ಮೈಸೂರು
ನೆನ್ನೆ ಬೈಕ್ ಸವಾರ ಕೆಳಗೆ ಬಿದ್ದು ಹಿಂಬದಿಯಿಂದ ಲಾರಿ ಹರಿದು ಸಾವಿಗೀಡಾಗಿರುವ ಘಟನೆ ನಗರದ ಹಿನಕಲ್ ರಿಂಗ್ ರಸ್ತೆಯಲ್ಲಿ ನಡೆದಿತ್ತು,
ಘಟನೆ ನಡೆದ ಬೆನ್ನಿಗೇ ಸಾರ್ವಜನಿಕರು ಪೊಲೀಸರನ್ನು ಹಿಡಿದು ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು ಪೊಲೀಸರ ಮೇಲೆ ಹಲ್ಲೆ ಮಾಡಿ ವಾಹನವನ್ನು ಬ್ಯಾರಿಕೇಡ್‌ನಿಂದ ಹಾನಿಗೊಳಿಸಲಾಗಿತ್ತು
ಆದರೆ ನೆನ್ನೆ ಅಪಘಾತಕ್ಕೆ ಒಳಗಾದ ವ್ಯಕ್ತಿಯ ಬೈಕ್ ನಲ್ಲಿ ಕುಳಿತ್ತಿದ್ದ ಸ್ನೇಹಿತ ತಪ್ಪು ಯಾರದ್ದು ಎಂದು ಸ್ಪಷ್ಟ ಪಡಿಸಿದ್ದಾರೆ..
ನಾನು ನನ್ನ ಸ್ನೇಹಿತ ಹಿನಕಲ್ ರಿಂಗ್ ರಸ್ತೆಯಲ್ಲಿ ಬೈಕ್ನಲ್ಲಿ ಸಂಚರಿಸುತ್ತಿದ್ದೇವು.100 ಮೀಟರ್ ಅಂತರದಲ್ಲಿ
ವಿವಿ ಪುರಂ ಸಂಚಾರಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ನಾವಿಬ್ಬರೂ ಸಹ ಹೆಲ್ಮೆಟ್ ಹಾಕಿದ್ದೇವು. ಹಿಂಬದಿಯಿಂದ ವೇಗವಾಗಿ ಬಂದ ಟಿಪ್ಪರ್ ಲಾರಿ ನಮ್ಮ ಬೈಕ್ ಗೆ ಗುದ್ದಿದೆ. ನಂತರ ನಾವು ಬೈಕ್ ನಿಂದ ಕೆಳಗೆ ಬಿದ್ದೇವು.ನನ್ನ ಸ್ನೇಹಿತನಿಗೆ ವಾಹನ ಹರಿದು ಬಿಟ್ಟು ಚಿಂತಾಜನಕವಾಗಿದೆ ಎಂದು ತಿಳಿಸಿದರು. ಆಗ ನನಗೆ ಪ್ರಜ್ಞೆ ತಪ್ಪಿತ್ತು.ಅಲ್ಲೇ ಇದ್ದ ಪೋಲೀಸರು ಓಡಿ ಬಂದು ನನ್ನನ್ನ ಗರುಡ ವಾಹನದಲ್ಲಿ ಕುಳಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.ನಾವಿಬ್ಬರು ಹೆಲ್ಮೆಟ್ ಧರಿಸಿಯೇ ವಾಹನ ಚಲಾಯಿಸುತ್ತಿದ್ದೇವು.ಈ ಘಟನೆಗೂ ಪೋಲೀಸರಿಗೂ ಯಾವುದೇ ಸಂಬಂಧವಿಲ್ಲ.ಅವರು ನಮ್ಮನ್ನ ತಪಾಸಣೆ ಮಾಡಿಲ್ಲ.ರಭಸವಾಗಿ ಬಂದ ಲಾರಿ ಚಾಲಕ ಕಂಟ್ರೋಲ್ ಮಾಡಲಾಗದೇ ನಮ್ಮ ಬೈಕಿಗೆ ಗುದ್ದಿದ್ದಾನೆ ಎಂದು ಹಿಂಬದಿ ಸವಾರ ಸ್ಪಷ್ಟಪಡಿಸಿದ್ದಾರೆ.