ಖಾಸಗಿ ಫೈನಾನ್ಸ್ ಕಿರುಕುಳ ಮಹಿಳೆ ಆತ್ಮಹತ್ಯೆ, ಜಿಲ್ಲೆಯಲ್ಲಿ ನಿಲ್ಲದ ಸಾವಿನ ಸರಮಾಲೆ….!
ತಿಪಟೂರು /ತುಮಕೂರು- ತುಮಕೂರು ಜಿಲ್ಲೆಯಲ್ಲಿ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆಗೆ ಕಡಿವಾಣವೇ ಇಲ್ಲವೇನೋ ಎನ್ನುವ ಸ್ಥಿತಿಗೆ ಬಂದು ನಿಂತಂತೆ ಕಾಣುತ್ತಿದೆ.
ಕಾರಣ ಕಳೆದ ತಿಂಗಳು ತುಮಕೂರು ನಗರದ ಕುಟುಂಬ ಒಂದು ಮೀಟರ್ ಬಡ್ಡಿ ದಂಧೆ ಕೋರರ ಕಿರುಕುಳಕ್ಕೆ ಬೇಸತ್ತು ಕುಟುಂಬದ ಐವರು ಸದಸ್ಯರು ಆತ್ಮಹತ್ಯೆ ಶರಣಾಗಿದ್ದು ರಾಜ್ಯದ್ಯಂತ ತೀವ್ರ ದಿಗ್ಭ್ರಮೆ ಉಂಟು ಮಾಡಿತ್ತು . ಘಟನೆಗೆ ಸಂಬಂಧಿಸಿದಂತೆ ಕಿರುಕುಳ ನೀಡಿದ ಐವರು ಮಂದಿಯನ್ನ ಪೊಲೀಸರು ವಶಕ್ಕೆ ತೆಗೆದಿಕೊಂಡು ಜೈಲಿಗೆ ಕಳುಹಿಸಿದ್ದಾರೆ ಇದಕ್ಕೆ ಮುಂದುವರಿದ ಭಾಗವಾಗಿ.
ತುಮಕೂರು ನಗರದಲ್ಲಿ ಮೀಟರ್ ಬಡ್ಡಿ ದಂಧೆ ಕೋರರ ಕಿರುಕುಳ ನಿಲ್ಲದೆ ಪ್ರತಿನಿತ್ಯ ಒಂದಲ್ಲ ಒಂದು ಬಡಾವಣೆಯಲ್ಲಿ ಬಡ್ಡಿ ಕಿರುಕುಳಕ್ಕೆ ಬೇಸತ್ತ ಸಾರ್ವಜನಿಕರು ಪೊಲೀಸ್ ಠಾಣೆಯಲ್ಲಿ ದೂರುಗಳ ಸರಮಾಲೆಯನ್ನೇ ಸಲ್ಲಿಸುತ್ತಿದ್ದಾರೆ ಇನ್ನು ಘಟನೆಯ ಸಂಭಂದಿಸಿದಂತೆ ಜಿಲ್ಲೆಯಲ್ಲಿ ಪೊಲೀಸರು ಸಹ ಕಟ್ಟುನಿಟ್ಟಿನ ಕ್ರಮ ಕೈಗೊಂಡು ಯಾವುದೇ ಒತ್ತಡಕ್ಕೆ ಮಣಿಯದೆ ಕೇಸು ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳುವುದು ಮುಂದುವರೆದಿದೆ.
ಆದರೆ ಜಿಲ್ಲೆಯಲ್ಲಿ ಇನ್ನೂ ಬಡ್ಡಿಗೆ ಹಣ ನೀಡಿರುವ ಬಡ್ಡಿಕೋರರ ಕಿರುಕುಳ ಹಾಗೂ ಖಾಸಗಿ ಫೈನಾನ್ಸ್ ರವರ ಕಿರುಕುಳ ಇನ್ನು ಕಡಿಮೆಯಾಗಿಲ್ಲ ಕಾರಣ .
ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿ ಮಹಿಳೆಯೊಬ್ಬಳು ಖಾಸಗಿ ಫೈನಾನ್ಸ್ ನವರ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದು ಮತ್ತಷ್ಟು ಆತಂಕ ತಂದೊಡ್ಡಿದೆ.
ಇನ್ನು ಮೃತಪಟ್ಟಿರುವ ಮಹಿಳೆ ಪುಷ್ಪಲತಾ ಮೂಲತಃ ಬಂಟವಾಳ ತಾಲೂಕಿನವರಾಗಿದ್ದು ತನ್ನ ಕುಟುಂಬಸ್ಥರೊಂದಿಗೆ ತಿಪಟೂರು ತಾಲೂಕಿನ ಕುಪ್ಪಾಳು ಗ್ರಾಮದಲ್ಲಿ ವಾಸವಾಗಿದ್ದಾರೆ.
ಖಾಸಗಿ ಫೈನಾನ್ಸಿನಲ್ಲಿ 90 ಸಾವಿರ ಹಣವನ್ನು ಪಡೆದಿದ್ದ ಪುಷ್ಪಲತಾ ಪಡೆದಿರುವ ಹಣಕ್ಕೆ ಬಡ್ಡಿ ಕಟ್ಟುತ್ತಿದ್ದರು ಆದರೆ ಆರೋಗ್ಯ ಸರಿ ಇಲ್ಲದ ಕಾರಣ ಈ ತಿಂಗಳು ಬಡ್ಡಿ ಕಟ್ಟಲು ಸಾಧ್ಯವಾಗಿರಲಿಲ್ಲ ಆದರೆ ಬಡ್ಡಿ ಕಟ್ಟಲು ಖಾಸಗಿ ಫೈನಾನ್ಸ್ ವ್ಯಕ್ತಿಗಳು ಮಹಿಳೆ ಆಸ್ಪತ್ರೆಗೆ ತೆರಳಿದ್ದ ಸಂದರ್ಭದಲ್ಲಿ ಆಸ್ಪತ್ರೆಗೆ ತೆರಳಿ ಬಡ್ಡಿ ಕಟ್ಟಲು ಒತ್ತಡ ಹೇರಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದಾರೆ .
ಇದರಿಂದ ಬೇಸತ್ತ ಪುಷ್ಪಲತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ ಮೃತಪಟ್ಟಿರುವ ಪುಷ್ಪಲತಾ ಈ ತಿಂಗಳ ಕಂತಿನ ಹಣ ಕಟ್ಟಲು 20 ದಿನ ತಡವಾಗಿದ್ದು ಹಣ ಕಟ್ಟಲು ಫೈನಾನ್ಸ್ ನವರ ಒತ್ತಡ ಸಹ ಹೆಚ್ಚಾಗಿತ್ತು ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.
ಇನ್ನು ಕೆ ಬಿ ಕ್ರಾಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಅದೇನೇ ಇರಲಿ ಮುಗ್ಧ ಜನರು ಅಮಾಯಕರು ಖಾಸಗಿ ಫೈನಾನ್ಸ್ ಹಾಗೂ ಮೀಟರ್ ಬಡ್ಡಿ ದಂಧೆ ಕೋರರ ಚಕ್ರಕ್ಕೆ ಸಿಲುಕಿ ಒದ್ದಾಡುತ್ತಿದ್ದು ಇನ್ನಾದರೂ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಕಟ್ಟುನಿಟಿನ ಕ್ರಮ ಕೈಗೊಳ್ಳುವುದೇ ಕಾದುನೋಡಬೇಕಿದೆ