ಕಂಪ್ಲಿಯನ್ನು ವಿಜಯನಗರ ಜಿಲ್ಲೆಯಿಂದ ಕೈಬಿಟ್ಟಿದ್ದನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

 

ಕಂಪ್ಲಿಯನ್ನು ವಿಜಯನಗರ ಜಿಲ್ಲೆಯಿಂದ ಕೈಬಿಟ್ಟಿದ್ದನ್ನ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಸಲ್ಲಿಕೆ

 

ರಾಜ್ಯ ಸರ್ಕಾರ ಬಳ್ಳಾರಿಯನ್ನು ವಿಭಜಿಸಿ ಹೊರಡಿಸಿದ್ದ ಪ್ರಾಥಮಿಕ ಅಧಿಸೂಚನೆಗೆ ಕಂಪ್ಲಿಯನ್ನು ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಸಾವಿರಾರು ಆಕ್ಷೇಪಣೆ ಸಲ್ಲಿಸಿದ್ದರು ಸಾರ್ವಜನಿಕರ ಹಿತಾವನ್ನ ಸರ್ಕಾರ ಪರಿಗಣಿಸಿದೇ, ಕರ್ನಾಟಕ ಭೂ ಕಂದಾಯ ಕಾಯ್ದೆಯನ್ನ ಸಂಪೂರ್ಣ ಉಲ್ಲಂಘಿಸಿ ನೂತನ ವಿಜಯನಗರ ಜಿಲ್ಲೆಯನ್ನು ದಿನಾಂಕ: -8-2-2021 ರಂದು ಅಧಿಸೂಚನೆ ಹೊರಡಿಸುವ ಮೂಲಕ ಜಿಲ್ಲೆಯನ್ನ ವಿಭಜಿಸಿ ಕಂಪ್ಲಿ ತಾಲೂಕನ್ನ ಸೇರಿಸದೇ ಕೈಬಿಟ್ಟಿರುವುದನ್ನ ಪ್ರಶ್ನಿಸಿ ಸರ್ಕಾರದ ಅಧಿಸೂಚನೆಯನ್ನ ರದ್ದು ಪಡಿಸುವಂತೆ ರಾಜ್ಯ ಹೈಕೋರ್ಟ್‌ನಲ್ಲಿ ದಿನಾಂಕ : 10-03-2021 ರಂದು ಸಾರ್ವಜನಿಕ ಹಿತಾಸಕ್ತಿ ಕಾಯ್ದೆ ಯಡಿಯಲ್ಲಿ ಭಾರತೀಯ ದಲಿತ ಪ್ಯಾಂಥರ್ (ರಿ) ಸಂಘಟನೆ ಮತ್ತು ಕಂಪ್ಲಿ ತಾಲೂಕು ವಕೀಲರ ಬಳಗದಿಂದ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ, ಒಂದನೇ ಅರ್ಜಿದಾರರಾಗಿ ಭಾರತೀಯ ದಲಿತ ಪ್ಯಾಂಥರ್ ಸಂಘಟನೆಯ ಬಳ್ಳಾರಿ ಜಿಲ್ಲಾ ಗೌರವಾಧ್ಯಕ್ಷ ಮೋಹನ್ ಕುಮಾರ್ ದಾನಪ್ಪ, ಎರಡನೇ ಅರ್ಜಿದಾರರಾಗಿ ಕಂಪ್ಲಿ ತಾಲೂಕು ವಕೀಲರ ಬಳಗದ ಕಾರ್ಯಾಧ್ಯಕ್ಷ ಕೆ.ಪ್ರಭಾಕರ್ ರಾವ್ ರವರಿಂದ ಅರ್ಜಿಸಲ್ಲಿಸಲಾಗಿದೆ,

 

ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿ 1.ರಾಜ್ಯ ಸರ್ಕಾರದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು,ಬೆಂಗಳೂರು 2.ಸರ್ಕಾರದ ಅಧೀನ ಕಾರ್ಯದರ್ಶಿ, ಕಂದಾಯ ಭೂಮಾಪನ ವಿಭಾಗ,ಬೆಂಗಳೂರು, 3,ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಕಂದಾಯ ಇಲಾಖೆ.ಬೆಂಗಳೂರು , 4.ಪ್ರಾದೇಶಿಕ ಆಯುಕ್ತಕರು , ಪ್ರಾದೇಶಿಕ ಆಯುಕ್ತಕರ ಕಛೇರಿ, ಕಲಬುರಗಿ, 5,ಜಿಲ್ಲಾಧಿಕಾರಿಗಳು, ಬಳ್ಳಾರಿ, 6,ಸಮೀಕ್ಷೆ ವಸಾಹತು ಮತ್ತು ಭೂ ದಾಖಲೆಗಳ ಇಲಾಖೆ, ಬೆಂಗಳೂರುರವರನ್ನ ಪ್ರತಿವಾದಿಗಳನ್ನಾಗಿಸಿದೆ, ಮುಂದಿನ ವಾರದಲ್ಲಿ ವಿಚಾರಣೆಗೆ ಬರಲಿದೆ ಎಂದು ಅರ್ಜಿದಾರರಾದ ಮೋಹನ್ ಕುಮಾರ್ ದಾನಪ್ಪ ತಿಳಿಸಿದರು

