ಸಮುದಾಯದ ಉನ್ನತಿಕರಣ ಹಾಗೂ ಸಮುದಾಯದ ಏಳಿಗೆಗೆ ಇಂದು ಶಿಕ್ಷಣ ಬಹುಮುಖ್ಯವಾದದ್ದು ಹಾಗಾಗಿ ಎಲ್ಲರೂ ಕೂಡ ಶಿಕ್ಷಣದಿಂದ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗಿದೆ. ಹಾಗಾಗಿ ಪ್ರತಿಯೊಬ್ಬ ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ಉತ್ತಮ ರೀತಿಯಲ್ಲಿ ಪಡೆಯಬೇಕಾಗಿದೆ . ಎಂದು ಜಿಲ್ಲಾ ಅಲ್ಪಸಂಖ್ಯಾತರ ಇಲಾಖೆ ಅಧಿಕಾರಿ ಶಬ್ಬಿರಹಮ್ಮದ್ ತಿಳಿಸಿದರು.
ತುಮಕೂರು ನಗರದ ಪೂರ್ ಹೌಸ್ ಕಾಲೋನಿಯಲ್ಲಿರುವ ಅಲ್ ಫುರ್ಖನ್ ಮದರಸದ ವತಿಯಿಂದ ಶಾಲೆಬಿಟ್ಟ ಮಕ್ಕಳನ್ನು ಹಾಗೂ ವಿದ್ಯಾರ್ಥಿನಿಯರನ್ನು ಗುರುತಿಸಿ ಅವರಿಗೆ ಉತ್ತಮ ಶಿಕ್ಷಣವನ್ನು ನೀಡಿ ವೃತ್ತಿಪರ ತರಬೇತಿ ಹಾಗೂ ವೃತ್ತಿಪರ ಶಿಕ್ಷಣವನ್ನು ನೀಡಲು ಅನೇಕ ಕಾರ್ಯಕ್ರಮಗಳನ್ನು ರೂಪಿಸಿ ಹಲವು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣವನ್ನು ಒದಗಿಸುತ್ತಿದ್ದು. ಹಾಗೂ ಶಾಲೆಬಿಟ್ಟ ಮಕ್ಕಳನ್ನು ಮುಖ್ಯವಾಹಿನಿಗೆ ತಂದಿರುವ ಹೆಗ್ಗಳಿಗೆ ಅಲ್ ಫರ್ಖನ್ ಮದರಸಗೆ ಸಲ್ಲುತ್ತದೆ .ಅದರಂತೆ ಸಂಸ್ಥೆಯ ವತಿಯಿಂದ ಉತ್ತಮ ವಿದ್ಯಾಭ್ಯಾಸ ಮಾಡಿ ವೃತ್ತಿಪರ ಶಿಕ್ಷಣಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭವನ್ನು ಸಂಸ್ಥೆಯ ವತಿಯಿಂದ ನಡೆಸಲಾಯಿತು
ಕಾರ್ಯಕ್ರಮದಲ್ಲಿ ಅಲ್ ಫರ್ಖಾನ್ ಸಂಸ್ಥೆಯ ಅಧ್ಯಕ್ಷರಾದ ಮಹಮ್ಮದ್ ಯೂಸುಫ್, ಮಾಜಿ ವಕ್ ಬೋರ್ಡ್ ಅಧ್ಯಕ್ಷರಾದ ಮುಸ್ತಾಕ್ ಅಹ್ಮದ್, ಮೌಲಾನಾ ಶೇಕ್ ಮೊಹಮ್ಮದ್ ಕಾಝಿ, ಕಾರ್ಪೊರೇಟರ್ ನೂರುನ್ನಿಸ, ಮಾಜಿ ಕಾರ್ಪೊರೇಟರ್ ನದೀಮ್, ಸಮಾಜ ಸೇವಕ ಮೊಹಮ್ಮದ್ ಉಬೇದುಲ್ಲಾ, ವಕ್ ಬೋರ್ಡ್ ಸದಸ್ಯ ಶೇಕ್ ಗೌಸ್ ಪಾಷಾ ಸೇರಿದಂತೆ ಇತರರು ಭಾಗವಹಿಸಿದ್ದರು.