ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾದ ಕರಪತ್ರ, ಚರ್ಚೆಗೆ ಗ್ರಾಸವಾದ ವಿಷಯ ಏನು ಗೊತ್ತೇ….???

ಜಿಲ್ಲೆಯಲ್ಲಿ ಚರ್ಚೆಗೆ ಗ್ರಾಸವಾದ ಕರಪತ್ರ, ಚರ್ಚೆಗೆ ಗ್ರಾಸವಾದ ವಿಷಯ ಏನು ಗೊತ್ತೇ….???

 

 

ತುಮಕೂರು _ ಜಿಲ್ಲೆಯ ತುರುವೇಕೆರೆ ತಾಲೂಕಿನಲ್ಲಿ ಕೆಲ ಖಾಸಗಿ ಸಂಘ ಸಂಸ್ಥೆಗಳು ಹಮ್ಮಿಕೊಂಡಿರುವ ಖಾಸಗಿ ಕಾರ್ಯಕ್ರಮದ ಚರ್ಚಾ ಸ್ಪರ್ಧೆಯ ವಿಷಯ ತುಮಕೂರು ಜಿಲ್ಲೆಯ ದಲಿತ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ.

 

 

 

 

 

ತುರುವೇಕೆರೆಯ ಕೆಲವು ಸಂಘ ಸಂಸ್ಥೆಗಳು ಹಾಗೂ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳ ಸಂಯುಕ್ತಾಕ್ಷರದಲ್ಲಿ ಇದೇ ತಿಂಗಳ 26ರಂದು ತುರುವೇಕೆರೆ ಪಟ್ಟಣದ ಪದವಿ ಪೂರ್ವ ಕಾಲೇಜು ಒಂದರಲ್ಲಿ ಕಾರ್ಗಿಲ್ ವಿಜಯ ದಿವಸ ಆಚರಣೆ ಹಾಗೂ ಸ್ವಾತಂತ್ರ್ಯ ಯೋಧ ಸಿ ಡಿ ರಾಮಸ್ವಾಮಿ ಸ್ಮಾರಕ ಚರ್ಚಾ ಸ್ಪರ್ಧೆ ಉದ್ಘಾಟನಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮದಲ್ಲಿ ಚರ್ಚೆಯ ವಿಷಯದ ಅಂಗವಾಗಿ ಭಾರತದ ಸಂವಿಧಾನಕ್ಕೆ ಬದಲಾವಣೆಯ ಅಗತ್ಯವೇ..?? ಎನ್ನುವ ವಿಷಯದಡಿ ಚರ್ಚೆಯನ್ನ ಹಮ್ಮಿಕೊಳ್ಳಲಾಗಿರುವ ಬಿತ್ತಿ ಪತ್ರ ಒಂದು ಜಿಲ್ಲೆಯಲ್ಲಿ ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ದಲಿತ ಸಂಘಟನೆಗಳು ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ.

 

 

 

 

ಇನ್ನು ಸಂವಿಧಾನದ ಬದಲಾವಣೆ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಸಾಕಷ್ಟು ಪರ ವಿರೋಧದ ಚರ್ಚೆಗಳು ನಡೆಯುತ್ತಿರುವ ನಡುವೆ ಜಿಲ್ಲೆಯಲ್ಲೂ ಸಹ ಸಂವಿಧಾನದ ಬದಲಾವಣೆ ಅಗತ್ಯವೇ ಎನ್ನುವ ವಿಷಯದಡಿ ಚರ್ಚಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ವಿರೋಧ ವ್ಯಕ್ತಪಡಿಸಿ ತುರುವೇಕೆರೆಯ ಹಲವು ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮದ ಆಯೋಜಕರ ಮೇಲೆ ಆಕ್ರೋಶ ವ್ಯಕ್ತಪಡಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿ ದೂರು ಸಹ ಸಲ್ಲಿಸಿದ್ದು ಇದುವರೆಗೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಕಳೆದ ಎರಡು ದಿನಗಳ ಹಿಂದೆ ದಲಿತ ಸಂಘಟನೆಗಳ ಮುಖಂಡರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಜಿಲ್ಲೆಯಲ್ಲೂ ಹಲವು ದಲಿತ ಸಂಘಟನೆಗಳ ಮುಖಂಡರು ಹಾಗೂ ಪ್ರಗತಿಪರರು ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

