ಸಚಿವ ಜೆ ಸಿ ಮಾಧುಸ್ವಾಮಿ ಪದ ಬಳಕೆ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ.

 

 

ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದಂತಹ ಜೆ ಸಿ ಮಧುಸ್ವಾಮಿ ರವರು ತಮ್ಮ ನಾಲಿಗೆಯನ್ನು ಮತ್ತೆ ಹರಿದು ಬಿಡುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ. ಶುಕ್ರವಾರ ತುಮಕೂರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಉಸ್ತುವಾರಿ ಸಚಿವರ ಸಭೆಯ ನಂತರ ತುಮಕೂರು ಮಹಾನಗರ ಪಾಲಿಕೆಯ ಕೆಲ ಕಾರ್ಪೋರೇಟರ್ ಗಳು ಕೋವಿಡ್ ಸಂಬಂಧ ಸಚಿವ ಮಾಧುಸ್ವಾಮಿ ರವರಿಗೆ ಮನವಿ ಪತ್ರ ಸಲ್ಲಿಸಲು ಮುಂದಾದರು ಇದೇ ಸಮಯದಲ್ಲಿ ತುಮಕೂರು ಉಸ್ತುವಾರಿ ಸಚಿವರಾದಂತಹ ಮಾಧುಸ್ವಾಮಿ ರವರು ಮನವಿಪತ್ರ ಸ್ವೀಕರಿಸಿ ಮಾತನಾಡುತ್ತಾ ಕಾರ್ಪೊರೇಟರ್ ಒಬ್ಬರಿಗೆ ತೀರಾ ಕೆಳಮಟ್ಟದ ಭಾಷೆ ಪ್ರಯೋಗಿಸಿ ನಿನ್ನನ್ನು ಒದ್ದು ಒಳಗೆ ಹಾಕಿಸುವೆ ಎಂದು ಪದಪ್ರಯೋಗ ಮಾಡಿ ಸಾರ್ವಜನಿಕ ವಲಯದಿಂದ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

 

ತಾವು ಕೂಡ ಒಬ್ಬ ಜನಪ್ರತಿನಿಧಿ ಹಾಗೂ ಜವಾಬ್ದಾರಿಯುತ ಸಚಿವರಾಗಿ ಮತ್ತೊಬ್ಬ ಜನಪ್ರತಿನಿಧಿಯಾದ ಕಾರ್ಪೊರೇಟರ್ ಒಬ್ಬರಿಗೆ ಅವರು ಬಳಸಿದ ಪದ ನಿಜಕ್ಕೂ ಬೇಸರದ ಸಂಗತಿ.

 

ಸಚಿವ ಮಾಧುಸ್ವಾಮಿ ರವರ ಪದ ಬಳಕೆಯಿಂದ ಆಕ್ರೋಶಗೊಂಡ ಜೆಡಿಎಸ್ ಕಾರ್ಯಕರ್ತರು ಹಾಗೂ ಜೆಡಿಎಸ್ ಮಹಾನಗರಪಾಲಿಕೆಯ ಜೆಡಿಎಸ್ ಸದಸ್ಯರಾದ ಮಂಜುನಾಥ್ ಹಾಗೂ ಇತರೆ  ಸದಸ್ಯರು ಕೂಡ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಧರಣಿ ನಡೆಸುವ ಮೂಲಕ ತಮ್ಮ ಆಕ್ರೋಶವನ್ನು ಹೊರಹಾಕಿದರು. ಇನ್ನು ಧರಣಿ ನಿರತ ಕಾರ್ಪೊರೇಟರ್ ನನ್ನ ಸಮಾಧಾನಪಡಿಸಲು ತುಮಕೂರು ತಾಸಿಲ್ದಾರ್ ಮೋಹನ್ ಕುಮಾರ್ ಅಸಿಸ್ಟೆಂಟ್ ಕಮಿಷನರ್ ಅಜಯ್ ಸೇರಿದಂತೆ ವಿವಿಧ ಠಾಣೆಯ ಪೊಲೀಸರು ಹರಸಾಹಸ ಪಡುವ ಘಟನೆಗೆ ನೆನ್ನೆ ತುಮಕೂರು ಸಾಕ್ಷಿಯಾಯಿತು.

 

ಇನ್ನು ಘಟನೆಗೆ ಸಂಬಂಧಿಸಿದಂತೆ ಪತ್ರಕರ್ತರಿಗೆ ಪ್ರತಿಕ್ರಿಯಿಸಿದ ತುಮಕೂರು ಮಹಾನಗರ ಪಾಲಿಕೆಯ ಕಾರ್ಪೊರೇಟರ್ ಮಂಜುನಾಥರವರು ಸಚಿವ ಮಾದ ಸ್ವಾಮಿಯವರ ಪದಬಳಕೆ ಸರಿಯಲ್ಲ ಕೂಡಲೇ ಅವರು ಜವಾಬ್ದಾರಿಯುತ ಸ್ಥಾನದಲ್ಲಿದ್ದು ಅವರು ತಮ್ಮ ನಾಲಿಗೆಯನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಒಬ್ಬ ಜನಪ್ರತಿನಿಧಿ ಹಾಗೂ ಜವಾಬ್ದಾರಿಯುತ ಸಚಿವರಾಗಿ ಈ ತರಹದ ನಡೆ ಸರಿಯಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

 

ಅದೇನೇ ಇರಲಿ ಸಚಿವರಾದವರು ಎಲ್ಲರನ್ನು ಒಗ್ಗೂಡಿಸಿಕೊಂಡು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಡೆದು ಕೊಳ್ಳಬೇಕಾಗಿತ್ತು ಆದರೆ ತಾವು ಕೂಡ ಜನಪ್ರತಿನಿಧಿಯಾಗಿ ಮತ್ತೊಬ್ಬ ಜನಪ್ರತಿನಿಧಿಯ ಬಗ್ಗೆ ತೀರ ಹಗುರವಾಗಿ ಮಾತನಾಡಿರುವುದು ಒಳ್ಳೆಯ ಸಂಗತಿಯಲ್ಲ ಎಂದು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!