ಮಧುಗಿರಿಯಲ್ಲಿ ಹಸಿರುದಳ ವತಿಯಿಂದ ಆಹಾರ ಕಿಟ್ಗಳ ವಿತರಣೆ

 

 

ಮಧುಗಿರಿ: ಪಟ್ಟಣದ 14ನೇ ವಾರ್ಡ್ ವಾಲ್ಮೀಕಿ ಬಡಾವಣೆ (ಮಂಡರಕಾಲೋನಿ)ಯ 90ಕುಟುಂಬಗಳಿಗೆ ಹಸಿರುದಳ ವತಿಯಿಂದ ಆಹಾರದ ಕಿಟ್ ಗಳು ಮತ್ತು ಮನೆಯಲ್ಲೆ ಐಸೋಲೆಷನ್ ಆದ ಕೊರೊನಾ ಸೋಂಕಿತ ರೋಗಿಗಳಿಗೆ ಸ್ಯಾನಿಟೆಸರ್, ಮಾಸ್ಕ್, ಹಣ್ಣು, ಪ್ರೋಟಿನ್ ಯುಕ್ತ ಆಹಾರ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಹಸಿರುದಳ ಸಂಸ್ಥೆಯ ಸಂಯೋಜಕ ಮೋಹನ್ ಕುಮಾರ್ ಮಾತನಾಡಿ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಹೆಚ್ಚತೊಡಗಿದ್ದು ಈ ರಾಜ್ಯಗಳಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಕೊರೊನಾ 2ನೇ ಅಲೆಯ ಆತಂಕ ಸೃಷ್ಟಿ ಯಾಗಿದೆ.

ಆದ್ದರಿಂದ ಎಲ್ಲರೂ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು, ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಮತ್ತು ಕೊರೊನಾ ಲಸಿಕೆಯನ್ನು ತಪ್ಪದೇ ಪಡೆಯಬೇಕು ಎಂದು ತಿಳಿಸಿದರು.

ನಂತರ 14 ನೇ ವಾರ್ಡಿನ ಮುಂಖಂಡರಾದ ಮಂಜುನಾಥ್ ಮಾತನಾಡಿ ಹಸಿರುದಳ ಸಂಸ್ಥೆಯು 2020ರಲ್ಲಿ ಸಹ ಲಾಕ್ ಡೌನ್ ಸಂದರ್ಭದಲ್ಲಿ ಚಿಂದಿ ಆಯುವ ಮತ್ತು ಕೂದಲು ವ್ಯಾಪಾರ ಮಾಡುವ 90 ಕುಟುಂಬಗಳಿಗೆ ಸಹಾಯ ಹಸ್ತ ಚಾಚಿತ್ತು. ಅದೇ ರೀತಿ ಈ ವರ್ಷವೂ ಸಹ ಹಸಿರುದಳ ಸಂಸ್ಥೆ ನಮ್ಮ ವಾರ್ಡಿನ ಜನರ ಪರ ನಿಂತಿದೆ ಈ ರೀತಿ ಸಹಾಯ ಮಾಡಿದ ಹಸಿರುದಳ ಸಂಸ್ಥೆಗೆ ಇಲ್ಲಿನ ನಿವಾಸಿಗಳ ಪರವಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಹಸಿರುದಳ ಸಂಯೋಜಕರಾದ ಮೋಹನ್, ದಿವ್ಯ ಶ್ರೀ, ನರಸಿಂಹರಾಜು ಸಿ.ಎಲ್ ಮತ್ತು ತಂಡ ಹಾಗು ಮುಖಂಡರಾದ ಮಂಜುನಾಥ.ಎಲ್ ,ವಾಸು , ಮಣಿ, ವೆಂಕಟೆಶ್, ರಾಜು, ಇತರರು ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!