ಸಂಸದ ಜಿ.ಎಂ ಸಿದ್ದೇಶ್ವರ್ ಕುಟುಂಬ ಸದಸ್ಯರ ಮೇಲೆ- ಕೊಲೆ ಆರೋಪ ಮಾಡಿದ ಕಾಂಗ್ರೆಸ್ ಮುಖಂಡ ಜಿ ಪಾಲನೆತ್ರಯ್ಯ.

ಸಂಸದ ಜಿ.ಎಂ ಸಿದ್ದೇಶ್ವರ್ ಕುಟುಂಬ ಸದಸ್ಯರ ಮೇಲೆ- ಕೊಲೆ ಆರೋಪ ಮಾಡಿದ ಕಾಂಗ್ರೆಸ್ ಮುಖಂಡ ಜಿ ಪಾಲನೆತ್ರಯ್ಯ.

 

 

ತುಮಕೂರು -ದಾವಣಗೆರೆ ಸಂಸದ ಜಿ.ಎಂ ಸಿದ್ದೇಶ್ವರ್ ಕುಟುಂಬದ ಒಡೆತನಕ್ಕೆ ಸೇರಿರುವ ಜಿ.ಮಲ್ಲಿಕಾರ್ಜುನಪ್ಪ ಹಾಲಮ್ಮ ಟ್ರಸ್ಟ್ ಹೆಸರಿನಲ್ಲಿ ರೈತರಿಗೆ ಕೋಟ್ಯಾಂತರ ರೂ ದೋಖಾ ಮಾಡಿರುವ ಗಂಭೀರ ಆರೋಪ ಕೇಳಿ ಬಂದಿದೆ.

 

 

 

 

 

ಹವಾಲಾ ಹಣ ಸರಬರಾಜು ಮಾಡಿರುವ ಬಗ್ಗೆ ಸಂಸದ ಜಿ ಎಂ ಸಿದ್ದೇಶ್ವರ್ ಕುಟುಂಬದ ಸದಸ್ಯರ ಹೆಸರು ರಾಜ್ಯದಾದ್ಯಂತ ಸದ್ದು ಮಾಡುತ್ತಿರುವ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರದಲ್ಲಿ ರೈತರ ಜಮೀನು ಖರೀದಿಸಿ ಅವರಿಗೆ ಹಣ ನೀಡದೆ ಜಿ ಎಂ ಸಿದ್ದೇಶ್ವರ್ ತಮ್ಮ ಜಿ ಎಂ ಲಿಂಗರಾಜು ದೋಖಾ ಮಾಡಿರುವ ವಿಚಾರ ಇದೀಗ ಮುನ್ನಲೆಗೆ ಬರುತ್ತಿದೆ.

 

 

 

ಈ ಸಂಬಂಧ ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಕಾಂಗ್ರೆಸ್ ಮುಖಂಡ ಜಿ. ಪಾಲನೇತ್ರಯ್ಯ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ತಮ್ಮ ಸ್ವಂತ ಜಮೀನನ್ನು ಸೇರದಂತೆ 150 ಎಕರೆ ಜಮೀನು ಅವಶ್ಯಕತೆ ಇದೆ ಸಂಸದ ಜಿ ಎಂ ಸಿದ್ದೇಶ್ವರ್ ತಮ್ಮ ಜಿ ಎಂ ಲಿಂಗರಾಜು ಪಾಲನೇತ್ರಯ್ಯ ಅವರನ್ನು ಸಂಪರ್ಕಿಸಿದ್ದು ರೈತರ ಜಮೀನ ಜಿ ಮಲ್ಲಿಕಾರ್ಜುನಪ್ಪ ಹಾಲಮ್ಮ ಟ್ರಸ್ಟ್  ಹೆಸರಿನಲ್ಲಿ ರಿಜಿಸ್ಟ್ರಾರ್ ಮಾಡಿಕೊಂಡು ಹಣ ನೀಡದೆ ಅಕ್ರಮವಾಗಿ 150 ಎಕರೆ ಜಮೀನನ್ನ ಕಬಳಿಸಿ ರೈತರಿಗೆ ಮೋಸ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

 

 

 

 

 

ಕಾಂಗ್ರೆಸ್ ಮುಖಂಡ ಜಿ ಪಾಲನೇತ್ರಯ್ಯ ಅವರಿಗೆ ಸಂಬಂಧಿಸಿದಂತ ಸುಮಾರು ನಾಲ್ಕು ಎಕರೆ ಜಮೀನನ್ನು ನಕಲಿ ಸಹಿ ಹಾಕಿ ಜಿ ಎಂ ಲಿಂಗರಾಜು ಸೇರಿದಂತೆ ಹಲವು ರೈತರ ಜಮೀನುಗಳಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ರೈತರ ಜಮೀನನ್ನ ತನ್ನ ಹೆಸರಿಗೆ ಮಾಡಿಸಿಕೊಂಡು ಸುಮಾರು 40 ಕೋಟಿ ಅಧಿಕ ಹಣವನ್ನು ರೈತರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

