ದಿನನಿತ್ಯದ ಜೀವನದಲ್ಲಿ ಒತ್ತಡ ಎನ್ನುವುದು ನಮ್ಮ ಜೀವನವನ್ನು ನಾಶ ಮಾಡುತ್ತದೆ. ಇತ್ತೀಚಿನ ದಿನಗಳಲ್ಲಿ ಇದು ಹೆಚ್ಚಾಗಿದೆ. ಒತ್ತಡದಿಂದ ಮುಕ್ತಿಯನ್ನು ಪಡೆಯಲು ಸಾಕಷ್ಟು ಜನರು ದೇವಾಲಯಗಳತ್ತ ಬರುತ್ತಿದ್ದಾರೆ ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ನುಡಿದರು.
ನಗರದ ರಿಂಗ್ ರಸ್ತೆಯಲ್ಲಿರುವ ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ ಹಮ್ಮಿಕೊಂಡಿದ್ದ, 40 ಅಡಿ ಎತ್ತರದ ಶಿವಲಿಂಗದೊಳಗೆ ಝಗಮಗಿಸುವ ಭಾರತ, ಭಾರತದ ಒಳಗಡೆ ದ್ವಾದಶ ಜ್ಯೋತಿಲಿಂಗ ದರ್ಶನ ಉದ್ಘಾಟನೆ ನುಡಿಯನ್ನಾಡಿದ ಅವರು, ಬದುಕಿನಲ್ಲಿ ನಾವು ನಮ್ಮದೇ ಆದ ಕೆಲಸಗಳಲ್ಲಿ ಬ್ಯೂಸಿಯಾದಾಗ ನಮ್ಮ ಮನಸ್ಸಿಗೆ ಶಾಂತಿ ಎನ್ನುವದು ಅತ್ಯವಶ್ಯಕ ಎನಿಸುತ್ತದೆ. ಮೊದಲು ನಾವು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಸಾಮಥ್ರ್ಯ, ಶಕ್ತಿಯನ್ನು ಅರಿತು ಕೆಲಸ ಮಾಢಬೇಕು. ಪ್ರತಿಯೊಂದು ಕೆಲಸವನ್ನು ಕಷ್ಟಪಟ್ಟು ಮಾಢುವುದಕ್ಕಿಂತ ಇಷ್ಟ ಪಟ್ಟು ಮಾಡಬೇಕು ಎಂದರು.
ಹಿಂದೂ ಧಾರ್ಮಿಕ ದೇಗುಲಗಳಲ್ಲಿ ಶಾಂತಿ ಇದೆ. ನಾವು ನಂಬಿಕೆಗಳು ಭಿನ್ನವಾಗಿವೆ. ಆದರೆ, ಎಲ್ಲರೂ ಬಯಸುವುದು ನೆಮ್ಮದಿಯುತವಾದ ಜೀವನ, ಸಂತೋಷವನ್ನು ಬಯಸುತ್ತೇವೆ. ನಮ್ಮ ಭಾರತೀಯರ ಸಂಸ್ಕøತಿಯಲ್ಲಿ ದೇಗುಲಗಳಿಗೆ ಅತ್ಯಂತ ಪವಿತ್ರ ಮತ್ತು ಶಾಂತಿಯುತವಾದ ವಾತಾವರನವನ್ನು ಹೊಂದಿದೆ. ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಭಾರತೀಯ ಆಧ್ಯಾತ್ಮೀಕಥೆಯಲ್ಲಿ ಪಾಶ್ಚಿಮಾತ್ಯದವರೂ ಒಲವು ತೋರಿಸುತ್ತಿದ್ದಾರೆ. ಶಾಂತಿಯುತವಾದ ವಾತಾವರಣ ಎಲ್ಲಿ ಇರುತ್ತದೆಯೊ ಅಲ್ಲಿ ಮಹತ್ತರವಾದ ಚಿಂತನೆಗಳು ಹುಟ್ಟಲಿವೆ. ಜೀವನದಲ್ಲಿ ಶೂನ್ಯದಿಂದ ನೆಮ್ಮದಿಯನ್ನು ಕಂಡುಕೊಳ್ಳಬಹುದಾಗಿದೆ. ಶೂನ್ಯ ಎನ್ನುವುದು ನಿಜವಾದ ಚಿಂತನೆಯತ್ತ ಕೊಂಡೊಯ್ಯುತ್ತದೆ. ಸಾಧನೆ ಎನ್ನುವದು ಅಷ್ಟು ಸುಲಭವಲ್ಲ ಸಾಧನೆಗೆ ಶ್ರಮದ ಪ್ರತೀಕವು ಅಷ್ಟೆ ಮುಖ್ಯವಾಗಿರುತ್ತದೆ. ಸಮಯ ಮತ್ತು ಸಾಧನೆ ಎನ್ನುವುದು ನಮ್ಮ ಜೀವನದ ಯಶಸ್ಸಿನ ಮೇಲೆ ನಿಂತಿರುತ್ತದೆ ಎಂದು ತಿಳಿಸಿದರು.
ಮೇಯರ್ ಬಿ.ಜಿ. ಕೃಷ್ಣಪ್ಪ ಮತನಾಡಿ ಮನುಷ್ಯನಿಗೆ ಶಾಂತಿ ಎನ್ನುವುದು ತುಂಬ ಮುಖ್ಯ. ಒತ್ತಡ ಎನ್ನುವುದು ನಮ್ಮ ಭಾವನತ್ಮಕ ಚಿಂತನೆಗಳಿಗೆ ಪೆಟ್ಟು ಬೀಳುವಂತೆ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬ್ರಹ್ಮಕುಮಾರಿ ಶೋಭ ಮಹಾಶಿವರಾತ್ರಿ ಸಂದೇಶವನ್ನು ನೀಡಿದರು, ಬ್ರಹ್ಮಕುಮಾರಿ ಸುಜಾತ, ಬ್ರಹ್ಮಕುಮಾರಿ ಲಕ್ಷ್ಮಿ ಇತರರು ಇದ್ದರು.