಿಂದ “ಲೆಟ್ ಕಾಂಗ್ರೆಸ್ ವ್ಯಾಕ್ಸಿನೇಟ್” ಅಭಿಯಾನಕ್ಕೆ ರಾಷ್ಟಾçದ್ಯಂತ ಚಾಲನೆ ನೀಡಲಾಗಿದೆ. ಯುವ ಕಾಂಗ್ರೆಸ್ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ವ್ಯಾಕ್ಸಿನೇಟ್ ನೊಂದಾಣಿ ಪ್ರಕ್ರಿಯೆ ಆರಂಭಿಸಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ಕೆಲವರ ಬಳಿ ಸ್ಮಾರ್ಟ್ ಫೋನ್ ಇರುವುದಿಲ್ಲ, ಇದ್ದರೂ ಸಹ ಅದರ ಬಗ್ಗೆ ಅರಿವಿರುವುದಿಲ್ಲ ಆದ್ದರಿಂದ ಯುವ ಕಾಂಗ್ರೆಸ್ ಕಾರ್ಯಕರ್ತರೇ ಮನೆ ಮನೆಗೆ ತೆರಳಿ ನೊಂದಾಯಿಸುವ ಪ್ರಕ್ರಿಯೆ ಮಾಡುತ್ತಿದ್ದಾರೆ ಎಂದರು.
ಬಡವರಿಗೆ ಹಾಗೂ ಕಾರ್ಮಿಕರಿಗೆ ಸ್ಮಾರ್ಟ್ ಫೋನ್ ಬಳಕೆಯ ಅರಿವು ಅಷ್ಟಾಗಿ ಇರುವುದಿಲ್ಲ. ಆನ್‌ಲೈನ್ ಮೂಲಕ ನೋಂದಣಿ ಮಾಡಿಸಿಕೊಳ್ಳುವ ಕಾರ್ಯ ಕಷ್ಟಸಾಧ್ಯವಾಗಿರುತ್ತದೆ. ಇದರಿಂದಾಗಿ ಕಾಂಗ್ರೆಸ್ ಪಕ್ಷ ಹಾಗೂ ಯುವ ಕಾಂಗ್ರೆಸ್ ಒಂದಾಗಿ ಜನರಲ್ಲಿ ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಂಡಿದೆ ಎಂದು ಹೇಳಿದರು.
ಕೊರೊನಾ ಮಹಾಮಾರಿಯಿಂದ ತೊಂದರೆಗೆ ಯಾರೇ ಒಳಗಾದರೂ ಅವರ ಸಹಾಯಕ್ಕೆ ಕಾಂಗ್ರೆಸ್ ಧಾವಿಸಲಿದೆ. ನಾವೆಲ್ಲ ಒಗ್ಗಟ್ಟಾಗಿ ಜನರ ಸಹಾಯಕ್ಕೆ ಮುಂದಾಗುತ್ತೇವೆ. ಯಾವುದೇ ಸನ್ನಿವೇಶ ಸಂದರ್ಭ ಹಾಗೂ ತೊಂದರೆ ಎದುರಾದಾಗ ಸಹಾಯಕ್ಕೆ ಒಂದಾಗುವುದು ಕಾಂಗ್ರೆಸ್ ಪಕ್ಷದ ಧರ್ಮ. ಯುವ ಕಾಂಗ್ರೆಸ್ ಈ ನಿಟ್ಟಿನಲ್ಲಿ ನಿರಂತರವಾಗಿ ಕಾರ್ಯಪ್ರವೃತ್ತವಾಗಿರುತ್ತದೆ ಎಂದರು.
ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಅವರ ಆದೇಶದಂತೆ ಯುವ ಕಾಂಗ್ರೆಸ್ ತಂಡ ಆಹಾರ, ಔಷಧಿ, ಆಂಬ್ಯುಲೆನ್ಸ್ ಸೌಲಭ್ಯಗಳ ಜತೆಗೆ ಲಸಿಕೆಗೆ ಸೂಕ್ತ ವ್ಯವಸ್ಥೆ ಮಾಡುತ್ತಿದೆ. ಜನರ ಸೇವೆ ನಿರಂತರವಾಗಿ ನಡೆಯಲಿದೆ. ರಾಷ್ಟಿçÃಯ ಯುವ ಕಾಂಗ್ರೆಸ್ ದೇಶಾದ್ಯಂತ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತ್ತಿದೆ ಎಂದು ತಿಳಿಸಿದರು.
