ಕಲ್ಲು ಗಣಿಗಾರಿಕೆಗೆ ಗ್ರೀನ್ ಸಿಗ್ನಲ್! – ನಿರ್ಮಾಣ ಚಟುವಟಿಕೆಗೆ ತೊಂದರೆ ಇಲ್ಲ – ಮನೆ ಮಾಡುವವರಿಗೆ ಕಡಿಮೆ ದರದಲ್ಲಿ ಮರಳು?

 

ಬೆಂಗಳೂರು

: ಶಿವಮೊಗ್ಗ ಹಾಗೂ ಚಿಕ್ಕಬಳ್ಳಾಪುರ ಸ್ಫೋಟ ಪ್ರಕರಣದ ಬಳಿಕ ಸ್ಥಗಿತಗೊಂಡಿರುವ ಕಲ್ಲು ಗಣಿಗಾರಿಕೆ ಪುನಾರಂಭಕ್ಕೆ ಅನುಮತಿ ನೀಡಲು ರಾಜ್ಯ ಸರಕಾರ ನಿರ್ಧರಿಸಿದೆ. ಎಲ್ಲಾ ರೀತಿಯ ಕಾನೂನು ಪ್ರಕ್ರಿಯೆ ಬಳಿಕ ಇದೀಗ ಎಲ್ಲಾ ಕಡೆ ಕಲ್ಲು ಗಣಿ ಶುರುವಾಗಲಿದೆ. ಈ ಮೂಲಕ ಕಲ್ಲು ನಂಬಿ ಬದುಕುವ ಕುಟುಂಬಕ್ಕೆ ಹೊಸ ಭರವಸೆ ಮೂಡಿದೆ.

ಸ್ಫೋಟಕ ವಸ್ತು ಬಳಸಲು ಗಣಿ ಸಂಸ್ಥೆಗಳಿಗೆ 90 ದಿನದೊಳಗೆ ಪರವಾನಗಿ ಕೊಡಲು ಸರಕಾರ ತೀರ್ಮಾನ ಕೈಗೊಳ್ಳಲಾಗಿದೆ.

ಗಣಿ, ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಮಾತನಾಡಿ,ಶಿವಮೊಗ್ಗದ ಹುಣಸೋಡು ಹಾಗೂ ಚಿಕ್ಕಬಳ್ಳಾಪುರ ಹಿರೇನಾಗವಲ್ಲಿ ಘಟನೆ ಬಳಿಕ ಗಣಿ ಉದ್ಯಮ ನಷ್ಟದಲ್ಲಿದೆ. ಇದರಿಂದ 300 ಕೋಟಿ ರೂ ನಷ್ಟವಾಗಿದೆ. ಬೊಕ್ಕಸಕ್ಕೆ ಬರುವ ಆದಾಯದಲ್ಲೂ ಖೋತಾ ಆಗಿದೆ. ಕಟ್ಟಡ, ಕಾಮಗಾರಿ ಸೇರಿ ಅಭಿವೃದ್ಧಿ ಕಾರ್ಯ ಮುಂದುವರಿಸಲು ಕಚ್ಚಾ ವಸ್ತು ಸಿಗುತ್ತಿಲ್ಲ. ಹೊರರಾಜ್ಯಗಳಿಂದ ದುಬಾರಿ ಬೆಲೆಗೆ ತರಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಜಲ್ಲಿ ಕ್ರಷರ್ ಉದ್ಯಮ ಪುನಃ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ. “ಗಣಿ ಮತ್ತು ಕ್ರಷರ್ ಉದ್ಯಮದಲ್ಲಿ ಸ್ಫೋಟಕ ಬಳಕೆ ಅನಿವಾರ್ಯ ಈ ಉದ್ಯಮ ನಡೆಸುವ ಮಾಲೀಕರು ಷರತ್ತು ಪತ್ರಕ್ಕೆ ಸಹಿ ಹಾಕಬೇಕು.ಗಣಿ ಉದ್ಯಮ ಹೊಂದಿರುವವರು ಕಾರ್ಯರಂಭ ಮಾಡಬಹುದು. ಇದಕ್ಕೆ ಪರವಾನಾಗಿ ನೀಡುವಾಗ ಅಗತ್ಯ ಷರತ್ತು, ನಿಬಂಧನೆ ವಿಧಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು. ಗಣಿ ಉದ್ಯಮ ಪುನಾರಂಭ ಸಂಬಂಧ ಈಗಾಗಲೇ ಸಿಎಂ ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗಿದೆ. ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.