ಅರ್ಜಿಯಲ್ಲಿನ ವಿಷಯಗಳು:

ಸದ್ರಿ ಅಧಿಸೂಚನೆಯು ಸಾರ್ವಜನಿಕ ಹಿತಾಸಕ್ತಿಯಿಂದ ಕೂಡಿರದೇ ರಾಜಕೀಯ ಹಿತಾಸಕ್ತಿಯಿಂದ ಕೂಡಿರುತ್ತದೆ, ಪ್ರಾಥಮಿಕ ಅಧಿಸೂಚನೆಗೆ ಒಂದು ತಿಂಗಳಗಳ ಕಾಲ ಆಕ್ಷೇಪಣೆಗೆ ಕಾಲಾವಕಾಶ ನೀಡಿದ ಸಂದರ್ಭದಲ್ಲಿ ಕಂಪ್ಲಿ ತಾಲೂಕಿನಿಂದ ಸಾವಿರಕ್ಕೂ ಅಧಿಕ ಲಿಖಿತ ರೂಪದ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದು ಆಕ್ಷೇಪಣೆ ಸಲ್ಲಿಸಿದ ಪ್ರತಿ ವ್ಯಕ್ತಿ, ಸಂಘ- ಸಂಸ್ಥೆಗಳೊಂದಿಗೆ ವಿಚಾರಣೆ ನಡೆಸುವುದು ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 6 ರಡಿಯಲ್ಲಿ ಕಡ್ಡಾಯ ಪ್ರಕ್ರಿಯೆಯಾಗಿರುತ್ತದೆ ಆದರೆ ಸರ್ಕಾರವು ಯಾವುದೇ ವಿಚಾರಣೆ ನಡೆಸದೇ ಏಕಾಏಕಿ ಅಧಿಸೂಚನೆ ಹೊರಡಿಸಿರುವುದು ಸಂಪೂರ್ಣ ಕಾನೂನು ಉಲ್ಲಂಘನೆಯಾಗಿರುತ್ತದೆ,

ಆದ್ದರಿಂದ ಅಂತಿಮ ಅಧಿಸೂಚನೆಯನ್ನು ರದ್ದು ಪಡಿಸಬೇಕು,

ಸಾರ್ವಜನಿಕರ ಸಂಘ – ಸಂಸ್ಥೆಗಳ ಆಕ್ಷೇಪಣೆಗಳನ್ನು ಪರಿಗಣಿಸಿ ಸಾರ್ವಜನಿಕ ಹಿತಾದೃಷ್ಟಿಯಿಂದ ಕಂಪ್ಲಿಯನ್ನು ನೂತನ ವಿಜಯನಗರ ಜಿಲ್ಲೆಗೆ ಸೇರಿಸುವಂತೆ ಸರ್ಕಾರಕ್ಕೆ ಸೂಕ್ತ ನಿರ್ದೇಶನ ಮತ್ತು ಆದೇಶ ನೀಡಬೇಕು

• ಅಂತಿಮ ಅಧಿಸೂಚನೆಯನುಸಾರ ರಾಜ್ಯ ಸರ್ಕಾರ ಈಗಾಗಲೇ ಅಧಿಸೂಚನೆಯನ್ನ ಜಾರಿಗೆ ತರಲು ಮುಂದಿನ ಕ್ರಮಗಳನ್ನು ತೆಗೆದುಕೊಂಡು ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಈ ಎಲ್ಲಾ ಆಡಳಿತಾತ್ಮಕ ಪಚಾರಿಕತೆಗಳು ಸಾರ್ವಜನಿಕ ಹಿತಾಸಕ್ತಿಗೆ ತೀವ್ರ ಪರಿಣಾಮ ಬೀರುತ್ತದೆ ಆದ್ದರಿಂದ ಅಂತಿಮ ಅಧಿಸೂಚನೆಗೆ ಸದ್ರಿ ಈ ಅರ್ಜಿಯ ವಿಚಾರಣೆ ಬಾಕಿಯಿದ್ದು ಅಂತಿಮ ಆದೇಶದವರೆಗೆ ಪ್ರಸ್ತುತ ಚಾಲನೆಯಲ್ಲಿರುವ ಆಡಳಿತಾತ್ಮಕ ಪಚಾರಿಕತೆಗಳು ಚಾಲನೆಗೊಳಿಸದಂತೆ ಮಧ್ಯಂತರ ಆದೇಶ ನೀಡಬೇಕೆಂದು ಹಾಗೂ ಸುಮಾರು 27 ಅಂಶಗಳನ್ನೊಳಗೊಂಡ ಅರ್ಜಿಯನ್ನು ಕರ್ನಾಟಕ ರಾಜ್ಯ ಗೌರವಾನ್ವಿತ ಉಚ್ಚ ನ್ಯಾಯಾಲಯ ಬೆಂಗಳೂರಿನಲ್ಲಿ ಸಾರ್ವಜನಿಕ ಹಿತಾಸಕ್ತಿ (ಪಿಐಎಲ್) ಅರ್ಜಿ ಸಲ್ಲಿಸಲಾಗಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!