ಫ್ರಂಟ್ ಲೈನ್ ವಾರಿರ‍್ಸ್ಗಳಾಗಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಪೊಲೀಸರಿಗೆ ಗೌರವ ಸೂಚಿಸುವ `ನಮ್ಮ ಪೊಲೀಸ್ ನಮ್ಮ ಹೆಮ್ಮೆ” ರಾಜ್ಯ ಮಟ್ಟದ ಅಭಿಯಾನಕ್ಕೆ ನಮ್ಮ ರಾಷ್ಟಿçÃಯ ಯುವ ಕಾಂಗ್ರೆಸ್ ಅಧ್ಯಕ್ಷರು ಈಗಾಗಲೇ ಚಾಲನೆ ನೀಡಿದ್ದು, ಪೊಲೀಸರಿಗೆ ಕೋವಿಡ್ ನಿಂದ ರಕ್ಷಣೆ ಪಡೆಯುವ ಎಲ್ಲಾ ಪರಿಕರಗಳನ್ನು ಒಳಗೊಂಡ ಸಮಗ್ರ ಕಿಟ್ ವಿತರಣೆ ಮಾಡುವ ಅಭಿಯಾನ ಇದಾಗಿದೆ. ಈ ಸುರಕ್ಷತಾ ಕಿಟ್‌ನಲ್ಲಿ ಮುಖಗವಸು, ಫೇಸ್ ಶೀಲ್ಡ್, ಕೈಗವಸು, ಸ್ಯಾನಿಟೈಸರ್, ಸೋಂಕು ನಿವಾರಕ, ಆಕ್ಸಿಮೀಟರ್ ಮತ್ತು ದೇಹದ ತಾಪಮಾನ ಪರೀಕ್ಷಿಸುವ ಉಪಕರಣ ಒಳಗೊಂಡಿದೆ ಎಂದು ತಿಳಿಸಿದರು.
ಲೆಟ್ ಕಾಂಗ್ರೆಸ್ ವ್ಯಾಕ್ಸಿನೇಟ್ ಅಭಿಯಾನದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು ತಮ್ಮ ತಮ್ಮ ಪ್ರದೇಶಗಳಲ್ಲಿ ಮನೆ ಮನೆಗೆ ತೆರಳಿ ನೊಂದಾಯಿಸುವ ಪ್ರಕ್ರಿಯೆ ನಡೆಸಬೇಕೆಂದು ಸೂಚಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸುಮುಖ್ ಕೊಂಡವಾಡಿ ಮಾತನಾಡಿ, ರಾಷ್ಟಿçÃಯ ಯುವ ಕಾಂಗ್ರೆಸ್ ಅಧ್ಯಕ್ಷರ ನಿರ್ದೇಶನದಂತೆ ತುಮಕೂರು ಗ್ರಾಮಾಂತರ ಪ್ರದೇಶದ ರಾಮನಹಳ್ಳಿಯಲ್ಲಿ ಲೆಟ್ ಕಾಂಗ್ರೆಸ್ ವ್ಯಾಕ್ಸಿನೇಟ್ ಅಭಿಯಾನಕ್ಕೆ ರಾಷ್ಟಿçÃಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸುರಭಿ ದ್ವಿವೇದಿ ಅವರು ಚಾಲನೆ ನೀಡಿದ್ದಾರೆ. ಇಂದಿನಿAದ ಪ್ರತಿನಿತ್ಯ ಯುವ ಕಾಂಗ್ರೆಸ್ ವತಿಯಿಂದ ಮನೆ ಮನೆಗೆ ತೆರಳಿ ನೊಂದಾಯಿಸುವ ಪ್ರಕ್ರಿಯೆ ಆರಂಭಿಸಿದ್ದು, ಕೋವಿಡ್ ಮುಗಿಯುವವರೆಗೂ ನಿರಂತರವಾಗಿ ನಡೆಯಲಿದೆ ಎಂದು ಹೇಳಿದರು.
ಸಾರ್ವಜನಿಕರು ಸದಾ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತ್ಯವಶ್ಯಕ, ಕೊರೋನ ಸೋಂಕಿನ ಲಕ್ಷಣಗಳು ಕಂಡು ಬಂದರೆ ಅಂತಹವರು ಹತ್ತಿರದ ಕೋವಿಡ್ ಕೇರ್ ಸೆಂಟರ್‌ಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು, ಇದರಿಂದ ಬೇರೆಯವರಿಗೆ ಸೋಂಕು ಹರಡುವುದು ತಪ್ಪುತ್ತದೆ ಎಂದು ತಿಳಿಸಿದರು.
ಅಭಿಯಾನಕ್ಕೂ ಮುನ್ನ ತುಮಕೂರು ನಗರದ ಕುಣಿಗಲ್ ಜಂಕ್ಷನ್ ಬೈಪಾಸ್‌ನಲ್ಲಿರುವ ಗುಡಿಸಲು ವಾಸಿಗಳಿಗೆ ಸುಮುಖ್ ಕೊಂಡವಾಡಿ ನೇತೃತ್ವದಲ್ಲಿ ಆಹಾರ ಮತ್ತು ನೀರನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಗರ ಬ್ಲಾಕ್೧ ಅಧ್ಯಕ್ಷ ನೂರ್ ಮಹಮ್ಮದ್, ರೋಹಿತ್, ಯುವ ಕಾಂಗ್ರೆಸ್ ತುಮಕೂರು ಗ್ರಾಮಾಂತರ ಬ್ಲಾಕ್ ಅಧ್ಯಕ್ಷ ಮಹಮ್ಮದ್ ಹರ್ಷದ್, ರಕ್ಷಿತ್, ಎನ್‌ಎಸ್‌ಯುಐ ನಗರಾಧ್ಯಕ್ಷ ಸಲ್ಮಾನ್ ಸೇರಿದಂತೆ ಹಲವರು ಭಾಗವಹಿಸಿದ್ದರು.