ತೂಬಗೆರೆ :
ನೂತನವಾಗಿ ತೂಬಗೆರೆ ಹೋಬಳಿ ವ್ಯಾಪ್ತಿಯಲ್ಲಿ ಆಯ್ಕೆಯಾದ ಜಾತ್ಯತೀತ ಜನತಾದಳ ಬೆಂಬಲಿತ ಗ್ರಾಮ ಪಂಚಾಯತಿ ಸದಸ್ಯರ ಸನ್ಮಾನ ಸಮಾರಂಭ
ಇಲ್ಲಿನ ಶ್ರೀ ಸಾಯಿ ವಿನಯ್ ವಿಶ್ವಧಾಮ ದಲ್ಲಿ ಆಚರಿಸಿಕೊಂಡರು.
ಮಾನ್ಯ ಶಾಸಕರಾದ ನಿಸರ್ಗ ನಾರಾಯಣಸ್ವಾಮಿ ಭಾಗವಹಿಸಿ ನೂತನ ಸದಸ್ಯರನ್ನು ಸನ್ಮಾನಿಸಿ ಶುಭಾಶಯ ಕೋರಿದರು. ನಿಮ್ಮ ಗೆಲುವು ನಿಮ್ಮ ವಾರ್ಡಿನ ಜನರ ಗೆಲವು, ನಿಮ್ಮ ಮೇಲೆ ಜನ ವಿಶ್ವಾಸವಿಟ್ಟು ನಿಮ್ಮನ್ನು ಆಯ್ಕೆ ಮಾಡಿದ್ದಾರೆ. ಪ್ರಸ್ತುತ ರಾಜಕೀಯದಲ್ಲಿ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುವುದು ಅತ್ಯಂತ ಕಠಿಣವಾಗಿದೆ ಆದ್ದರಿಂದ ಈ ಕ್ಷಣದಿಂದಲೇ ಅದರ ಬಗ್ಗೆ ಮಾನಸಿಕವಾಗಿ ಸಿದ್ದರಾಗಿ ನಿಮ್ಮ ಗ್ರಾಮವನ್ನು ಕಲ್ಯಾಣ ಗ್ರಾಮ ಮಾಡುವ ಕನಸು ನನಸಾಗಿಸಿ ಎಂಬುದಾಗಿ ಅವರು ಕರೆನೀಡಿದರು.
ಅದೇರೀತಿ ಚುನಾವಣೆಯಲ್ಲಿ ಪರಾಭವಗೊಂಡವರು ಯಾವುದೇ ರೀತಿಯ ಚಿಂತೆಮಾಡಬೇಕಾಗಿಲ್ಲ. ತಮಗೆ ಮತನೀಡಿದವರಿಗೆ ಕೃತಜ್ಞತೆ ತಿಳಿಸಿ. ಸೋಲೇ ಗೆಲುವಿನ ಮೆಟ್ಟಿಲು ಎನ್ನುವುದನ್ನು ಮರೆಯಬೇಡಿ ಎಂದರು.
ಜಿಲ್ಲಾ ಪಂಚಾಯತಿ ಸದಸ್ಯರಾದ ಅಪ್ಪಯ್ಯ ಮಾತನಾಡಿ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಬೆಂಬಲಿತ ಅಭ್ಯರ್ಥಿಗಳು ನಿರೀಕ್ಷೆಗೂ ಮೀರಿ ಆಯ್ಕೆಯಾಗಿದ್ದಾರೆ ಇದರಿಂದ ಇನ್ನೂ ಹೆಚ್ಚಿನ ಕೆಲಸಗಳು ಮಾಡಲು ನನಗೆ ಬಲ ತುಂಬಿದ್ದೀರಿ, ಎಂದು ಮತದಾರರಿಗೆ ಧನ್ಯವಾದ ತಿಳಿಸಿದರು.
ತೂಬಗೆರೆ ಹೋಬಳಿ ಜೆ.ಡಿ.ಎಸ್ ಅಧ್ಯಕ್ಷ ದೇವರಾಜ್ ಆಕ್ರೋಶ: ದೇವನಹಳ್ಳಿ ವಿಧಾನಸಭಾ ವ್ಯಾಪ್ತಿಯ ತೂಬಗೆರೆ ಹೋಬಳಿ ಮುಖಂಡರನ್ನು ತಾಲ್ಲೂಕು ಜೆಡಿಎಸ್ ಅಧ್ಯಕ್ಷರು ನಿರ್ಲಕ್ಷಿಸಿದ್ದಾರೆ ,ಪಕ್ಷದ ಯಾವುದೇ ಅಧಿಕೃತ ಕಾರ್ಯಕ್ರಮಗಳಿಗೆ ಮುಖಂಡರನ್ನು ಆಹ್ವಾನಿಸುವುದಿಲ್ಲ ಕರಪತ್ರಗಳ್ಳಾಗಲಿ ,ಬ್ಯಾನರ್ ಗಳಲ್ಲಿ ನಮ್ಮ ಚಿತ್ರಗಳನ್ನು ಹಾಕುವುದಿಲ್ಲ ಎಂದು ಶಾಸಕರು ಮುಂದೆ ತೀವ್ರ ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ತೂಬಗೆರೆ ಹೋಬಳಿ ಜೆ.ಡಿ.ಎಸ್ ಮುಖಂಡರಾದ ಕುರುವಿಗೆರೆ ನರಸಿಂಹಯ್ಯ, ಗೌರೀಶ್,
ಯುವಜನತಾದಳದ ಪದಾಧಿಕಾರಿಗಳಾದ ಮುರುಳಿ, ಉದಯರಾಧ್ಯ ಮತ್ತಿತ್ತರು ಭಾಗವಹಿಸಿದ್ದರು.
ಗುರುಮೂರ್ತಿ ಬೂದಿಗೆರೆ