ರಾಜ್ಯಾದ್ಯಂತ ಕೊರಾನಾ ಮಹಾಮಾರಿ ತನ್ನ ಕದಂಬವನ ವಿಸ್ತರಿಸಿಕೊಂಡು. ಸಮುದಾಯವನ್ನು ಎಡೆಬಿಡದೆ ಕಾಡುತ್ತಾ ಜನರನ್ನು ಭಯಭೀತಿ ಗೊಳಿಸಿ ಜನರ ನೆಮ್ಮದಿ, ಜೀವನ ಎಲ್ಲವನ್ನು ಕಸಿದುಕೊಂಡಿದೆ.
ಇನ್ನು ದೇಶ ಹಾಗೂ ರಾಜ್ಯದಲ್ಲಿ ದಿನದಿನ ಕೊರಾನಾ ಸೋಂಕಿತರು ಹೆಚ್ಚಾಗುತ್ತಿದ್ದು ಒಂದೆಡೆಯಾದರೆ ಮತ್ತೊಂದೆಡೆ ಕಳಪೆ ಕಾಮಗಾರಿಗಳು ಆರ್ಭಟಿಸುತ್ತದೆ. ಇನ್ನು ಲಾಕ್ಡೌನ್ ಸಮಯವನ್ನು ಅಚ್ಚುಕಟ್ಟಾಗಿ ಬಳಸಿಕೊಳ್ಳುತ್ತಿರುವ ಕೆಲ ಇಲಾಖೆಗಳು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಹಲವು ಕಾಮಗಾರಿಗಳನ್ನು ನಿರ್ವಹಿಸುತ್ತಿವೆ ಹಾಗೂ ಮತ್ತಷ್ಟು ಕಾಮಗಾರಿಗಳು ಮುಗಿದುಹೋಗಿವೆ. ಇನ್ನು ತಾವು ನಡೆದಿದ್ದೇ ದಾರಿ ಎಂದು ತಿಳಿದಿರುವ ಕೆಲ ಅಧಿಕಾರಿಗಳು ಇಂಜಿನಿಯರ್ ವರ್ಗದವರು ತಮಗೆ ಮನಸೋಇಚ್ಛೆ ಕಾಮಗಾರಿಗಳನ್ನು ನಿರ್ವಹಿಸುತ್ತಿದ್ದಾರೆ. ರಸ್ತೆ ,ಚರಂಡಿ, ಪೈಪ್ಲೈನ್ ಕಾಮಗಾರಿಗಳು ಸೇರಿದಂತೆ ಹಲವು ಕಾಮಗಾರಿಗಳನ್ನು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಸುತ್ತಿದ್ದು ಎಲ್ಲರಿಗೂ ಗೊತ್ತಿದೆ ಆದರೆ ತಾವು ನಡೆಸುತ್ತಿರುವ ಕಾಮಗಾರಿ ಯಾವ ಗುಣಮಟ್ಟದ್ದಾಗಿದೆ ಎಂದು ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ತಿಳಿಯದಂತಾಗಿದೆ. ತಾವು ಕಾರ್ಯನಿರ್ವಹಿಸುತ್ತಿರುವ ಕಾಮಗಾರಿಗಳು ಕಳಪೆ ಆಗಿರುವುದೇ ಇದಕ್ಕೆ ಸಾಕ್ಷಿ.
ಇನ್ನು ತುಮಕೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಅನೇಕ ಬಡಾವಣೆಗಳಲ್ಲಿ ಚರಂಡಿ ಕಾಮಗಾರಿಗಳನ್ನು ನಿರ್ವಹಿಸಿದ್ದಾರೆ ಆದರೆ ಅವುಗಳಿಗೆ ನೀರನ್ನು ಹಾಕುವ ಗೋಜಿಗೆ ಹೋಗದೆ ತೀರ ಬೇಜವಾಬ್ದಾರಿ ತೋರಿದ್ದಾರೆ. ತಾವು ನಿರ್ವಹಿಸಿರುವ ಕಾಮಗಾರಿಗಳು ನೀರನ್ನೇ ನೋಡದೆ ಬಡಕಲು ನಾಯಿಗಳಂತ ಪರಿಸ್ಥಿತಿ ಈ ಚರಂಡಿಗಳ ದಾಗಿದೆ. ಇಷ್ಟೆಲ್ಲಾ ಗೊತ್ತಿದ್ದರೂ ಸಹ ಇಂಜಿನಿಯರ್ಗಳು ಇತರೆ ಅಧಿಕಾರಿಗಳು ತಮಗೇನೂ ಕಾಣದಂತೆ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಉದಾಹರಣೆಗೆ ತುಮಕೂರು ಶಾಂತಿನಗರದ ಕಾವೇರಿ ಶಾಲೆ ಹಿಂಭಾಗದಲ್ಲಿ ನಿರ್ವಹಿಸಿರುವ ಚರಂಡಿ ಕಾಮಗಾರಿ ನೀರನ್ನೇ ನೋಡದೆ ಶುದ್ಧ ಬಿಳಿ ಬಣ್ಣಕ್ಕೆ ತಿರುಗಿದೆ, ಮರಳೂರು ಸರಸ್ವತಿಪುರಂ ಸೇರಿದಂತೆ ಹಲವು ಬಡಾವಣೆಗಳಲ್ಲಿ ಈ ತರಹದ ಸಮಸ್ಯೆ ಕಂಡು ಬಂದಿದ್ದರೂ ಸಹ ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಕುಳಿತಿದ್ದಾರೆ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನಹರಿಸಿ ಇಂಥ ಕಳಪೆ ಕಾಮಗಾರಿ ಗಳಿಗೆ ಕಡಿವಾಣ ಹಾಕಬೇಕಾಗಿದೆ ಸರ್ಕಾರದ ಹಣ ಪೋಲಾಗುವುದನ್ನು ತಡೆಯಬೇಕಾಗಿದೆ.