ಕೊರೋನ ಎರಡನೇ ಅಲೆ ಶುರುವಾಗುತ್ತಿದ್ದಂತೆ ರಾಜ್ಯದ್ಯಂತ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗುತ್ತಿದೆ. ರಾಜ್ಯದ ಪ್ರತಿ ಜಿಲ್ಲೆಗಳಲ್ಲೂ ಸಹ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಇಷ್ಟು ದಿನಗಳ ಕಾಲ ಕೊಂಚ ಬಿಡುವು ನೀಡಿದ್ದ ಕಾರಣ ಸೋಂಕು ಮತ್ತೆ ಉಲ್ಬಣಗೊಂಡಿದ್ದು ರಾಜ್ಯಾದ್ಯಂತ ಸಾರ್ವಜನಿಕರನ್ನು ಆತಂಕಕ್ಕೀಡುಮಾಡಿದೆ. ಸರ್ಕಾರ ಹಾಗೂ ಇಲಾಖೆಗಳು ಎಷ್ಟೇ ಪ್ರಯತ್ನ ಪಟ್ಟರು ಕೊರನ ಸೋಂಕಿತರು ದಿನದಿನ ಹೆಚ್ಚಾಗುತ್ತಿದ್ದಾರೆ. ಅದರಂತೆ ತುಮಕೂರು ಜಿಲ್ಲೆಯನ್ನು ಸಹ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು ಕಳೆದ ಎಂಟು ದಿನಗಳಲ್ಲಿ 1250ಕ್ಕೂ ಹೆಚ್ಚು ಸೋಂಕಿತರು ಕಂಡುಬಂದಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸಾಮಾಜಿಕ ಅಂತರ, ಮಾಸ್ಕ ಬಳಕೆ ಮಾಡುವ ಬಗ್ಗೆ ಎಷ್ಟೇ ಮಾಹಿತಿ ನೀಡಿದರು ಸಾರ್ವಜನಿಕರು ನಿರ್ಲಕ್ಷಕ್ಕೆ ಕೊರನ ಸೋಂಕು ಹೆಚ್ಚಳವಾಗಿರುವದಕ್ಕೆ ಕಾರಣವಾಗಿದೆ.
ಇನ್ನು ರಾಜ್ಯದ 8 ಜಿಲ್ಲೆಗಳಲ್ಲಿ ನಾಳೆಯಿಂದ ನೈಟ್ ಕರ್ಫ್ಯೂ ಜಾರಿಯಾಗುತ್ತಿದೆ ತುಮಕೂರು ಜಿಲ್ಲೆಯಲ್ಲೂ ಸಹ ನಾಳೆಯಿಂದ ನೈಟ್ ಕರ್ಫ್ಯೂ ಜಾರಿಯಾಗಲಿದ್ದು ಏಪ್ರಿಲ್ ಇಪ್ಪತ್ತರವರೆಗು ನೈಟ್ ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಮುಖ್ಯಮಂತ್ರಿಗಳು ತಿಳಿಸಿದ್ದಾರೆ ಆದರೆ ರಾತ್ರಿವೇಳೆಯಲ್ಲಿ ನೈಟ್ ಕರ್ಫ್ಯೂ ಮಾಡುವುದರಿಂದ ಎಷ್ಟರಮಟ್ಟಿಗೆ ಪರಿಣಾಮಕಾರಿಯಾಗುವುದು ಎಂದು ಕಾದುನೋಡಬೇಕಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ನಡೆಯುತ್ತಿದೆ.