ಕರ್ನಾಟಕ ರಾಜ್ಯ ಸರ್ಕಾರಿ ಸಾರಿಗೆ ನೌಕರರ ನಡೆಸುತ್ತಿರುವ ಮುಷ್ಕರವನ್ನು ಹತ್ತಿಕ್ಕುವ ಸಲುವಾಗಿ ಸರ್ಕಾರ ನಾನಾ ತಂತ್ರಗಳನ್ನು ಅನುಸರಿಸುವ ಮೂಲಕ ಪ್ರತಿಭಟನೆಯನ್ನು ಮೊಟಕುಗೊಳಿಸುವ ಪ್ರಯತ್ನ ನಡೆಸುತ್ತಿದ್ದು.
ರಾಜ್ಯದ ಹಲವು ಸಾರಿಗೆ ನಿಗಮ-ಮಂಡಳಿಗಳಿಗೆ ಸರ್ಕಾರ ವರ್ಗಾವಣೆ ಮಾಡುವ ಮೂಲಕ ನೌಕರರಿಗೆ ಶಾಕ್ ನೀಡಿದೆ.
ಒಂದು ಕಡೆ ಸರ್ಕಾರ ಮತ್ತು ನೌಕರರು ಪಟ್ಟು ಸಡಿಲಿಸದೆ ಇರುವುದೇ ಸಮಸ್ಯೆಗೆ ಕಾರಣವಾಗಿದೆ. ಇನ್ನು ಸಾಲುಸಾಲು ರಜೆಗಳ ನಡುವೆ ರಾಜ್ಯಾದ್ಯಂತ ಸಾರ್ವಜನಿಕರು ತಮ್ಮ ಊರುಗಳತ್ತ ತೆರಳಲು ಹರಸಾಹಸಪಡುತ್ತಿದ್ದಾರೆ. ಒಂದೆಡೆ ಖಾಸಗಿ ಬಸ್ ಗಳ ಸಂಚಾರ ನಡೆಸುತ್ತಿವೆ ಆದರೆ ಯುಗಾದಿ ಹಬ್ಬದ ಪ್ರಯುಕ್ತ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯಧಾನಿ ಸೇರಿದಂತೆ ವಿವಿಧ ಜಿಲ್ಲೆಗಳಿಂದ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ. ಆದರೆ ಇವೆಲ್ಲವುಗಳನ್ನು ಗಣನೆಗೆ ತೆಗೆದುಕೊಂಡಿರುವ ಸರ್ಕಾರ ಏನಾದರೂ ಮಾಡಿ ನೌಕರರ ಪ್ರತಿಭಟನೆ ಹತ್ತಿಕ್ಕುವ ಸಲುವಾಗಿ ನೆನ್ನೆ ಪ್ರತಿಭಟನೆಯೇ ಮಾಡದೆ ಇರುವ ಹಾಗೆ ಸುತ್ತೋಲೆ ಹೊರಡಿಸಿದ್ದು. ಇಂದು ಸಾರಿಗೆ ನೌಕರರನ್ನು ವರ್ಗಾವಣೆ ಮಾಡುವ ಮೂಲಕ ಮತ್ತೊಂದು ಹೆಜ್ಜೆ ಇಡುವ ಮೂಲಕ ಸಾರಿಗೆ ನೌಕರರನ್ನು ದಮನ ಮಾಡುವ ತಂತ್ರ ಅನುಸರಿಸುತ್ತಿದೆ ಇದಕ್ಕೆ ರಾಜ್ಯಾದ್ಯಂತ ಸಾರ್ವಜನಿಕ ವಲಯದಲ್ಲಿ ಕೂಡ ಅಪಸ್ವರ ಕೇಳಿಬಂದಿದ್ದು. ಒಟ್ಟಾರೆಯಾಗಿ ಸಾರ್ವಜನಿಕರು ಇವರಿಬ್ಬರ ಮಧ್ಯೆ ಸಿಲುಕಿ ನಾಲ್ಕುದಿನಗಳಿಂದ ಕೆಲಸಕಾರ್ಯಗಳಿಗೆ ತೆರಳುವ ಜನರಿಗೆ ತೊಂದರೆ ಉಂಟಾಗಿ ಸರ್ವಜನಿಕರು ಹೈರಾಣಾಗಿದ್ದಾರೆ.
ಇನ್ನಾದರೂ ಸರ್ಕಾರ ಕೂಡಲೇ ಎಚ್ಚೆತ್ತು ಪರಿಸ್ಥಿತಿ ಕೈಮೀರುವ ಮುನ್ನ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.