ಲೋಕಸಭೆ ಚುನಾವಣೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿಗೆ ಡಾಕ್ಟರ್ ಎಸ್ ಪರಮೇಶ್….?!

ಲೋಕಸಭೆ ಚುನಾವಣೆ ಬಿಜೆಪಿ ಆಕಾಂಕ್ಷಿಗಳ ಪಟ್ಟಿಗೆ ಡಾಕ್ಟರ್ ಎಸ್ ಪರಮೇಶ್….?!

 

 

 

ತುಮಕೂರು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಟಿಕೇಟ್ ಶ್ರೀ ಸಿದ್ಧಗಂಗಾ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕರಾಗಿರುವ ಡಾ. ಎಸ್.ಪರಮೇಶ್ ಅವರು ತಾವು ಈ ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆಂದು ಹೇಳಿರುವ ಪತ್ರವೊಂದು ಜಿಲ್ಲೆಯಲ್ಲಿ ಹರಿದಾಡುತ್ತಿದೆ, ಜೊತೆಗೆ ಈ ಪತ್ರದಲ್ಲಿ ಹೊಸ ವರ್ಷದ ಶುಭಶಾಶಯಗಳನ್ನು ಸಹ ಕೋರಿದ್ದಾರೆ.

 

 

 

 

 

 

 

ಈ ಪತ್ರದೊಂದಿಗೆ ಬಿಜೆಪಿ ಪಕ್ಷದೊಂದಿಗೆ ತಾವು ಇದುವರೆವಿಗೆ ಮಾಡಿರುವ ಜನಪರ ಕಾರ್ಯ ಮತ್ತು ನಾಯಕತ್ವದ ಗುಣಗಳು, ತಮ್ಮ ಸ್ವ ಪರಿಚಯದೊಂದಿಗೆ ತಮ್ಮ ಸಾಧನೆಗಳನ್ನು ಬಿಂಬಿಸುವ ಕರ ಪತ್ರವನ್ನು ಸಹ ಅಡಕ ಮಾಡಿ ನೀಡುತ್ತಿದ್ದಾರೆ ಜೊತೆಗೆ ಹಲವಾರು ಜನರಿಗೆ ಅಂಚೆ ಮೂಲಕವೂ ಸಹ ರವಾನಿಸುತ್ತಿದ್ದು, ಕೆಲ ಬಿಜೆಪಿ ಕಾರ್ಯಕರ್ತರು ಮತ್ತು ಲೋಕಸಭಾ ಆಕಾಂಕ್ಷಿತರ ಕೆಂಗಣ್ಣಿಗೆ ಗುರಿಯಾಗಿದ್ದಾರೆಂದರೆ ತಪ್ಪಾಗಲಾರದು.

 

 

 

 

 

 

ಏಕೆಂದರೆ ಕಳೆದ 6-7 ವರ್ಷಗಳಿಂದಲೂ ಜಿಲ್ಲಾ ಬಿಜೆಪಿ ಪಕ್ಷಕ್ಕೆ ತನ್ನದೇ ಆದ ಬಂಡವಾಳವನ್ನು ಹಾಕಿಕೊಂಡು ಬರುತ್ತಿರುವ ಸ್ಪೂರ್ತಿ ಡೆವಲಪರ್ಸ್ ಮಾಲೀಕರಾದ ಎಸ್.ಪಿ.ಚಿದಾನಂದ್ ಅವರು ತಮ್ಮ ಆಪ್ತ ವಲಯದಲ್ಲಿ ಈ ಕುರಿತು ಬೆಸರವನ್ನು ವ್ಯಕ್ತಿಪಡಿಸಿದ್ದಾರೆ, ಏಕೆಂದರೆ ಅವರು ಇತ್ತೀಚೆಗೆ ಭಾಗವಹಿಸುತ್ತಿರುವ ಎಲ್ಲಾ ವೇದಿಕೆ ಕಾರ್ಯಕ್ರಮಗಳಲ್ಲಿ, ಧಾರ್ಮಿಕ ಕಾರ್ಯಕ್ರಮಗಳಲ್ಲಿ, ಪಕ್ಷದ ಕಾರ್ಯಕ್ರಮಗಳು ಸೇರಿದಂತೆ ಬಹುತೇಕ ತುಮಕೂರು ಜಿಲ್ಲಾ ಜನತೆಗೆ ತಾವು 2024ರ ಲೋಕಸಭಾ ಚುನಾವಣೆಯ ಬಿಜೆಪಿ ಪಕ್ಷದ ಪ್ರಬಲ ಆಕಾಂಕ್ಷಿ ಜೊತೆಗೆ ತನಗೇ ಟಿಕೇಟ್ ಬಹುತೇಕ ಖಚಿತ ಎಂದು ಬಹಿರಂಗವಾಗಿ ಹೇಳಿಕೊಂಡು ಓಡಾಡುತ್ತಿದ್ದಾರೆ, ಇದಕ್ಕೆ ಬಿಜೆಪಿ ಪಕ್ಷದಲ್ಲಿಯೂ ಸಹ ಅವರ ಮಾತುಗಳಿಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ.

 

 

 

 

 

ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಡಾ. ಎಸ್.ಪರಮೇಶ್ ಅವರ ಕರಪತ್ರ ಮತ್ತು ಶುಭಾಶಯ ಪತ್ರದಿಂದ ಅವರಿಗೆ ಮುಜುಗರದೊಂದಿಗೆ ಪಕ್ಷದ ಹಿರಿಯ ನಾಯಕರೊಂದಿಗೆ ತಮ್ಮ ಅಳಲನ್ನು ತೋಡಿಕೊಳ್ಳಲು ಆಗದೇ ತಮ್ಮ ಆಪ್ತ ವಲಯದೊಂದಿಗೆ ನೋವನ್ನು ಹಂಚಿಕೊಂಡಿದ್ದಾರೆ.

 

 

 

 

 

ಇನ್ನು ಹಿರಿಯ ಮುತ್ಸದಿ ರಾಜಕಾರಣಿ, ತುಮಕೂರು ಲೋಕಸಭಾ ಹಾಲಿ ಸಂಸದರು, ರಾಜಕೀಯ ಪ್ರವೀಣರು ಆಗಿರುವ ಜಿ.ಎಸ್.ಬಸವರಾಜು ಅವರು ತಾವು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರೂ ತನಗೆ ಬೇಕಾದ ವ್ಯಕ್ತಿಗೆ ಟಿಕೇಟ್ ಕೊಡಿಸಿಕೊಟ್ಟು ತಾನು ಸರ್ವ ರೀತಿಯಲ್ಲಿಯೂ ಬೆನ್ನೆಲುಬಾಗಿ ನಿಲ್ಲುತ್ತೇನೆಂದು ಬಹಿರಂಗವಾಗಿ ಹೇಳಿಕೊಂಡಿದ್ದಾರೆ, ಜೊತೆಗೆ ಇತ್ತೀಚೆಗೆ ಶ್ರೀ ಸಿದ್ಧಗಂಗಾ ಮಠದಲ್ಲಿ ಮಾಜಿ ಸಚಿವರಾದ ವಿ.ಸೋಮಣ್ಣರವರು ನಿರ್ಮಿಸಿರುವ ಕಟ್ಟಡದ ಉದ್ಘಾಟನೆಯ ಸಂದರ್ಭದಲ್ಲಿ ನಡೆಯುತ್ತಿದ್ದ ಚರ್ಚೆಗಳ ಸಂದರ್ಭದಲ್ಲಿ ವಿ.ಸೋಮಣ್ಣ ಮತ್ತು ಅವರ ಸುಪುತ್ರರಾದ ಅರುಣ್ ಸೋಮಣ್ಣರವರ ಬೆಂಬಲಕ್ಕೆ ನಿಂತು ತಾವುಗಳು ಇಚ್ಛೆ ಪಟ್ಟಲ್ಲಿ ನನ್ನ ಕ್ಷೇತ್ರವನ್ನು ತಮಗೆ ಅಥವಾ ತಮ್ಮ ಸುಪುತ್ರನಿಗೆ ಬಿಟ್ಟು ಕೊಡುವುದಾಗಿ ವಾಗ್ದಾನ ಮಾಡಿದ್ದಾರೆಂದು, ಜಿ.ಎಸ್.ಬಸವರಾಜು ಅವರ ಆಪ್ತ ವಲಯದಲ್ಲಿ ಕೇಳಿ ಬರುತ್ತಿದೆ, ಆದರೆ ಡಾ. ಎಸ್.ಪರಮೇಶ್ ಅವರ ಈ ನಡೆಯಿಂದ ಜಿ.ಎಸ್.ಬಿ. ಅವರ ಮನಸ್ಸಿಗೆ ಕೊಂಚ ಬೆಸರವಾಗಿದೆಂದು ಹೇಳಲಾಗಿದೆ.

 

 

 

 

