ಕೋವಿಡ್ -19 ನಿರ್ವಹಣೆ ಕುರಿತು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವರ್ಚುಯಲ್ ಮೀಟಿಂಗ್

 

 

ತುಮಕೂರು

ಕೋವಿಡ್ -19 ನಿರ್ವಹಣೆ ಕುರಿತು ರಾಜ್ಯದ ವಿವಿಧ ಜಿಲ್ಲೆಯಲ್ಲಿ ಕೋವಿಡ್ ಕರ್ತವ್ಯ ನಿರತ ವೈದ್ಯರು ಹಾಗೂ

ತಜ್ಞ ವೈದ್ಯರೊಂದಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಸಂಜೆ ವರ್ಚುಯಲ್ ಸಭೆ ನಡೆಸಿ ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಕೈಗೊಂಡಿರುವ ಕ್ರಮಗಳು ಮತ್ತು ಸಲಹೆ-ಸೂಚನೆ, ಅಭಿಪ್ರಾಯಗಳ ಮಾಹಿತಿ‌ ಪಡೆದರು.

 

 

ತುಮಕೂರು ಜಿಲ್ಲೆಯಿಂದ ಜಿಲ್ಲಾ ಆಸ್ಪತ್ರೆಯ ಫಿಜಿಷಿಯನ್

ಡಾ. ಪಿ. ಭಾನುಪ್ರಕಾಶ್ ಮುಖ್ಯಮಂತ್ರಿಗಳಿಗೆ ಮಾಹಿತಿ ನೀಡಿದರು.

 

 

ಸಭೆಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು “ತುಮಕೂರು ಜಿಲ್ಲೆ ಬೆಂಗಳೂರಿನ ಪ್ರತಿಬಿಂಬವಾಗಿದೆ. ಜಿಲ್ಲೆಯಲ್ಲಿ ಪ್ರಸ್ತುತ ಪರಿಸ್ಥಿತಿ ಹೇಗಿದೆ?” ಎಂದು ಕೇಳಿದ ಪ್ರಶ್ನೆಗೆ ಮಾಹಿತಿ ನೀಡಿದ ಡಾ. ಭಾನುಪ್ರಕಾಶ್

ಜಿಲ್ಲೆಯಲ್ಲಿ ಪ್ರಸ್ತುತ 77,039 ಪಾಸಿಟಿವ್ ಪ್ರಕರಣಗಳಿವೆ. ಹತ್ತು ತಾಲೂಕುಗಳ ಪೈಕಿ ತುಮಕೂರು ತಾಲೂಕಿನಲ್ಲಿ ಹೆಚ್ಚು ಪ್ರಕರಣಗಳಿವೆ. ಈವರೆಗೆ 660 ಸೋಂಕಿತರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಈವರೆಗೆ 3609 ಕೋವಿಡ್ ಸೋಂಕಿತರು ದಾಖಲಾಗಿದ್ದಾರೆ. ಐಸಿಯುನಲ್ಲಿ 663 ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದ್ದು, 441 ಸೋಂಕಿತರು ಮೃತಪಟ್ಟಿದ್ದಾರೆ.

 

ತುಮಕೂರು-ಬೆಂಗಳೂರು ಓಡಾಡುವವರ ಸಂಖ್ಯೆ ಹೆಚ್ಚಿಗೆ ಇರುವ ಪರಿಣಾಮ, ಬೆಡ್ ಸಿಕ್ಕಿಲ್ಲವೆಂದು ಬೆಂಗಳೂರಿನಿಂದ ತುಮಕೂರಿಗೆ ಹಾಗೂ ತುಮಕೂರಿನಿಂದ ಬೆಂಗಳೂರಿಗೆ ಹೋಗುವವರಿಂದ, ಲಸಿಕೆ ಪಡೆಯುವ ಸಲುವಾಗಿ ತುಮಕೂರಿಗೆ ಬಂದಿದ್ದ ಕಾರಣದಿಂದ ಸೋಂಕಿನ ಪ್ರಮಾಣ ಜಿಲ್ಲೆಯಲ್ಲಿ ಏರಿಕೆಯಾಗಿದೆ.

 

ಆದರೂ ಜಿಲ್ಲೆಯಲ್ಲಿ ಅಧಿಕಾರಿಗಳ ಸಮನ್ವಯತೆ ಉತ್ತಮವಾಗಿರುವುರಿಂದ ಲಭ್ಯವಿರುವ ಸೌಲಭ್ಯಗಳಲ್ಲೇ ನಿರ್ವಹಣೆ ಸಾಧ್ಯವಾಗಿದೆ‌‌ ಎಂದರು.

