ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಗೆ ಗೃಹಸಚಿವರ ದಿಢೀರ್ ಭೇಟಿ..
ತುಮಕೂರು- ತುಮಕೂರು ಗ್ರಾಮಾಂತರ ಠಾಣೆಗೆ ಶುಕ್ರವಾರ ಗೃಹಸಚಿವ ಡಾ.ಜಿ.ಪರಮೇಶ್ವರ್ ದಿಢೀರ್ ಭೇಟಿ ಠಾಣೆಯ ಕಾರ್ಯವೈಖರಿ ಪರಿಶೀಲಿಸಿದರು.
ಗೃಹಸಚಿವರ ದಿಢೀರ್ ಭೇಟಿಗೆ ಪೊಲೀಸ್ ಸಿಬ್ಬಂದಿ ಶಾಖ್ ಆದರು,ಗೃಹಸಚಿವರು ಠಾಣೆಯ ಎಲ್ಲಾ ಶಾಖೆಗಳಿಗೂ ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗ್ರಾಮಾಂತರ ಠಾಣೆಗೆ ದಿಢೀರ್ ಭೇಟಿ ಕೊಟ್ಟಿದ್ದನೆ,ಅಂಕಿ ಅಂಶ ನೋಡಿದ್ದೇನೆ ಕಳ್ಳತನದ ಪ್ರಕರಣಗಳು ಜಾಸ್ತಿಇದೆ,ಟ್ರಾಫಿಕ್ ಅಪರಾಧ,ಜೂಜು ಕೂಡ ಹೆಚ್ಚಾಗಿದೆ.ಕಡಿಮೆ ಮಾಡುವಂತೆ ತಾಕೀತು ಮಾಡಿದ್ದೇನೆ ಎಂದರು.
ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು,ಇ ಬೀಟ್ ಸರಿಯಾಗಿ ನಿರ್ವಹಿಸುವಂತೆ ಸೂಚಿಸಿದ್ದೇನೆ ಎಂದ ಅವರು
75 ಸಿಬ್ಬಂದಿಗಳ ಕೊರತೆ ಇದೆ ಅದನ್ನು ಭರಿಸುವ ಕೆಲಸ ಮಾಡುತ್ತೇವೆ,ಅದನ್ನೂ ಹೊರತು ಪಡಿಸಿ 1700 ಸಿಬ್ಬಂದಿಗಳು ಹೆಚ್ಚುವರಿ ಬೇಕೆಂದು ಎಸ್ಪಿ ಅವರ ಮನವಿ ಇದೆ ಎಂದರು.
ಔರಾಧಕರ್ ವರದಿ ಪರಿಪೂರ್ಣ ಜಾರಿ ಆಗಿಲ್ಲ,ಅದರ ಬಗ್ಗೆ ಚಿಂತನೆ ನಡೀತಿದೆ, ಹಣಕಾಸಿನ ಪರಿಸ್ಥಿತಿ ನೋಡಿ ಜಾರಿ ಮಾಡುತ್ತೇವೆ ಎಂದರು .ಈ ವೇಳೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕೆ.ವಿ.ಅಶೋಕ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ತಿತರಿದ್ದರು