ಇನ್ನುಳಿದಂತೆ ಕಾಂಗ್ರೆಸ್ ಪಕ್ಷದಿಂದ ಹೊರ ಬಂದು ತುಮಕೂರು ಜಿಲ್ಲಾ ಬಿಜೆಪಿ ಪಾಳಯದಲ್ಲಿ ಅದರಲ್ಲಿಯೂ ತುಮಕೂರು ಗ್ರಾಮಾಂತರ ಶಾಸಕರಾದ ಬಿ.ಸುರೇಶ್ ಗೌಡರವರ ಜೊತೆಗೆ ಅತ್ಯಂತ ನಿಕಟ ಹೊಂದಿರುವ ಸದ್ಗುಣ ರಾಜಕಾರಣಿ, ಸೌಮ್ಯ ವ್ಯಕ್ತಿ, ಮಾಜಿ ಸಂಸದರಾದ ಎಸ್.ಪಿ.ಮುದ್ದಹನುಮೇಗೌಡರವರು ಎಲ್ಲಿಯೂ ಸಹ ಬಹಿರಂಗವಾಗಿ ತಾವು ಆಕಾಂಕ್ಷಿ ಎಂದು ಹೇಳಿಕೊಳ್ಳದೇ ಇದ್ದರೂ ಟವಲ್ ಒಂದನ್ನು ಲೋಕಸಭಾ ಟಿಕೇಟ್ ಹಾಕಿರುವುದು ಓಪನ್ ಸೀಕ್ರೇಟ್ ಆಗಿದೆ, ಜೊತೆಗೆ ತಮ್ಮ ಸ್ನೇಹಿತರು, ಬೆಂಬಲಿಗರೊಂದಿಗೆ ಚರ್ಚೆ ಮಾಡಿರುವ ಅವರು 2024ರ ಲೋಕಸಭಾ ಚುನಾವಣೆಯು ತನ್ನ ಕೊನೆಯ ಚುನಾವಣೆಯನ್ನಾಗಿಸಿಕೊಳ್ಳುತ್ತೇನೆಂದು ಹೇಳಿಕೊಂಡಿರುವ ಉದಾಹರಣೆಗಳು ಇವೆ, ಏಕೆಂದರೆ ಇತ್ತೀಚೆಗೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಿಂದ ಒಕ್ಕಲಿಗ ಸಮುದಾಯದ ಮುಖಂಡನಾಗಿರುವ ತನಗೆ ಹೆಚ್ಚು ಲಾಭವಾಗುತ್ತದೆಂದು ಹೇಳಿಕೊಂಡಿದ್ದಾರೆ ಜೊತೆಗೆ ಅವರು ದೇವೇಗೌಡರ ಕುಟುಂಬದೊಂದಿಗೂ ಸಹ ಉತ್ತಮ ಸ್ನೇಹವನ್ನು ಇಟ್ಟುಕೊಂಡಿದ್ದಾರೆ. ಆದರೆ ಡಾ. ಎಸ್.ಪರಮೇಶ್ ಅವರ ಈ ನಡೆಯಿಂದ ಅವರ ಮನಸ್ಸಿಗೂ ಸಹ ಬೇಜಾರ್ ಆಗಿದೆ ಎನ್ನಲಾಗಿದೆ.

 

 

 

 

 

 

ಡಾ. ಎಸ್ ಪರಮೇಶ್ ಅವರು ವ್ಯಕ್ತಿಗತವಾಗಿ ಸೌಮ್ಯ ಸ್ವಭಾವದ ವ್ಯಕ್ತಿಗಳಾಗಿದ್ದು, ವೈದ್ಯಕೀಯ ವೃತ್ತಿಯಲ್ಲಿ ಅಗಮ್ಯ ಸಾಧನೆಯನ್ನು ಮಾಡಿದ್ದಾರೆ ಜೊತೆಗೆ ಅವರು ಶಿಕ್ಷಕರಾಗಿ, ಉತ್ತಮ ಲೇಖಕರಾಗಿಯೂ ಗುರುತಿಸಿಕೊಂಡಿದ್ದಾರೆ ಅಲ್ಲದೇ ಶ್ರೀ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕವನ್ನು ಸಹ ಹೊಂದಿದ್ದಾರೆ. ಜೊತೆಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲಾ ಬಿಜೆಪಿ ಖಜಾಂಚಿಯಾಗಿರುವ ಅವರು ಉತ್ತಮ ಕಾರ್ಯವನ್ನು ನಿರ್ವಹಣೆ ಮಾಡಿ ಎಲ್ಲರ ಮೆಚ್ಚುಗೆಗೆ ಸಹ ಪಾತ್ರರಾಗಿದ್ದಾರೆ. ಆದರೆ ಇತ್ತೀಚೆಗೆ ಹರಿದಾಡುತ್ತಿರುವ ಅವರ ಶುಭಾಶಯ ಪತ್ರ ಮತ್ತು ಕರ ಪತ್ರ ಹಾಗೂ ಅದರಲ್ಲಿ ನಮೂದಾಗಿರುವ ಲೋಕಸಭಾ ಕ್ಷೇತ್ರದ ಆಕಾಂಕ್ಷಿ ಎಂಬ ಒಕ್ಕಣೆ ಮುಂದಿನ ದಿನಗಳಲ್ಲಿ ಬಿಜೆಪಿ ಪಾಳಯದಲ್ಲಿ ಯಾವ ರೀತಿಯಾಗಿ ತಿರುವು ಪಡೆದುಕೊಳ್ಳುತ್ತದೆಯೋ ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!