ಕರ್ನಾಟಕ ರಾಜ್ಯದಲ್ಲಿ ತುಮಕೂರು ಜಿಲ್ಲೆ ಸಹ ಕೊರೋನ ಹಾಟ್ ಸ್ಪಾಟ್ ಆಗಿದ್ದು. ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಕರೋನಾ ಸೋಂಕಿಗೆ ಒಳಗಾಗುತ್ತಿದ್ದಾರೆ. ದಿನ ದಿನ ಸಾವುಗಳು ಸಹ ಗಣನೀಯವಾಗಿ ಏರಿಕೆಯಾಗುತ್ತಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ತುಮಕೂರು ಮಹಾನಗರ ಪಾಲಿಕೆ ಏನೂ ಕಾಣದಂತೆ ಕುಳಿತಿದೆಯೋ ಎನ್ನುವಂತೆ ಕಾಣುತ್ತಿದೆ. ತುಮಕೂರು ಮಹಾನಗರ ಪಾಲಿಕೆಯ ಕಮಿಷನರ್, ಮೇಯರ್ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತುಮಕೂರು ನಗರದ 35 ವಾರ್ಡ್ ಗಳನ್ನ ಸ್ಯಾನಿಟೈಸ್ ಮಾಡಿದ್ದೇವೆ, ಮಾಡುತ್ತಿದ್ದೇವೆ ಎಂದು ತೋರ್ಪಡಿಕೆಗೆ ಅಷ್ಟೇ ಹೇಳುತ್ತಿರುವಂತೆ ಕಾಣುತ್ತಿದೆ. ಇನ್ನು ತುಮಕೂರು ನಗರದಲ್ಲಿ ಕೆಲ ಮುಂದುವರೆದ ಏರಿಯಾಗಳು ಹಾಗೂ ಉತ್ತಮ ಸ್ಥಿತಿಯಲ್ಲಿ ಇರುವಂತಹ ಬಡಾವಣೆಗಳು , ಮುಂಚೂಣಿ ನಾಯಕರು ಇರುವ ಬೆರಳೆಣಿಕೆಯಷ್ಟು ವಾರ್ಡ್ಗಳಲ್ಲಿ ಹಾಗೂ ಕೆಲ ಪ್ರಭಾವಿ ಮತ್ತು ಹಾಲಿ ಆಡಳಿತ ಪಕ್ಷದ ಕಾರ್ಪೊರೇಟರ್ ಗಳು ತಮ್ಮ ಪ್ರಭಾವ ಬೀರಿ ತಮ್ಮ ಮತ್ತು ಕೆಲವು ಏರಿಯಾಗಳನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಿಸುತ್ತಿದ್ದಾರೆ. ಇನ್ನು ಕೆಲ ಏರಿಯಾಗಳಲ್ಲಿ ಕೇವಲ ಮುಖ್ಯರಸ್ತೆಗಳಲ್ಲಿ ಮಾತ್ರ ತೋರ್ಪಡಿಕೆಗೆ ಸ್ಯಾನಿ ಟೈಸ್ ಮಾಡಿದ್ದಾರೆ. ಆದರೆ ಕೆಲ ಮಧ್ಯಮ ವರ್ಗದ ಜನರು ವಾಸಿಸುತ್ತಿರುವ , ಹಾಗೂ ಬಡ ವರ್ಗದ ಜನರು ವಾಸಿಸುತ್ತಿರುವ ಏರಿಯಾಗಳನ್ನು ಇದುವರೆಗೂ ಸ್ಯಾನಿಟೈಸ್ ಮಾಡದೆ ಸಂಪೂರ್ಣ ನಿರ್ಲಕ್ಷ ಮಾಡಿರುವುದಲ್ಲದೇ, ತಮ್ಮ ಲೆಕ್ಕ ಪುಸ್ತಕಗಳಲ್ಲಿ ಸ್ಯಾನಿಟೈಸ್ ಮಾಡಿರುವುದಾಗಿ ನಮೂದಿಸಲಾಗಿದೆಂದು ಆರೋಪಗಳು ಕೇಳಿ ಬರುತ್ತಿವೆ, ಏಕೆಂದರೆ ಇಂತಹ ಸಮಯದಲ್ಲಿ ತಮ್ಮ ಕಾರ್ಯವೈಖರಿಗಳನ್ನು ಪ್ರಶ್ನಿಸುವವರು ಯಾರು ಇಲ್ಲ ಎಂಬ ಮನಸ್ಥಿತಿಯಿಂದು ಈ ರೀತಿಯಾಗಿ ಮಾಡುತ್ತಿದ್ದಾರೆ. ಇನ್ನು ಪಾಲಿಕೆಯ ವತಿಯಿಂದ ನೀಡುತ್ತಿರುವ ಮಾಹಿತಿಯು ಕೇವಲ ತೋರ್ಪಡಿಕೆಗೆ ಮಾತ್ರ ಸೀಮಿತವಾಗಿದೆ ಎನ್ನುವಂತೆ ಕಾಣುತ್ತಿದೆ. ಇನ್ನೂ ಕೆಲ ಏರಿಯಾದಲ್ಲಿ ಸಣ್ಣ ಸಣ್ಣ ರಸ್ತೆಗಳಲ್ಲಿ ಹೆಚ್ಚು ಮನೆಗಳು ಇರುವಂತಹ ರಸ್ತೆಗಳನ್ನು ಬಿಟ್ಟು ಕೇವಲ ಒಂದೊಂದು ಏರಿಯಾದಲ್ಲಿ ಮುಖ್ಯ ರಸ್ತೆಗಳನ್ನು ಮಾತ್ರ ಸ್ಯಾನಿಟೈಸ್ ಮಾಡುತ್ತಾ ಎಲ್ಲರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದೆಯ ಎನ್ನುವ ಆಲೋಚನೆ ತುಮಕೂರು ನಗರದಾದ್ಯಂತ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಇನ್ನು ಕೆಲ ಏರಿಯಾದಲ್ಲಿ ಕಾರ್ಪೊರೇಟರ್ ಗಳು ಹೊರಗೆ ಬರಲು ಹೆದರಿ ಮನೆಯಿಂದ ಆಚೆ ಬರುತ್ತಿಲ್ಲ ಇನ್ನು ಕೆಲ ವಾರ್ಡಗಳಲ್ಲಿ ಕಾರ್ಪೊರೇಟರ್ ಗಳು ಮುಂಚೂಣಿಯಾಗಿ ನಿಂತು ತಮ್ಮ ತಮ್ಮ ವಾರ್ಡ್ ಗಳನ್ನು ಸ್ಯಾನಿಟೈಸ್ ಮಾಡುವ ಮೂಲಕ ರೋಗ ತಡೆಯುವಲ್ಲಿ ಮುಂಚೂಣಿ ಪಾತ್ರವಹಿಸುತ್ತಿದ್ದಾರೆ.
ಹಾಗಾದರೆ ಕೆಲ ಕಾರ್ಪೊರೇಟರ್ ಗಳು ಕೊರೋನಾಗೆ ಹೆದರಿದ್ದಾರೆಯೇ? ಆದ್ದರಿಂದ ಅಂತಹ ಕಾರ್ಪೊರೇಟರ್ ಗಳು ಮನೆಯಿಂದ ಆಚೆ ಬರೆದೆ ಮನೆಯಲ್ಲಿಯೇ ಸೇರಿಕೊಂಡು ತಾವಾಯಿತು ತಮ್ಮ ಕುಟುಂಬ ವಾಯಿತು ಯಾರಿಗೆ ಏನಾದರೆ ನಮಗೇನು ಎನ್ನುವಂತೆ ಕೆಲ ಸದಸ್ಯರು ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಸಂಶಯ ಮೂಡುತ್ತದೆ ಅಲ್ಲವೇ ಹೌದು ಇದು ನಿಜವಾದ ಸಂಗತಿ, ಇಂತಹ ಸಮಯದಲ್ಲಿ ಯಾರೂ ತಮ್ಮನ್ನು ಪ್ರಶ್ನಿಸುವುದಿಲ್ಲ ಎಂಬ ಕಠೋರ ಮನಸ್ಸು ಅವರದ್ದು. ಇನ್ನಾದರೂ ಮಧ್ಯಮ ವರ್ಗದವರು ಹಾಗೂ ಬಡ ಜನರು ವಾಸಿಸುತ್ತಿರುವ ಏರಿಯಾಗಳು ಸೇರಿದಂತೆ ಎಲ್ಲ ರಸ್ತೆಗಳನ್ನು ಕೂಡಲೇ ಸ್ಯಾನಿಟೈಸ್ ಮಾಡಲೇಬೇಕಾಗಿದೆ ಆದ್ದರಿಂದ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕಮಿಷನರ್ ಹಾಗೂ ಪಾಲಿಕೆಯ ಮೇಯರ್ ಗಮನಹರಿಸಿ ಪ್ರತಿ 35 ವಾರ್ಡ್ ಗಳನ್ನು ಕೂಡಲೇ ಸ್ಯಾನಿಟೈಜ್ ಮಾಡಿದ್ದಲ್ಲಿ ಮಾತ್ರ ಕೋರೋನ ತಡೆಯಲು ಸಾಧ್ಯವಾಗುತ್ತದೆ.
ತುಮಕೂರು ನಗರದಲ್ಲಿ ಪ್ರತಿದಿನ ಅತ್ಯಧಿಕ ಸೋಂಕಿತರು ಕಂಡು ಬರುತ್ತಿದ್ದಾರೆ ಇನ್ನಾದರೂ ಕಾಳಜಿ ವಹಿಸಿ ಔಷಧಿ ಸಿಂಪಡಣೆ ಮಾಡದಿದ್ದರೆ ಮುಂದೆ ಆಗುವ ಅನಾಹುತಕ್ಕೆ ತುಮಕೂರು ಮಹಾನಗರ ಪಾಲಿಕೆ ನೇರ ಹೊಣೆಯಾಗುತ್ತದೆ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ.