ತುಮಕೂರು ಸ್ಮಾರ್ಟ್‌ಸಿಟಿ ವತಿಯಿಂದ ಕೋತಿತೋಪು ಮುಖಾಂತರ ಬೆಳಗುಂಬ ರಸ್ತೆಯವರೆಗೂ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದು, ರಸ್ತೆ ಅಗಲೀಕರಣ ಮಾಡುವ ದೃಷ್ಟಿಯಿಂದ ಎನ್.ಆರ್.ಕಾಲೋನಿಯ ಶ್ರೀ ದುರ್ಗಮ್ಮ ದೇವಿಯ ಮುಖ್ಯದ್ವಾರ ತೆರೆವುಗೊಳಿಸುವುದರಿಂದ ಸ್ಥಳಿಯ ಜನರು ತಮ್ಮ ಭಾವನೆಗಳಿಗೆ ಧಕ್ಕೆಯಾಗಿದೆ ಎಂದು ಅಸಮಧಾನ ವ್ಯಕ್ತಪಡಿಸಿ, ಶಾಸಕರಿಗೆ ಮನವಿ ಸಲ್ಲಿಸಿದ್ದರು. ಇದರ ಬಗ್ಗೆ ಮಾಹಿತಿ ಪಡೆದ ತುಮಕೂರು ನಗರ ಶಾಸಕರು ಅತೀ ಶೀಘ್ರದಲ್ಲೇ ಮುಖ್ಯದ್ವಾರ ಪುನರ್ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದ್ದು, ಕೊಟ್ಟ ಮಾತಿನಂತೆ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ರವರು ಎನ್.ಆರ್.ಕಾಲೋನಿಯ ಶ್ರೀ ದುರ್ಗಮ್ಮ ದೇವಿಯ ಮುಖ್ಯದ್ವಾರ ಮರು ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ, ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ನಗರದ ಶ್ರೀ ಕೋಡಿಬಸವೇಶ್ವರ ದೇವಾಲಯದ ಮುಂದಿರುವ ಶತಮಾನಕ್ಕೂ ಹಿಂದಿನ ಪುರಾತನ ಕಾಲದಿಂದಲೂ ಇಲ್ಲಿ ನೆಲೆಗೊಂಡಿರುವ (ಹರಿಜನರ ಕುಲದೇವತೆ) ಆದಿಶಕ್ತಿ ದುರ್ಗಮ್ಮ ದೇವಿಯ ದೇವಾಲಯ ಸ್ಥಾಪನೆಗೊಂಡಿದ್ದು, ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬರುತ್ತಿದ್ದ ಜಮೀನಿನ ವಿಸ್ತೀರ್ಣವನ್ನು ಗುರಿತಿಸಿ, ಈಗಾಗಲೇ ಒತ್ತುವರಿ ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ದ ಕ್ರಮ ಕೈಗೊಂಡು ದುರ್ಗಮ್ಮ ದೇವಾಲಯದ ಜೀರ್ಣೋದ್ದಾರ, ಮಾದಿಗ ಜನಾಂಗದ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಗೆ ಮೀಸಲು ಇಡಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು, ಸರ್ಕಾರದ ಹಂತದಲ್ಲಿ ಈ ಸಮಸ್ಯೆಯನ್ನು ಬಗೆಹರಿಸಲು ಶ್ರಮವಹಿಸಲಾಗುತ್ತಿದೆ ಎಂದು ಶಾಸಕರು ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಶ್ರೀ ದುರ್ಗಮ್ಮ ದೇವಿಯ ಮುಖ್ಯದ್ವಾರದ ಕಾಮಗಾರಿಯನ್ನು ತುಮಕೂರು ಮಹಾನಗರಪಾಲಿಕೆಯ ನಿಧಿಯಿಂದ ಅವಶ್ಯಕವಿರುವ ಮೊತ್ತದಲ್ಲಿ ನಿರ್ಮಿತಿ ಕೇಂದ್ರ ಸಂಸ್ಥೆಯ ಮುಖಾಂತರ ಶೀಘ್ರವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು. ಆisಣಡಿiಛಿಣ ಒiಟಿiಟಿg ಈuಟಿಜ ನ ನಿಧಿಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ರೂ.12.00 ಲಕ್ಷಗಳ ವೆಚ್ಚದಲ್ಲಿ ಸ್ಥಳೀಯರ ಅನುಕೂಲವಾಗುವಂತ ಸ್ಥಳದಲ್ಲಿ ಶೀಘ್ರದಲ್ಲಿ ನಿರ್ಮಿಸಲಾಗುವುದು. ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಎನ್.ಆರ್ ಕಾಲೋನಿ 1ನೇ ಕ್ರಾಸ್‌ನಲ್ಲಿ ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸುಮಾರು 6.00 ಲಕ್ಷಗಳನ್ನು ನೀಡಲಾಗಿದೆ ಎಂದರು.