 

 

 

 

 

 

ಜಮೀನು  ವ್ಯವಹಾರಕ್ಕೆ ಸಂಬಂಧಿಸಿದಂತೆ ಹಲವು ಬಾರಿ ಲಿಂಗರಾಜು ರವರನ್ನ ಸಂಪರ್ಕಿಸಿದರು ಸಹ ಅವರಿಂದ ಯಾವುದೇ ಉತ್ತರ ಬಂದಿಲ್ಲ ಬದಲಾಗಿ ದೊಡ್ಡಬಳ್ಳಾಪುರ ತಾಲೂಕಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಅಧಿಕಾರಿಗಳನ್ನ ಬಳಸಿಕೊಂಡು ನಕಲಿ ದಾಖಲತೆಗಳನ್ನ ಸೃಷ್ಟಿಸಿ , ನಕಲಿ ಪವರ್ ಆಫ್ ಅಟಾರ್ನಿ ,ಹಾಗೂ ನಕಲಿ ರಿಜಿಸ್ಟ್ರೇಷನ್ ಪತ್ರ ಮಾಡಿಕೊಂಡು ಜಮೀನನ್ನು ಅಕ್ರಮವಾಗಿ ಕಬಳಿಸುವ ದಂದೆ ಮಾಡುತ್ತಿದ್ದು ಈ ದಂಧೆಯಲ್ಲಿ ಜಿ ಎಂ ಲಿಂಗರಾಜು ಆಪ್ತ ರಫೀಕ್ ,ಸುರೇಶ್ ಸಹ ಶಾಮೀಲಾಗಿದ್ದಾರೆ ಎಂದು ಜಿಎಂ ಸಿದ್ದೇಶ್ವರ್ ಸೇರಿದಂತೆ ಅವರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ.

 

 

 

 

ಕಳೆದ ಕೆಲ ವರ್ಷಗಳ ಹಿಂದೆ ನಡೆದ ತನ್ನ ಮಗನ ಕೊಲೆ ಪ್ರಕರಣಕ್ಕೂ ಸಹ ಅವರ ಕುಟುಂಬವೇ ಕಾರಣ ಇನ್ನು ತಾವು ತುಮಕೂರಿನ ಬೈರಸಂದ್ರದಲ್ಲಿ ವಾಸವಿದ್ದ ಸಂದರ್ಭದಲ್ಲಿ ದೊಡ್ಡಬಳ್ಳಾಪುರದಲ್ಲಿ ಇರುವ ತಮ್ಮ ಮತ್ತೊಂದು ಮನೆಗೆ ಏಕಾಏಕಿ ರೌಡಿಗಳೊಂದಿಗೆ ಆಗಮಿಸಿ ನನ್ನ ಬದಲು ನನ್ನ ಮಗನನ್ನ ಕೊಲೆ ಮಾಡಿದ್ದಾರೆ ಇನ್ನು ನನ್ನ ಮಗನ ಕೊಲೆಗೂ ಸಹ ಅವರ ಕುಟುಂಬದ ಕೈವಾಡ ಇರುವ ಬಗ್ಗೆ ಮಾಹಿತಿ ಇದ್ದು ಅದರ ಪ್ರಕರಣವೂ ಸಹ ದೊಡ್ಡಬಳ್ಳಾಪುರದ ಕೋರ್ಟ್ ನಲ್ಲಿ ಕೇಸ್ ನಡೆಯುತ್ತಿದ್ದು ಒಂದೆಡೆ ಬಾಳಬೇಕಿದ್ದ ಮಗನನ್ನು ಬಲಿಪಡೆದರು ಎಂದು ಆಪಾದಿಸಿದ್ದಾರೆ.

 

 

 

 

 

 

ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ದಾವಣಗೆರೆ ಸಂಸದ ಜಿಎಂ ಸಿದ್ದೇಶ್ವರ್ ರವರ ಕುಟುಂಬದ ಮೇಲೆ ಕೇಸ್ ದಾಖಲಿಸುವುದಾಗಿ ಪಾಲನೇತ್ರಯ್ಯ ತಿಳಿಸಿದ್ದಾರೆ.

 

 

 

 

 

ಕಳೆದ ಎರಡು ದಿನಗಳಿಂದ ಜಿಎಂ ಸಿದ್ದೇಶ್ವರ್ ಕುಟುಂಬದ ಸದಸ್ಯರು ಹವಾಲಾ ದಂಧೆಯಲ್ಲಿ ತೊಡಗಿದ್ದಾರೆ ಎನ್ನುವ ಆರೋಪಗಳು ಸಹ ಕೇಳಿ ಬರುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಮುಖಂಡ ಜಿ ಪಾಲನೆತ್ರಯ ರವರು ಮಾಡಿರುವ ಆರೋಪ ರಾಜಕೀಯ ವಲಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದು ಪ್ರಕರಣ ಯಾವ ಹಂತ ತಲುಪಲಿದೆ ಎಂಬುದನ್ನು ಕಾದು ನೋಡಬೇಕಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!