ಸ್ವಯಂಸೇವಕರಾಗಿ ಗೃಹ ರಕ್ಷಕರು ಕರ್ತವ್ಯ ಕಾರ್ಯವೈಕರಿ ಜನ ಮೆಚ್ಚುಗೆಯಾಗಿದೆ ತುಮಕೂರು ಜಿಲ್ಲೆಯಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಗೃಹ ರಕ್ಷಕರು ಚೆಕ್ ಪೋಸ್ಟ್ ಗಳಲ್ಲಿ ಗಡಿಭಾಗಗಳಲ್ಲಿ ತಮ್ಮ ಸ್ವಂತ ಖರ್ಚಿನಲ್ಲಿ ಸಾನಿ ಟೀಸರ್ ಮಾಸ್ಕ್ ಹಾಕಿಕೊಂಡು ಜನರಿಗೆ ಕೋರೋಣ ಜಾಗೃತಿ ಮೂಡಿಸಿದ ಜೊತೆಗೆ ರೋಗಿಗಳಿಗೆ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಆಸ್ಪತ್ರೆಗಳಲ್ಲಿ ತಮ್ಮ ಜೀವದ ಹಂಗನ್ನು ತೊರೆದು ಕೆಲಸವನ್ನು ಮಾಡುತ್ತಿರುವ ಗೃಹರಕ್ಷಕರ ಗೊಂದು ಸಲಾಂ ಜನರು ಪ್ರೀತಿಯಿಂದ ಅವರೊಂದಿಗೆ ವಿಶ್ವಾಸದಿಂದ ಮಾತನಾಡಿಸುತ್ತಾ ಹಾಗೂ ಚೆಕ್ಪೋಸ್ಟ್ ಗಳಲ್ಲಿ ಪೊಲೀಸರಿಗಿಂತ ಮುಂದೆ ನಿಂತು ಜನರೊಂದಿಗೆ ವಿಶ್ವಾಸ ಧೈರ್ಯ ತುಂಬುವುದರ ಜೊತೆಗೆ ಕೋರೋಣ ಮಹಾಮಾರಿ ತುಂಬಾ ಅಪಾಯಕಾರಿ ನೀವುಗಳು ತುಂಬಾ ಜಾಗೃತರಾಗಿ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ, ಸೋಶಿಯಲ್ ಡಿಸ್ಟೆನ್ಸ್ ಬಗ್ಗೆ ಜನರಿಗೆ ಪ್ರೀತಿಯಿಂದ ಹೇಳುವುದರ ಜೊತೆಗೆ ತಮ್ಮನ್ನು ಸ್ವಯಂಸೇವಕರಾಗಿ ಕರ್ತವ್ಯ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯ ಹಾಗೂ ಕೆಲವೊಂದು ಗೃಹರಕ್ಷಕರಿಗೆ ಕೊರೋನ ಪಾಸಿಟಿವ್ ಬಂದರು ಆತ್ಮಸ್ಥೈರ್ಯ ಕಳೆದುಕೊಳ್ಳದೇ ಕಾಯಿಲೆಯನ್ನು ಧೈರ್ಯದಿಂದ ಎದುರಿಸಿ ಮತ್ತೆ ಕರ್ತವ್ಯಕ್ಕೆ ಬಂದು ಕೆಲಸ ಮಾಡುತ್ತಿದ್ದಾರೆ ಹಾಗೂ ಜನಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇದಕ್ಕೆಲ್ಲ ಕಮಾಂಡೆಂಟ್ ಆರ್ ಪಾತಣ್ಣ ನವರು ಗೃಹರಕ್ಷಕ ರಲ್ಲಿ ಆತ್ಮಸ್ಥೈರ್ಯ ತುಂಬುವುದರ ಜೊತೆಗೆ ಇತರ ಇಲಾಖೆಗಳ ಜೊತೆ ಉತ್ತಮ ಒಡನಾಟ ಬೆಳೆಸಲು ಅವಿರತ ಶ್ರಮ ಪಡುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಗೃಹರಕ್ಷಕರಿಗೆ ಸಹ ಸುರಕ್ಷಾ ಸಾಧನೆಗಳನ್ನು ಈ ಸಮಯದಲ್ಲಿ ನೀಡಬೇಕಾಗಿದೆ. ಪೊಲೀಸ್ ಇಲಾಖೆ , ಟ್ರಾಫಿಕ್ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂತಹ ಗೃಹರಕ್ಷಕರಿಗೆ ಯಾವುದೇ ರೀತಿಯ ಸೇವಾ ಭದ್ರತೆ ಜೊತೆ ಆರೋಗ್ಯ ಕಾಳಜಿ ಬಗ್ಗೆ ಸಂಬಂಧಪಟ್ಟ ಇಲಾಖೆಗಳು ಗಮನಹರಿಸಬೇಕಾಗಿದೆ. ಕೊರೋನ ಸಂದರ್ಭದಲ್ಲಿ ತಮ್ಮ ಪ್ರಾಣದ ಹಂಗನ್ನು ತೊರೆದು ಈ ಸಮಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಗೃಹರಕ್ಷಕರಿಗೆ ನಮ್ಮ ವಿಜಯ ಭಾರತ ಬಳಗದಿಂದ ಗೃಹರಕ್ಷಕರಿಗೆ ಒಂದು ಸಲಾಂ……