ಉದ್ಯೋಗ ನಷ್ಟ!: ಗಣಿ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಕಾರ್ಮಿಕರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ನಿರುದ್ಯೋಗ ಪ್ರಮಾಣವೂ ಹೆಚ್ಚುತ್ತಿದೆ. ರಾಜ್ಯದಲ್ಲಿ ಸುಮಾರು 2,500ಕ್ಕೂ ಹೆಚ್ಚು ಕಲ್ಲು ಕ್ವಾರಿ ಗಣಿಗಳಿವೆ. ಈ ಪೈಕಿ ಶೇ.10 ರಷ್ಟು ಉದ್ದಿಮೆದಾರರು ಮಾತ್ರ ಲೈಸೆನ್ಸ್ ಪಡೆದುಕೊಂಡಿದ್ದಾರೆ. 2 ಕೆಜಿ ವರೆಗೆ ಸ್ಫೋಟಕ ಬಳಸಲು ಕಾಯಿದೆಯಲ್ಲಿ ಅವಕಾಶವಿದೆ. 5 ಎಕರೆಗಿಂತ ಕಡಿಮೆ ಜಮೀನುನಲ್ಲಿ ಗಣಿಗಾರಿಕೆ ಮಾಡುವವರಿಗೆ (ಡಿಜಿಎಂಎಸ್ ) ಪರವಾನಗಿ ಕಡ್ಡಾಯಗೊಳಿಸಬಾರದು. ಎಂದು ಮನವಿ ಮಾಡಿಕೊಂಡಿದ್ದಾರೆ. ಕೈಗೆಟಕುವ ದರದಲ್ಲಿ ಮರಳು!: ಶೀಘ್ರದಲ್ಲೇ ಹೊಸ ಗಣಿಗಾರಿಕೆ ನೀತಿ ಜಾರಿಗೆ ಬರಲಿದೆ. 10 ಲಕ್ಷ ರೂ ಒಳಗೆ ಮನೆ ನಿರ್ಮಿಸುವವರಿಗೆ ಕೈಗೆಟುಕುವ ದರದಲ್ಲಿ ಮರಳು ದೊರಕುವಂತೆ ನೀತಿಯಲ್ಲಿ ಈ ಅಂಶ ಅಡಕವಾಗಿರಲಿದೆ.

ಏ.17 ರಿಂದ ಏ 21ರವರೆಗೆ ಗಣಿ ಅದಾಲತ್:ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹರಿಸಲು ಏ.17 ರಿಂದ ಜೂ.21ರವರೆಗೆ ರಾಜ್ಯದ 5 ವಿಭಾಗಗಳಲ್ಲಿ ಗಣಿ ಆದಾಲಾತ್ ನಡೆಸಲಾಗುವುದು. ಏ. 17 ರಂದು ಬೆಂಗಳೂರಿನಲ್ಲಿ ಈ ಆದಾಲತ್ಗೆ ಚಾಲನೆ ನೀಡಲಾಗುವುದು ಎಂದಿದ್ದಾರೆ.

ಮರಳು ಕ್ವಾರೆ ಅಕ್ರಮ ತಡೆಯಲು ಹೊಸ ನಿಯಮ ತರಲು ಕೂಡ ಸಿದ್ಧತೆ ನಡೆಸಲು ತೀರ್ಮಾನಿಸಲಾಗಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!