ಮೈಸೂರು
ಕನ್ನಡ ಒಕ್ಕೂಟದ ಅಧ್ಯಕ್ಷರಾದ ಶ್ರೀ ವಾಟಾಳ್ ನಾಗರಾಜ್ ರವರು ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದರು.
ಕೆ ಆರ್ ಎಸ್ ನಲ್ಲಿ ಪ್ರತಿಭಟನೆ ನಡೆಸಿದ ಅವರು ತಮಿಳುನಾಡು ಸರ್ಕಾರ ಅಕ್ರಮವಾಗಿ ಕಾವೇರಿ ನದಿಗೆ ತಮಿಳುನಾಡಿನ ಎರಡು ನದಿಗಳು ಜೋಡಣೆ ಮಾಡಿರುವುದು ಅಪರಾಧ…
ಕೇಂದ್ರ ಸರ್ಕಾರ ತಮಿಳುನಾಡಿಗೆ ಆರ್ಥಿಕ ನೆರವು ನೀಡಿರುವುದು ಸರಿಯಿಲ್ಲ. ಪ್ರಧಾನ ಮಂತ್ರಿಯವರು ,ರಾಜ್ಯದ ಮುಖ್ಯಮಂತ್ರಿಯವರು , ಪಳನಿ ಸ್ವಾಮಿಯವರು ರಾಜಿನಾಮೆ ಕೊಡಲೇಬೇಕು.
ಮುಂದಿನ ದಿನಗಳಲ್ಲಿ ತೀವ್ರ ಹೋರಾಟ ಹಾಗೂ 20-03-2021 ರಂದು ವುಡ್ ಲ್ಯಾಂಡ್ ಹೋಟೆಲ್ ನಲ್ಲಿ ಕನ್ನಡ ಪರ ಸಂಘಟನೆಗಳ ಸಭೆ ಕರೆಯಲಾಗಿದೆ.
ಈ ಪ್ರತಿಭಟನೆಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳು ಭಾಗವಹಿಸಿದರು…