 

ಚಿತ್ರ -ತುರುವೇಕೆರೆಯ ದಲಿತ ಸಂಘಟನೆಗಳಿಂದ ಪೊಲೀಸ್ ಠಾಣೆಯ ಮುಂದೆ ಧರಣಿ ನಡೆಸುತ್ತಿರುವುದು

 

ಇನ್ನು ಜಿಲ್ಲೆಯ ಹಲವು ದಲಿತ ಸಂಘಟನೆಗಳ ಮುಖಂಡರು ಸಹ ಕಾರ್ಯಕ್ರಮಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿ ಕಾರ್ಯಕ್ರಮದ ಆಯೋಜಕದ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.

 

 

 

 

 

ಈ ಬಗ್ಗೆ ವಿರೋಧ ವ್ಯಕ್ತಪಡಿಸಿರುವ ಅಖಿಲ ಭಾರತ ದಲಿತ ಕ್ರಿಯಾ ಸಮಿತಿಯ ಜಿಲ್ಲಾಧ್ಯಕ್ಷ ಏನ್ ಕೆ ನಿಧಿ ಕುಮಾರ್ ಕಾರ್ಯಕ್ರಮಕ್ಕೇ ವಿರೋಧ ವ್ಯಕ್ತಪಡಿಸಿದ್ದು ದೇಶದಲ್ಲಿ ಪದೇ ಪದೇ ವಿಕೃತ ಮನಸುಗಳು ಸಂವಿಧಾನದ ಬದಲಾವಣೆಯ ವಿಷಯದ ಬಗ್ಗೆ ದಿನೇ ದಿನೇ ವಿಷದ ಬೀಜ ಬಿತ್ತುವ ಮೂಲಕ ದೇಶದ ಯುವ ಪಡೆ ಹಾಗೂ ಮುಗ್ಧರನ್ನು ದಿಕ್ಕು ತಪ್ಪಿಸುವ ಹುನ್ನಾರಕ್ಕೆ ಮುಂದಾಗಿದ್ದು ಇಂತಹ ವಿಷಯಗಳ ಬಗ್ಗೆ ದೇಶದ ಯುವ ಸಮೂಹ , ಪ್ರಗತಿಪರ ಹಾಗೂ ದಲಿತ ಸಂಘಟನೆಗಳು ಎಚ್ಚರಿಕೆಯಿಂದ ಇರಬೇಕಾದ ಅನಿವಾರ್ಯತೆಯನ್ನು ವಿಕೃತ ಮನಸ್ಸುಗಳು ಹುಟ್ಟು ಹಾಕುತ್ತಿವೆ ಎಂದು ಆಕ್ರೋಶ ಹೊರಹಾಕಿದ್ದಾರೆ.

 

 

 

 

 

ಕಾರ್ಯಕ್ರಮದ ಬಗ್ಗೆ ಮತ್ತೊರ್ವ ದಲಿತ ಮುಖಂಡ ಪಿ.ಎನ್ ರಾಮಯ್ಯ ಸಹ ಆಕ್ರೋಶ ವ್ಯಕ್ತಪಡಿಸಿದ್ದು ಇಂತಹ ಕಾರ್ಯಕ್ರಮಗಳ ಆಯೋಜಕರ ಬಗ್ಗೆ ಯಾವುದೇ ಮುಲಾಜಿ ಇಲ್ಲದೆ ಕ್ರಿಮಿನಲ್ ಮೊಕದ್ದಮೆಯನ್ನು ಸ್ವಯಂ ಪ್ರೇರಿತವಾಗಿ ಪೊಲೀಸ್ ಇಲಾಖೆ ದಾಖಲು ಮಾಡಿಕೊಳ್ಳಬೇಕು. ಇನ್ನು ದೇಶದಲ್ಲಿ ಸಂವಿಧಾನದ ಹಕ್ಕುಗಳೆ ಇನ್ನೂ ಸರಿಯಾಗಿ ಜಾರಿಯಾಗಿಲ್ಲ ಇನ್ನು ಜಾತಿ ಜಾತಿಗಳ ನಡುವೆ ಅಂತರದ ಕಂದಕವನ್ನ ಮುಚ್ಚಿ ಹಾಕುವ ಬದಲು ವಿಕೃತ ಮನಸ್ಸುಳ್ಳ ಮನು ಸ್ಮೃತಿಯ ಪರಿಪಾಲಕರು ಇಂತಹ ಕಾರ್ಯಕ್ರಮಗಳನ್ನ ಆಯೋಜಿಸುವ ಮೂಲಕ ಯುವ ಸಮೂಹವನ್ನು ದಿಕ್ಕು ತಪ್ಪಿಸುವ ಬಹುದೊಡ್ಡ ಕಾರ್ಯಕ್ಕೆ ಮುಂದಾಗಿರುವುದು ನಿಜಕ್ಕೂ ಆತಂಕ ಸೃಷ್ಟಿ ಮಾಡುತ್ತಿದೆ ಎಂದರು.

 

 

 

 

ಅದೇನೇ ಇರಲಿ ಕಾರ್ಗಿಲ್ ವಿಜಯದಿವಸ ಆಚರಣೆ ಹೆಸರಿನಲ್ಲಿ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದವರು ಹುತಾತ್ಮರ ಹೆಸರಿನಲ್ಲಿ ಭಾರತದ ಸಂವಿಧಾನವನ್ನ ಬದಲಾಯಿಸುವ ಬಗ್ಗೆ ಚರ್ಚೆ ನಡೆಸುವುದು ಮನುವಾದಿಯ ಮನಸ್ಥಿತಿಯ ದೇಶದ್ರೋಹಿಗಳು ಅಲೋಚಿಸುವಂತಹ ಒಂದು ವಿಷಯವಾಗಿದೆ ಈ ಮನುವಾದಿ ಮನಸ್ಥಿತಿ ಇರುವ ಕೆಲ ಸಂಘ ಸಂಸ್ಥೆಗಳು ಭಾರತದ ಸಂವಿಧಾನವನ್ನ ಬದಲಾಯಿಸುವ ಚರ್ಚಾ ಸ್ಪರ್ಧೆ ಇಟ್ಟಿರುವುದು ಭಾರತದ ಸಾರ್ವಭೌಮತೆಗೆ ಮತ್ತು ಸಂವಿಧಾನಕ್ಕೆ ಅಗೌರವ ತರುತ್ತಿರುವ ವಿಚಾರವಾಗಿದೆ ಇಂತಹ ವಿಚಾರವನ್ನು ಜಾತ್ಯತೀತ ಮನಸ್ಥಿತಿ ಇರುವ ಎಲ್ಲಾ ಮನಸುಗಳು ಹಾಗೂ ಸಂಘ ಸಂಸ್ಥೆಗಳು ಇದನ್ನ ವಿರೋಧಿಸಿ ಇವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎನ್ನುವ ಆಗ್ರಹವನ್ನು ಜಿಲ್ಲೆಯ ಹಲವು ದಲಿತ ಸಂಘಟನೆಗಳು ವ್ಯಕ್ತಪಡಿಸುತ್ತಿವೆ.

Leave a Reply

Your email address will not be published. Required fields are marked *

You cannot copy content of this page

error: Content is protected !!