ಎನ್.ಆರ್.ಕಾಲೋನಿಯ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ಸುಮಾರು 4.00 ಕೋಟಿ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ ಹಾಗೂ ಎನ್.ಆರ್.ಕಾಲೋನಿ, ಅಂಬೇಡ್ಕರ್ ಕಾಲೋನಿ, ನಿರ್ವಾಣಿ ಲೇಔಟ್ ನಲ್ಲಿ ರಸ್ತೆ ಮತ್ತು ಚರಂಡಿ ಅಭಿವೃದ್ಧಿ ಕಾಮಗಾರಿಗೆ ಸರ್ಕಾರಕ್ಕೆ ರೂ.1.00 ಕೋಟಿಯ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎನ್.ಆರ್.ಕಾಲೋನಿಯ ಸ್ಥಳೀಯರು ಶಾಸಕರಲ್ಲಿ ಹಕ್ಕುಪತ್ರ ನೀಡುವಂತೆ ಮನವಿ ಮಾಡಿದರು. ಈ ಬಗ್ಗೆ ಸ್ಥಳ ಪರಿಶೀಲನೆ ಹಾಗೂ ಪಂಚನಾಮೆ ಮಾಡಿ ಅರ್ಹರಿಗೆ ಹಕ್ಕು ಪತ್ರವನ್ನು ನೀಡುವಂತೆ ಮಹಾನಗರಪಾಲಿಕೆ ಆಯುಕ್ತರಾದ ರೇಣುಕಾ ರವರಿಗೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಮಹಾಪೌರರಾದ ಬಿ.ಜಿ ಕೃಷ್ಣಪ್ಪ, ಉಪಮಹಾಪೌರರಾದ ನಾಜೀಮಾ ಬೀ, ಪಾಲಿಕೆ ಸದಸ್ಯರಾದ ಶ್ರೀನಿವಾಸ್, ರೂಪ ಶೆಟ್ಟಳ್ಳಯ್ಯ, ಮಾಜಿ ಶಾಸಕರಾದ ಗಂಗಹನುಮಯ್ಯ, ನಿವೃತ್ತ ಡಿ.ಡಿ.ಪಿ.ಯು ಕೆ.ದೊರೈರಾಜು, ಮಾಜಿ ನಗರಸಭಾ ಸದಸ್ಯರಾದ ಚಂದ್ರಯ್ಯ, ಶ್ರೀ ದುರ್ಗಮ್ಮ ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ನರಸಿಂಹಮೂರ್ತಿ, ಟಿ.ಕೆ.ನರಸಿಂಹಮೂರ್ತಿ, ಜಯಮೂರ್ತಿ, ಕಿರಣ್, ಎನ್.ರಾಜಣ್ಣ, ನಾರಾಯಣಪ್ಪ, ಗಂಗಾಧರ್, ಜಯಣ್ಣ, ಲೋಕೇಶ್ ಹಾಗೂ ಮುಂತಾದ ಎನ್.ಆರ್ ಕಾಲೋನಿಯ ಸ್ಥಳೀಯರು ಪಾಲ್ಗೊಂಡಿದ್ದರು.