ಹುಬ್ಬಳ್ಳಿ- ಯಾವುದೆ ಕರ್ತವ್ಯ ನಿರ್ವಹಿಸಲಿ ಅಲ್ಲಿ ಮಾನವೀಯತೆ ಇರುವುದು ಮುಖ್ಯ. ಅದರಲ್ಲಿಯೇ ಪೊಲೀಸರು ಎಂದರೆ ಬೇರೆಯದ್ದೆ ವಿಷಯ ಬಿಡಿ. ಅವರನ್ನ ಅನೇಕರು ನೋಡುವ ದೃಷ್ಟಿಕೋನವೆ ಬೇರೆ. ಆದರೆ ಇಲ್ಲಿ ಕೆಲ ಟ್ರಾಫಿಕ್ ಪೊಲೀಸರು ಸೇರಿಕೊಂಡು ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಮಾನವೀಯತೆಗೆ ಸಾಕ್ಷಿಯಾಗಿದ್ದಾರೆ…
ಹೌದು,,, ನಿನ್ನೆ ಮಳೆ ಮತ್ತು ಗಾಳಿಯಾದ ಕಾರಣ ಇಲ್ಲೊಬ್ಬ ವ್ಯಕ್ತಿ ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಮುಂಭಾಗದಲ್ಲಿ ಮಳೆಯಲ್ಲಿ ಬಿದ್ದು, ತೀವ್ರವಾಗಿ ಗಾಯಗೊಂಡು ಒದ್ದಾಡುತ್ತಿದ್ದ, ಇದನ್ನು ಕಂಡ ಹುಬ್ಬಳ್ಳಿಯ ಪೂರ್ವ ಸಂಚಾರಿ ಠಾಣೆಯ ಪಿಎಸ್ಐ ಶರಣ ದೇಸಾಯಿ, ಸಿಬ್ಬಂದಿಗಳಾದ ಸೋಮಶೇಖರ ಮೇತ್ರಿ, ಮಲ್ಲಿಕಾರ್ಜುನ ಶಿರೆನ್ನವರ, ಚೆನ್ನಪ್ಪಗೌಡ್ರ, ಶಂಭು ರೆಡ್ಡಿ ಎಲ್ಲರೂ ಸೇರಿಕೊಂಡು ಆಟೋದಲ್ಲಿ ಹತ್ತಿಸಿ, ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಿದ್ದಾರೆ.
ಕೆಸರಿನಲ್ಲಿಯೇ ಹೊರಳಾಡುತ್ತಿದ್ದ ವ್ಯಕ್ತಿಯನ್ನು ನೋಡಿಯೂ ನೋಡದಂತೆ ಹೋಗುತ್ತಿದ್ದ ಸಾರ್ವಜನಿಕರ ನಡುವೆ, ಪೊಲೀಸರು ಮಾನವೀಯತೆ ಮೆರೆದಿದ್ದು, ಎಲ್ಲರಲ್ಲೂ ಖುಷಿಯನ್ನ ಮೂಡಿಸಿತು. ಪ್ರತಿದಿನ ಸಾರ್ವಜನಿಕರಿಗೆ ಎಲೆಮರೆ ಕಾಯಿಯಂತೆ ಕಾರ್ಯನಿರ್ವಹಿಸುವ ಪೊಲೀಸರು ನಮ್ಮ ನಿಮ್ಮ ನಡುವೆ ಇದ್ದಾರೆ. ಪಿಎಸ್ಐ ಶರಣ ದೇಸಾಯಿಯವರ ತಂಡ ಮಾಡಿದ ಇಂದಿನ ಕೆಲಸ ಎಲ್ಲರೂ ಮೆಚ್ಚುವಂತದ್ದು…..