ನಾಳೆಯ ಸಿ .ಎಂ ಕಾರ್ಯಕ್ರಮದಲ್ಲಿ ಕಪ್ಪು ಬಟ್ಟೆ ಪ್ರದರ್ಶನ ವಾಪಸ್ ಪಡೆದ ಶಾಸಕ ಸುರೇಶ್ ಗೌಡ.

ತುಮಕೂರು – ಎನ್‌ಡಿಎ ಮೈತ್ರಿಕೂಟದ ಶಾಸಕರಿಗೆ ವಿಶೇಷ ಅನುದಾನದಲ್ಲಿ ಅನುದಾನ ನೀಡದೆ ಇರುವ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದ ಶಾಸಕ ಬಿ ಸುರೇಶ್ ಗೌಡ .ಡಿಸೆಂಬರ್ ಎರಡರಂದು ಕರೆ ನೀಡಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದ್ದ ಎನ್ ಡಿ ಎ ಶಾಸಕರ ಪ್ರತಿಭಟನೆಯನ್ನು ವಾಪಸ್ ಪಡೆದಿರುವುದುದಾಗಿ ಶಾಸಕ ಬಿ ಸುರೇಶ್ ಗೌಡ ತಿಳಿಸಿದ್ದಾರೆ.

ಪ್ರತಿಭಟನೆ ವಾಪಸ್ ಪಡೆಯುವ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿರುವ ಅವರು ನಮ್ಮ ಮನವಿಗೆ ಗೃಹ ಸಚಿವರಾದ ಡಾ. ಜಿ ಪರಮೇಶ್ವರ್ ಅವರು ಸ್ಪಂದಿಸಿದ ಹಿನ್ನಲೆಯಲ್ಲಿ ನಾಳೆ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯನ್ನು ವಾಪಸ್ ಪಡೆದು ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ನಾವೇಲ್ಲರೂ ಭಾಗಿಯಾಗುವುದಾಗಿ ತಿಳಿಸಿದ್ದಾರೆ.ಗ್ರಾಮಾಂತರ ಕ್ಷೇತ್ರದ ಹಲವು ಕಾಮಗಾರಿಗಳಿಗೆ ಹಣ ಬಿಡುಗಡೆ ಮಾಡಲು ಕೋರಲಾಗಿತ್ತು ಇದರ ಜೊತೆಗೆ ತುಮಕೂರು ವಿಶ್ವವಿದ್ಯ ನಿಲಯದ ಕ್ಯಾಂಪಸ್ಗೆ ರಸ್ತೆ ನಿರ್ಮಾಣ ಸೇರಿದಂತೆ ಲಿಫ್ಟ್ ಇರಿಗೇಶನ್ ನಲ್ಲಿರುವ ಲೋಪಗಳನ್ನು ಸರಿಪಡಿಸಲು ಅನುದಾನ ಕೋರಲಾಗಿತ್ತು ಈ ಸಂಬಂಧ ನಾನು ಸೇರಿದಂತೆ ಎನ್ ಡಿ ಎ ಮೈತ್ರಿಕೂಟದ ಶಾಸಕರು ಪತ್ರಿಕಾಗೋಷ್ಠಿ ನಡೆಸಿ ಪ್ರತಿಭಟನೆ ಮಾಡಿ ಕಪ್ಪು ಬಟ್ಟೆ ಪ್ರದರ್ಶನ ಮಾಡುವ ಬಗ್ಗೆ ಮಾಹಿತಿ ನೀಡಿದ್ದೆವು. ಆದರೆ ನಮ್ಮ ಹೋರಾಟದ ಹಿನ್ನೆಲೆಯಲ್ಲಿ ಗೃಹ ಸಚಿವರಾದ ಡಾಕ್ಟರ್ ಜಿ ಪರಮೇಶ್ವರ್ ಅವರು ನಮ್ಮ ಮನವಿಗೆ ಸ್ಪಂದಿಸಿದ ಹಿನ್ನೆಲೆ ನಾವು ಕರೆ ನೀಡಿದ್ದ ಕಪ್ಪು ಬಟ್ಟೆ ಪ್ರದರ್ಶನವನ್ನು ಹಿಂಪಡೆದಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ನಮ್ಮ ಮನವಿಗೆ ಸ್ಪಂದಿಸಿರುವ ಗೃಹ ಸಚಿವರು ವಿರೋಧ ಪಕ್ಷವನ್ನ ಹೊರತುಪಡಿಸಿ ರಾಜ್ಯದ ಸರ್ವತೋಮುಖ ಏಳಿಗೆಗಾಗಿ ಅನುದಾನ ಕೊಡಿಸುವ ಬಗ್ಗೆ ಮಾಹಿತಿ ನೀಡಿದ್ದಾರೆ.ರಾಜಕೀಯ ಕ್ಷೇತ್ರದಲ್ಲಿ ಹೋರಾಟ ಅನಿವಾರ್ಯ ಸರ್ಕಾರದ ನ್ಯೂನತೆಗಳನ್ನು ತೋರ್ಪಡಿಸುವುದು ವಿರೋಧ ಪಕ್ಷದ ಕೆಲಸ ಅದರಂತೆ ನಾವು ಸಹ ಪ್ರತಿಭಟನೆಗೆ ಮುಂದಾಗಿದ್ದೆವು.ಆಡಿಯೋ ವಿಚಾರಕ್ಕೆ ಸ್ಪಷ್ಟನೆ. ಹೋರಾಟದ ಕಿಚ್ಚು ಹಚ್ಚಿಸುವ ಹಿನ್ನೆಲೆಯಲ್ಲಿ ಕಾರ್ಯಕರ್ತರೊಂದಿಗೆ ಮಾತನಾಡಿರುವ ಆಡಿಯೋ ನನ್ನದೇ ಇನ್ನೂ ನಾನು ಮತದಾರರಿಗೆ ಆಮಿಷ ಒಡ್ಡಿಲ್ಲ ಬದಲಾಗಿ ಕ್ಷೇತ್ರಕ್ಕೆ ಅನುದಾನ ಕೇಳಿದ್ದೇನೆ ಎಂದರು.

Leave a Reply

Your email address will not be published. Required fields are marked *