ರೈತರು ದೇಶದ ಬೆನ್ನೆಲುಬು ಅವರ ರಕ್ಷಣೆ ನಮ್ಮೆಲ್ಲರದ್ದು -ಎಚ್ ಡಿ ಕುಮಾರಸ್ವಾಮಿ

 

 

ಬೀದರ್-  ರೈತರಿಗೆ ಆತ್ಮಸ್ಥೈರ್ಯ ತುಂಬುವ ದೃಷ್ಟಿಯಿಂದ ರೈತರ ಸಾಲಮನ್ನಾ ಮಾಡುವ ಬಗ್ಗೆ ಕಳೆದ ಚುನಾವಣೆಯಲ್ಲಿ ಘೋಷಣೆ ಮಾಡಿದ್ವಿ. ಅದರಂತೆ ಸಮ್ಮಿಶ್ರ ಸರ್ಕಾರದಲ್ಲಿ ರೈತರ ಸಾಲಮನ್ನಾ ಮಾಡಿದ್ವಿ ಎಂದು ಮಾಜಿ ಮುಖ್ಯಮಂತ್ರಿಗಳು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ಹೇಳಿದರು.

ಜಿಲ್ಲೆಯ ಬಸವಕಲ್ಯಾಣದ ವರ್ಷಾ ಪಂಕ್ಷನ್ ಹಾಲ್ ನಲ್ಲಿ ಜೆಡಿಎಸ್ ಬೆಂಬಲಿಸಿ ಗೊಂಡ ಸಮಾಜ ನಡೆಸಿದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬಸವಕಲ್ಯಾಣ ತಾಲೂಕಿನಲ್ಲಿ 19 ಸಾವಿರ ಕುಟುಂಬಗಳಿಗೆ ಸಾಲಮನ್ನಾವಾಗಿದೆ. ಯಾರು ರೈತರ ಪರವಾಗಿ ಕೆಲಸ ಮಾಡ್ತಾರೆ ಅವರನ್ನು ಆಯ್ಕೆ ಮಾಡಿ ಎಂದು ಮನವಿ ಮಾಡಿದರು.

ನಮ್ಮ ಕಾರ್ಯಕ್ರಮ ರೈತರ ಸಾಲಮನ್ನಾ ಮಾತ್ರ ಅಲ್ಲ ನೀರಾವರಿ ಯೋಜನೆಗಳನ್ನು ಹಾಕೊಂಡಿದ್ವಿ. ಆದ್ರೆ ಬಿಜೆಪಿ ಸರ್ಕಾರ ಬಂದ ಬಳಿಕ ಅನೇಕ ಕಾರ್ಯಕ್ರಮಗಳನ್ನು ನಿಲ್ಲಿಸಿದ್ದಾರೆ. ಬಸವಕಲ್ಯಾಣದ ರಸ್ತೆ ಕಾಮಗಾರಿಗಳಿಗೆ ಸುಮಾರು ಐವತ್ತು ಕೋಟಿ ಅನುದಾನ ನೀಡಿದ್ವಿ ಈಗ ಆ ಕೆಲಸಗಳನ್ನು ನಿಲ್ಲಿಸಿದ್ದಾರೆ‌ ಎಂದು ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ ಮಾತನಾಡಿ, ದೇವೇಗೌಡರು ನೀರಾವರಿ ಇಲಾಖೆಗೆ ಬಹಳಷ್ಟು ಅನುದಾನ ನೀಡಿದ್ದರು. ರಾಜ್ಯಕ್ಕೆ & ರಾಷ್ಟ್ರಕ್ಕೆ ಅವರ ಕೊಡುಗೆ ಅಪಾರವಾಗಿದೆ. ದೇವೇಗೌಡರು ಕಟ್ಟಿ ಬೆಳೆಸಿದ ಪಕ್ಷದಿಂದ ಸ್ಪರ್ಧಿಸಿರುವ ಖಾದ್ರಿ ಸಾಹೇಬರಿಗೆ ಈ ಚುನಾವಣೆಯಲ್ಲಿ ಮತ ನೀಡುವ ಮೂಲಕ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಇದೇ ವೇಳೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, ರೈತರ ಪಕ್ಷ ಜೆಡಿಎಸ್ ಪಕ್ಷವಾಗಿದೆ. ಇಂತಹ ಪಕ್ಷಕ್ಕೆ ನಮ್ಮ ಗೊಂಡ ಕುರುಬ ಸಮುದಾಯದ ಮತ ನೀಡಬೇಕಾಗಿದೆ. ಈ ಪಕ್ಷದಿಂದ ನಾನು ಎರಡು ಭಾರಿ ಸಚಿವನಾಗಿದ್ದೇನೆ. ಕುಮಾರಸ್ವಾಮಿ ಅವರು ಬಂದು ಬಸವಕಲ್ಯಾಣದಲ್ಲಿ ಠಿಕಾಣಿ ಹುಡಿದ್ದಾರೆ. ಇಂತಹ ಸಂದರ್ಭಗಳಲ್ಲಿ ನಾನು ಬೀದರ್ ನಲ್ಲಿ ಕೂಡಲು ಆಗಲ್ಲ. ನಾನು ಕೂಡ ಬಸವಕಲ್ಯಾಣದಲ್ಲಿ ಠಿಕಾಣಿ ಹುಡಿದ್ದಿನಿ. ಆಗಾಗಿ ಗೊಂಡ ಸಮಾಜದ ಬಂಧುಗಳು ನಮ್ಮ ಪಕ್ಷಕ್ಕೆ ಮತ ನೀಡುವ ಮೂಲಕ ಖಾದ್ರಿ ಸಾಹೇಬ್ರನ್ನ ಗೆಲ್ಲಿಸಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರಮೇಶ್ ಗೌಡ, ಅಭ್ಯರ್ಥಿ ಸೈಯದ್ ಯಸ್ರಬ್ ಅಲಿ ಖಾದ್ರಿ, ನಾರಾಯಣ ರಾಂಪೂರೆ, ಬಂಡೆಪ್ಪ, ತುಕ್ಕರಾಮ್ ಮೇತ್ರಿ, ರಾಜು, ಆನಂದ್ ಪಾಟೀಲ್, ಆಕಾಶ ಪಾಟೀಲ್, ಸತೀಶ್ ಸೇರಿದಂತೆ ಜೆಡಿಎಸ್ ನಾಯಕರು, ಗೊಂಡ ಸಮಾಜದ ಮುಖಂಡರು ಇದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!