 

ನಂತರ ಮುಖ್ಯಮಂತ್ರಿಗಳು “ನಿಮ್ಮ ಅನುಭವದ ಪ್ರಕಾರ ಮೊದಲನೇ ಅಲೆ ಹಾಗೂ ಎರಡನೇ ಅಲೆ ನಡುವೆ ಇರುವ ವ್ಯತ್ಯಾಸವೇನು?” ಎಂಬ ಬಗ್ಗೆ ಮಾಹಿತಿ ಕೇಳಿದಾಗ

ಮೊದಲನೆ ಅಲೆಯಲ್ಲಿ‌ ಹೋಂ ಐಸೋಲೇಷನ್ ಕಡ್ಡಾಯವಾಗಿ ಮಾಡಲಾಗುತ್ತಿತ್ತು. ಸೋಂಕಿತರ ಪ್ರದೇಶ ಗುರುತಿಸುವಿಕೆ ಕೆಲಸ ಮಾಡಲಾಗುತ್ತಿತ್ತು. ಇದರಿಂದ ಜನರು ಎಚ್ಚರಿಕೆ ಮತ್ತು ಜಾಗೃತಿ ವಹಿಸುತ್ತಿದ್ದರು. ಎರಡನೇ ಅಲೆಯಲ್ಲಿ ಈ ಕ್ರಮಗಳು ನಡೆಯುತ್ತಿಲ್ಲ. ಸೋಂಕಿತರು ಮನೆ ಒಳಗೆ ಮತ್ತು ಹೊರಗೆ ಓಡಾಡುತ್ತಿದ್ದಾರೆ. ಸೋಂಕಿತರೆಂದು ಅಕ್ಕಪಕ್ಕದವರಿಗು ಗೊತ್ತಾಗುವುದಿಲ್ಲ. ಮೊದಲನೇ ಅಲೆಯಲ್ಲಿ ವಯಸ್ಸಾದವರಿಗೆ ಹೆಚ್ಚು ಸೋಂಕು ಹರಡುತ್ತಿತ್ತು. ಎರಡನೇ ಅಲೆಯಲ್ಲಿ ಮಧ್ಯ ವಯಸ್ಕರು, ಯುವಕರು ಹಾಗೂ ಕೆಲವು‌ ಮಕ್ಕಳಿಗೂ ಸೋಂಕು ತಗುಲುತ್ತಿದೆ. ಮೊದಲನೆ ಅಲೆಯಲ್ಲಿ ಆರ್ಟಿಪಿಸಿರ್ ನಲ್ಲಿ ಪಾಸಿಟಿವ್ ಬಂದವರನ್ನು ಸೋಂಕಿತರೆಂದು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿತ್ತು. ಆದರೆ, ಈ ಬಾರಿ ಅರ್ಟಿಪಿಸಿಅರ್ ನೆಗೆಟಿವ್ ಬಂದಿರುತ್ತೆ. ಆದರೂ, ಸೋಂಕಿನ ಲಕ್ಷಣಗಳು ಇರುತ್ತದೆ. ಜೊತೆಗೆ ಸಿಟಿ ಸ್ಕ್ಯಾನಿಂಗ್ ಮಾಡಿದರೆ ಸೋಂಕಿನ ಸ್ಕೋರಿಂಗ್ ಹೆಚ್ಚಿರುತ್ತೆ. ಆಕ್ಸಿಜನ್ ಪ್ರಮಾಣ ಕಡಿಮೆ ಇರುತ್ತೆ. ಅವರು ತಡವಾಗಿ ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಹೀಗಾಗಿ ತೀವ್ರತೆ ಜಾಸ್ತಿಯಾಗಿ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ ಎಂದು ಭಾನುಪ್ರಕಾಶ್ ಮಾಹಿತಿ ನೀಡಿದರು.

 

ಜಿಲ್ಲೆಯಲ್ಲಿ ಎಷ್ಟು ಜನರಿಗೆ ಈಗಾಗಲೇ ಕೋವಿಡ್ ಲಸಿಕೆ ನೀಡಲಾಗಿದೆ? ಎಂಬ ಮುಖ್ಯ ಮಂತ್ರಿಗಳ ಪ್ರಶ್ನೆಗೆ ಉತ್ತರಿಸಿದ

ಡಾ. ಭಾನುಪ್ರಕಾಶ್ ಜಿಲ್ಲೆಯಲ್ಲಿ ಈವರೆಗೆ 4,44,000 ಕೋವಿಡ್ ಲಸಿಕೆ ನೀಡಲಾಗಿದೆ. ಇದರಲ್ಲಿ 45 ವರ್ಷ ಮೇಲ್ಪಟ್ಟವರಿಗೆ 40% ಲಸಿಕೆ ಹಾಗೂ 18-44 ವರ್ಷದೊಳಗಿನ 3,‌372 (0.3%) ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು

Leave a Reply

Your email address will not be published. Required fields are marked *

You cannot copy content of this page

error: Content is protected !!