ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು.ಪೋಷಕರ ಆಕ್ರಂದನ.

ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ಸಾವು.ಪೋಷಕರ ಆಕ್ರಂದನ.

 

 

ತುಮಕೂರು _ವಸತಿ ಶಾಲೆಯಲ್ಲಿ ವಿದ್ಯಾರ್ಥಿ ನಿಗೂಢ ವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ.

 

 

 

 

ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಬಜನಹಳ್ಳಿ ಬಳಿಯ ಏಕಲವ್ಯ ವಸತಿ ಶಾಲೆಯಲ್ಲಿ ಘಟನೆ ನಡೆದಿದ್ದು ಮೃತ ಪಟ್ಟ ವಿದ್ಯಾರ್ಥಿಯನ್ನು ಕೊರಟಗೆರೆ ತಾಲ್ಲೂಕು ಶಕುನಿ ತಿಮ್ಮನಹಳ್ಳಿಯ ಅಭಿಲಾಷ್ (13) ಎಂದು ಗುರುತಿಸಲಾಗಿದೆ.

 

 

 

ದೀಪಾವಳಿ ಹಬ್ಬದ ಆಚರಣೆಗೆ ರಜೆ ಇದ್ದ ಕಾರಣ ವಿದ್ಯಾರ್ಥಿ ಮನೆಗೆ ತೆರಳಿ ಹಬ್ಬ ಮುಗಿಸಿ ಸೋಮವಾರ ಬೆಳಗ್ಗೆ ವಸತಿ ಶಾಲೆಗೆ ವಾಪಸಾಗಿದ್ದ ವಿದ್ಯಾರ್ಥಿ ಸಂಜೆ ನಿಗೂಢ ರೀತಿಯಲ್ಲಿ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ.

 

 

 

 

ಘಟನೆ ನಡೆದ ಬೆನ್ನಲ್ಲೇ ವಿದ್ಯಾರ್ಥಿ ಶವ ತುಮಕೂರಿಗೆ ರವಾನಿಸಲಾಗಿದೆ.ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸಹ ವಸತಿ ಶಾಲೆಗೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ.

 

 

 

 

 

 

ವಿದ್ಯಾರ್ಥಿ ಸಾವಿಗೆ ಸಾಕಷ್ಟು ಅನುಮಾನ ವ್ಯಕ್ತವಾಗಿದ್ದು ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

 

 

 

 

 

ಶಾಲೆಯಲ್ಲಿ ನಿರ್ಲಕ್ಷ್ಯ.

 

ಮೃತಪಟ್ಟ ವಿದ್ಯಾರ್ಥಿ ಅಭಿಲಾಶ್ ಮಧ್ಯಾಹ್ನ ಆರೋಗ್ಯ ಸರಿ ಇಲ್ಲ ಎಂದು ಶಾಲೆಯಲ್ಲಿ ತಿಳಿಸಿದರು ಸಹ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ಸೇರಿಸದೆ ನಿರ್ಲಕ್ಷ ವಹಿಸಿದ್ದಾರೆ ಪೋಷಕರ ಆರೋಪ.

 

 

 

 

ವಸತಿ ಶಾಲೆಯಲ್ಲಿ ಯಾವುದೇ ಮೂಲಭೂತ ಸೌಕರ್ಯಗಳು ಹಾಗೂ ಸಿಸಿಟಿವಿ ಇಲ್ಲದ ಕಾರಣ ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ದೊಡ್ಡ ಹುನ್ನಾರವನ್ನು ನಡೆಸಿದ್ದಾರೆ. ಶವಗಾರಕ್ಕೆ ಮೃತ ದೇಹವನ್ನು ಸಾಗಿಸಿರುವ ಅಧಿಕಾರಿಗಳು ಇದುವರೆಗೂ ಯಾರು ಭೇಟಿ ನೀಡಿಲ್ಲ, ಗೃಹ ಸಚಿವರ ಸ್ವ ಕ್ಷೇತ್ರದಲ್ಲಿ ಸಾರ್ವಜನಿಕರಿಗೆ ರಕ್ಷಣೆ ಇಲ್ಲದಂತಾಗಿದೆ, ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರು ಸಹ ಯಾರು  ಸ್ಥಳಕ್ಕೆ ಭೇಟಿ ನೀಡಿಲ್ಲ ಗೃಹ ಸಚಿವರ ಸ್ವ ಕ್ಷೇತ್ರದಲ್ಲಿ ಇಂತಹ ಘಟನೆ ನಡೆದಿದ್ದು ಅವರಿಗೆ ಕೆಟ್ಟ ಹೆಸರು ಬರುತ್ತದೆ ಎಂದು ಅಧಿಕಾರಿಗಳು ಪ್ರಕರಣವನ್ನು ಮುಚ್ಚಿ ಹಾಕಲು ಮುಂದಾಗಿದ್ದಾರೆ ಎಂದು ಪೋಷಕರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

 

 

 

ಪ್ರತಿಭಟನೆಗೆ ಸಜ್ಜು.

 

 

ಶವ ಪರೀಕ್ಷೆ ನಂತರ ವಸತಿ ಶಾಲೆಯ ಮುಂದೆ ಶವ ಇಟ್ಟು ನ್ಯಾಯ ಸಿಗುವವರೆಗೂ ಪ್ರತಿಭಟನೆ ಮಾಡಲು ಮುಂದಾಗಿರುವುದಾಗಿ ಪೋಷಕರು ತಿಳಿಸಿದ್ದಾರೆ.

 

 

 

 

 

 

 

ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ

Leave a Reply

Your email address will not be published. Required fields are marked *

You cannot copy content of this page

error: Content is protected !!