ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು ಶಾಸಕ ಎಲ್ ಎನ್ ನಾರಾಯಣಸ್ವಾಮಿ ಸಭೆಯಲ್ಲಿ ಸೂಚನೆ

 

 

 

ಕೊರೊನಾ ನಿಯಂತ್ರಣಕ್ಕೆ ಅಧಿಕಾರಿಗಳು ಚುರುಕಾಗಿ ಕಾರ್ಯನಿರ್ವಹಿಸಬೇಕು

ಶಾಸಕ ಎಲ್ ಎನ್ ನಾರಾಯಣಸ್ವಾಮಿ ಸಭೆಯಲ್ಲಿ ಸೂಚನೆ

 

 

ವೇಗವಾಗಿ ಹರಡುತ್ತಿರುವ ಕೊರೊನಾವನ್ನು ಕಡಿವಾಣ ಹಾಕಿವೈದ್ಯಕೀಯ ಚಿಕಿತ್ಸೆ ಮತ್ತು ತಪಾಸಣೆ ಚುರುಕುಗೊಳಿಸಿಗ್ರಾಮಗಳಲ್ಲಿ ಫಿವರ್ ಕೇಂದ್ರಗಳ ತೆರೆದು ಸೂಕ್ತ ಚಿಕಿತ್ಸೆ ನೀಡಲು ಶಾಸಕ ಎಲ್.ಎನ್.ನಾರಾಯಣಸ್ವಾಮಿ ಸೂಚನೆಆಕಾಶ್ ಆಸ್ಪತ್ರೆಯಲ್ಲಿ ವೈದ್ಯರ ಹುದ್ದೆ ಹಚ್ಚಳಕ್ಕೆ ಕ್ರಮ ಕೈಗೊಳ್ಳಬೇಕುದೇವನಹಳ್ಳಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಶಾಸಕ ಎಲ್.ಎನ್.ನಾರಾಯಣಸ್ವಾಮಿ ಸಭೆ ನಡೆಸಿದರು. ಕೊರೊನಾ ನಿಯಂತ್ರಣದಲ್ಲಿ ಅಧಿಕಾರಿಗಳ ಬೇಜವಾಬ್ದಾರಿ ಏಕೆ, ಎಲ್ಲರೂ ಒಟ್ಟಾಗಿ ಕೊರೊನಾವನ್ನು ಕಡಿವಾಣ ಹಾಕಲು ಸಹಕಾರ ನೀಡಬೇಕು. ಎಲ್ಲಾ ಆಸ್ಪತ್ರೆಗಳಲ್ಲಿಯೂ ತಾಲೂಕಿನ ಜನತೆಗೆ ಬೆಡ್‌ಗಳು ಸಿಗುವ ಕೆಲಸವಾಗಬೇಕು. ರೆಮಿಡಿಸಿವಿಯರ್ ಇಂಜೆಕ್ಷನ್ ಬಡವರಿಗೆ ಮತ್ತು ಅವಶ್ಯಕತೆ ಇರುವವರಿಗೆ ಸಿಗುವಂತಾಗಬೇಕು. ಯಾರೂ ಸಹ ಕೊರೊನಾದಿಂದ ಸಾವನ್ನಪ್ಪದಂತೆ ಎಚ್ಚರವಹಿಸಬೇಕು. ಆದಷ್ಟು ಬೇಗ ಬೇಗ ಸೋಂಕಿತರನ್ನು ಗುಣಪಡಿಸಬೇಕು. ಗ್ರಾಮಗಳಲ್ಲಿ ಹರಡದಂತೆ ಫಿವರ್ ಕೇಂದ್ರಗಳನ್ನು ಸ್ಥಾಪಿಸಿ, ಸೋಂಕಿತರಿಗೆ ಮತ್ತು ಗ್ರಾಮದ ಜನತೆಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸವಾಗಬೇಕು. ಕೋವಿಡ್ ವ್ಯಾಕ್ಸಿನ್ ನೀಡುತ್ತಿರುವ ಸ್ಥಳ ಪಟ್ಟಣದಿಂದ ೨ ಕಿಮೀ ದೂರದಲ್ಲಿರುವುದರಿಂದ ಕೂಡಲೇ ಜನಸಾಮಾನ್ಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ಸರಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಲಸಿಕೆ ನೀಡುವ ಕೆಲಸವಾಗಬೇಕು. ಸರಕಾರಿ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ನೀಡುವ ಕೆಲಸವಾಗಬೇಕು. ಸಿಬ್ಬಂದಿಗಳ ಕೊರತೆ ಇದ್ದಲ್ಲಿ ಕೂಡಲೇ ನೇಮಿಸಿಕೊಳ್ಳಬೇಕು ಎಂದು ಡಿಎಚ್‌ಒಗೆ ಸೂನೆ ನೀಡಿದರು. ಸಭೆಯಲ್ಲಿ ದೇವನಹಳ್ಳಿ ತಾಲೂಕು ಆರೋಗ್ಯಾಧಿಕಾರಿ ಸಂಜಯ್ ಬೇಜಾವಾಬ್ದಾರಿ ಉತ್ತರಕ್ಕೆ ದೇವನಹಳ್ಳಿ ಸರ್ಕಲ್ ಇನ್ಸ್‌ಪೆಕ್ಟರ್ ಮೊಹಮ್ಮದ್ ರಫಿ ನಾವು ಸ್ನಾನ ಮಾಡುತ್ತೇವೆ. ನಾವು ತಿಂಡಿ ತಿನ್ನುತ್ತೇವೆ. ನಮಗೂ ಕುಟುಂಬವಿದೆ. ಒಂದು ದಿನ ಸ್ನಾನ, ಊಟ ಮಾಡಿಲ್ಲವೆಂದರೆ ಪ್ರಾಣ ಹೋಗುದಿಲ್ಲ. ಸೋಂಕಿತರ ಪ್ರಾಣ ಹೋಗುವುದನ್ನು ಈ ಸಮಯದಲ್ಲಿ ತಡೆಯುವ ಕೆಲಸ ಎಲ್ಲರೂ ಸೇರಿ ಮಾಡುವಂತಹದ್ದು, ಮೊಬೈಲ್ ಕರೆ ನೀಡಿದರೆ ಉತ್ತರಿಸುವ ಸೌಜನ್ಯವನ್ನಿಟ್ಟುಕೊಳ್ಳಿ ಎಂದು ಮಾತಿನ ಚಕಮಕಿ ನಡೆಸಿದರು. ಇನ್ನೂ ಈ ಸಂದರ್ಭದಲ್ಲಿ ತಾಲೂಕು ತಹಶೀಲ್ದಾರ್ ಅನಿಲ್‌ಕುಮಾರ್ ಅರೋಲಿಕರ್, ತಾಪಂ ಇಒ ವಸಂತ್‌ಕುಮಾರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎ.ತಿಪ್ಪೇಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಸಂಜಯ್, ಪುರಸಭೆ ಸಿಒಗಳಾದ ಎ.ಎಚ್.ನಾಗರಾಜ್, ಪ್ರದೀಪ್, ಸರ್ಕಲ್ ಇನ್ಸ್‌ಪೆಕ್ಟರ್ ಮೊಹಮ್ಮದ್ ರಫೀ, ಮುಖಂಡರಾದ ಕಾರಹಳ್ಳಿ ಮುನೇಗೌಡ, ಪ್ರಧಾನಕಾರ್ಯದರ್ಶಿ ಜಿ.ಎ.ರವೀಂದ್ರ, ತಾಲೂಕುಮಟ್ಟದ ಅಧಿಕಾರಿಗಳು ಇದ್ದರು.

 

ಗುರುಮೂರ್ತಿ ಬೂದಿಗೆರೆ

8861100990

Leave a Reply

Your email address will not be published. Required fields are marked *

You cannot copy content of this page

error: Content is protected !!