ತುಮಕೂರು ಜಿಲ್ಲೆಯಲ್ಲಿ ಕೊರನ ಸೋಂಕು ಹೆಚ್ಚಿರುವ ಕಾರಣ ಬಡಕುಟುಂಬಗಳಿಗೆ ಜೀವನ ನಡೆಸುವುದು ಕಷ್ಟಕರವಾಗಿದೆ ಇನ್ನು
ಬಡವರು ಅಲೆಮಾರಿಗಳು ವಲಸೆ ಕಾರ್ಮಿಕರು ಹಾಗೂ ಹಕ್ಕಿಪಿಕ್ಕಿ ಜನಾಂಗದವರು ಪ್ರತಿದಿನದ ಆಹಾರಕ್ಕೂ ಪರಿತಪಿಸುತ್ತಿದ್ದರು.
ಇದನ್ನು ಗಮನಿಸಿದ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಅಂತಹ ಕುಟುಂಬಗಳು ವಾಸಿಸುವ ಜಾಗಗಳನ್ನು ಗುರುತಿಸಿ. ಅಂತಹ ಕುಟುಂಬ ಗಳಿಗೆ ಜಿಲ್ಲಾ ಪೊಲೀಸ್ ಇಲಾಖೆಯ ವತಿಯಿಂದ ದಿನಸಿ ಕೀಟಗಳನ್ನು ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಂಶಿ ಕೃಷ್ಣ ರವರು ಖುದ್ದು ಭೇಟಿ ನೀಡಿ ಅಂತಹ ಕುಟುಂಬಗಳಿಗೆ ದಿನಸಿ ಕಿಟ್ಗಳನ್ನು ವಿತರಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ತುಮಕೂರು ನಗರದ ಸದಾಶಿವನಗರ ,ಟುಡಾ ಲೇಔಟ್ ,ಬಟವಾಡಿ, ಅಮಲಾಪುರ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ವಾಸಿಸುತ್ತಿದ್ದ ಸುಮಾರು ಮುನ್ನೂರಕ್ಕೂ ಹೆಚ್ಚು ಕುಟುಂಬಗಳನ್ನು ಗುರುತಿಸಿ ಅಂತಹ ಕುಟುಂಬಗಳಿಗೆ ದಿನಸಿಗಳನ್ನು ವಿತರಿಸಿದರು.
ಇನ್ನು ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕೊರೊನಾ ಸೋಂಕು ಹೆಚ್ಚಿರುವ ಕಾರಣ ಕುಟುಂಬಗಳು ಬೀದಿಗೆ ಬೀಳುವಂತಹ ಪರಿಸ್ಥಿತಿ ಬಂದಿದೆ ಕೂಲಿ ಇಲ್ಲದೆ ಕುಟುಂಬಗಳು ಪರಿತಪಿಸುತ್ತಿದ್ದಾರೆ ಆದ್ದರಿಂದ ಅಂತಹ ಕುಟುಂಬಗಳಿಗೆ ನಮ್ಮ ಜಿಲ್ಲಾ ಪೊಲೀಸ್ ವತಿಯಿಂದ ದಿನಸಿ ಕೀಟಗಳನ್ನು ವಿತರಿಸಲಾಗಿದೆ ಎಂದರು.
ಇನ್ನು ಇದೇ ಸಂದರ್ಭದಲ್ಲಿ ಅಡಿಷನಲ್ ಎಸ್ಪಿ ಉದೇಶ್, ತುಮಕೂರು ಡಿವೈಎಸ್ಪಿ ಶ್ರೀನಿವಾಸ್ ಮಹಿಳಾ ಪೊಲೀಸ್ ಠಾಣೆಯ ರಾಧಾಕೃಷ್ಣ, ಕೋರ ಪಿಎಸ್ಐ ಹರೀಶ್ ಸೇರಿದಂತೆ ತುಮಕೂರು ನಗರದ ವಿವಿಧ ಠಾಣೆಯ ಪೊಲೀಸ್ ಸಿಬ್ಬಂದಿ ಗಳು ಹಾಜರಿದ್ದರು.