ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ನಾಳೆ ಎಂಇಎಸ್ ಹಾಗೂ ಶಿವಸೇನೆ ಗುಂಡಗಳು ಕನ್ನಡಿಗರ ಮೇಲೆ ನಡೆಸುತ್ತಿರುವ ದಬ್ಬಾಳಿಕೆ ಹಾಗೂ ಕನ್ನಡ ವಿರೋಧಿ ನಡೆಗೆ ಸಂಬಂಧಿಸಿದಂತೆ ಪದೇಪದೇ ಎಂಇಎಸ್ ಕಾರ್ಯಕರ್ತರು ಹಾಗೂ ಶಿವಸೇನೆ ಪುಂಡರು ಕನ್ನಡಿಗರ ಮೇಲೆ ಕನ್ನಡ ವಿರೋಧಿ ನೀತಿಗಳನ್ನು ಅನುಸರಿಸಿ ಹಿಂಸಿಸುತ್ತಿರುವ ಕ್ರಮವನ್ನು ಖಂಡಿಸಿ ಗುರುವಾರ ಬೆಳಗಾವಿ ಮುಖಾಂತರ ಮಹಾರಾಷ್ಟ್ರ ಗಡಿ ಪ್ರವೇಶಿಸಿ ಕನ್ನಡಿಗರ ಪ್ರದರ್ಶನ ಮಾಡಲಿದ್ದೇವೆ ಎಂದು ತಿಳಿಸಿದರು.
ಕನ್ನಡದ ಬಾವುಟ ಹಾಗೂ ಕನ್ನಡದ ಶಾಲನ್ನು ಹಾಕಿಕೊಂಡು ಬರುವ ಪ್ರತಿಯೊಬ್ಬರನ್ನು ಕಂಡಲ್ಲಿ ಬಡಿಯಿರಿ ಎಂದು ಉದ್ಧಟತನ ತೋರಿಸುತ್ತಿರುವ ಕನ್ನಡ ಹಾಗೂ ಕನ್ನಡಿಗರ ವಿರೋಧಿ ಎಂಇಎಸ್ ಹಾಗೂ ಶಿವಸೇನೆ ಗೆ ಎಚ್ಚರಿಕೆಯ ಸಂದೇಶ ನೀಡುವ ಸಲುವಾಗಿ ಕರವೇಯಿಂದ ಗುರುವಾರ ರಾಜ್ಯಾದ್ಯಂತ ಕರವೇ ಕಾರ್ಯಕರ್ತರು ನಾಳೆ ಮಹಾರಾಷ್ಟ್ರ ಗಡಿ ಪ್ರವೇಶಿಸಲಿದ್ದೇವೆ ಎಂದರು.
ಇನ್ನು ಸಭೆಯಲ್ಲಿ ಮಾತನಾಡಿದ ಕರವೇ ತುಮಕೂರು ಜಿಲ್ಲಾಧ್ಯಕ್ಷರಾದ ಡಮರುಗೇಶ್ ಮಾತನಾಡಿ ಕನ್ನಡಿಗರು ಎಂದಿಗೂ ಸ್ವಾಭಿಮಾನಿಗಳು ಕನ್ನಡ ನಾಡು-ನುಡಿಗೆ ಧಕ್ಕೆ ಬಂದರೆ ನಾವು ಸಹಿಸಲಾಗುವುದಿಲ್ಲ ಹಾಗಾಗಿ ಎಂಎಸ್ ಹಾಗೂ ಶಿವಸೇನೆ ಪದೇಪದೇ ಕನ್ನಡಿಗರಿಗೆ ತೊಂದರೆ ನೀಡಿದರೆ ನಾವು ಸಹಿಸುವುದಿಲ್ಲ ಅದಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಶಾಸ್ತಿಮಾಡುತ್ತೇವೆ ಎಂದರು.ಇಂದಿನ ರಾಜಕಾರಣಿಗಳು ಕೇವಲ ಮತಕ್ಕಾಗಿ ಜನರನ್ನು ಬಳಸಿಕೊಳ್ಳುತ್ತಿದ್ದು ಕನ್ನಡಿಗರ ರಕ್ಷಣೆಗೆ ಮುಂದಾಗದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಇನ್ನಾದರೂ ಎಂಇಎಸ್ ಪುಂಡಾಟಿಕೆ ನಿಲ್ಲಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದರು. ಮಹಾರಾಷ್ಟ್ರ ಮುಖ್ಯಮಂತ್ರಿ ಸಹ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು ಹಾಗೂ ತುಮಕೂರು ಜಿಲ್ಲೆಯಲ್ಲಿ ಕರವೇ ಸಂಘಟನೆ ಬಲಿಷ್ಠವಾಗಿದ್ದು ಜಿಲ್ಲೆಯಾದ್ಯಂತ ಪಕ್ಷವನ್ನು ಸಂಘಟಿಸಲು ನಿರಂತರ ಪ್ರಯತ್ನ ಮುಂದುವರಿಸಲಿದ್ದೇವೆ ಎಂದರು. ಸಭೆಯಲ್ಲಿ ವಿವಿಧ ಘಟಕದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರಗಳನ್ನು ನೀಡಲಾಯಿತು. ಸಭೆಯಲ್ಲಿ ರಾಜ್ಯ ಘಟಕದ ರವಿ, ತುಮಕೂರು ನಗರ ಅಧ್ಯಕ್ಷ ಸುನಿಲ್, ಉಪಾಧ್ಯಕ್ಷ ಉಮೇಶ್, ಲೋಕೇಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.