ಪಿ.ಕೆ.ಎಸ್ ನೌಕರರಿಗೆ ಪಾಲಿಕೆಯಿಂದ ಊಟದ ಜೊತೆ ಜಿರಲೆ ,ಹುಳ ಫ್ರೀ…..!!

ಪಿ.ಕೆ.ಎಸ್ ನೌಕರರಿಗೆ ಪಾಲಿಕೆಯಿಂದ ಊಟದ ಜೊತೆ ಜಿರಲೆ ,ಹುಳ ಫ್ರೀ…..!!

 

 

ತುಮಕೂರು – ತುಮಕೂರು ಮಹಾನಗರ ಪಾಲಿಕೆ ವತಿಯಿಂದ ಪಾಲಿಕೆ (ಪಿಕೆಎಸ್) ನೌಕರರಿಗೆ ನೀಡುತ್ತಿರುವ ಊಟದ ಬಗ್ಗೆ ಗಂಭೀರ ಆರೋಪ ಕೇಳಿ ಬರುತ್ತಿದ್ದು ನೌಕರರಿಗೆ ನೀಡುತ್ತಿರುವ ಊಟದಲ್ಲಿ ಜಿರಲೆ ಹಾಗೂ ಮೋಟ್ಟೆಯಲ್ಲಿ ಹುಳ ಕಂಡುಬಂದಿದ್ದು ಪಾಲಿಕೆ ಆಡಳಿತದ ವೈಫಲ್ಯಕ್ಕೆ ಹಿಡಿದ ಕನ್ನಡಿ ಎಂದರೆ ತಪ್ಪಾಗಲಾರದು.

 

 

 

 

ಇನ್ನು ತುಮಕೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಬರುವ 35 ವಾರ್ಡ್ಗಳಲ್ಲಿ ಕೆಲಸ ನಿರ್ವಹಿಸಿರುವ ಪೌರಕಾರ್ಮಿಕರಿಗೆ ದಿನನಿತ್ಯ ಪೌಷ್ಟಿಕ ಆಹಾರ ನೀಡುವ ನಿಟ್ಟಿನಲ್ಲಿ ಹೊಸಳ್ಳಿ ಮೂಲದ ವ್ಯಕ್ತಿಗೆ ಊಟ ಸರಬರಾಜು ಮಾಡಲು ಟೆಂಡರ್ ನೀಡಲಾಗಿದ್ದು ಇನ್ನು ಟೆಂಡರ್ ಪಡೆದಿರುವ ವ್ಯಕ್ತಿ ಸರಬರಾಜು ಮಾಡುತ್ತಿರುವ ಊಟದಲ್ಲಿ ಜಿರಳೆ ಹಾಗೂ ಮೊಟ್ಟೆ ಯಲ್ಲಿ ಹುಳ ಕಂಡುಬಂದಿದ್ದು.

 

 

ಇಂತಹ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ವ್ಯಕ್ತಿಯ ಮೇಲೆ ಸಾಕಷ್ಟು ಪೌರಕಾರ್ಮಿಕರು ಬೇಸರ ವ್ಯಕ್ತಪಡಿಸಿದ್ದಾರೆ

.

 

 

 

ಇನ್ನು ಡಿಸೆಂಬರ್ ತಿಂಗಳಲ್ಲಿ ಸರಬರಾಜು  ಮಾಡಿರುವ ಊಟಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 18ರಂದು ವಾರ್ಡ್ ನಂಬರ್ 03 ರಲ್ಲಿ ನೀಡಿರುವ ಅನ್ನದಲ್ಲಿ ಜಿರಳೆ ಹಾಗೂ ಡಿಸೆಂಬರ್ 22ರಂದು ವಾರ್ಡ್ ನಂಬರ್ 01 ರಲ್ಲಿ ನೀಡಿರುವ ಮೊಟ್ಟೆಯಲ್ಲಿ ಹುಳ ಕಂಡುಬಂದಿರುವುದೇ ಕಳಪೆ ಆಹಾರ ನೀಡುತ್ತಿರುವುದು ಪ್ರತ್ಯಕ್ಷ ಸಾಕ್ಷಿಯಾಗಿದೆ.

 

 

 

 

 

ಪಾಲಿಕೆಯಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರಿಗೆ ಪೌಷ್ಟಿಕ ಆಹಾರ ನೀಡುವ ಮೂಲಕ ಪೌರಕಾರ್ಮಿಕರ ಆರೋಗ್ಯವನ್ನು ಕಾಪಾಡುವ ಜವಾಬ್ದಾರಿ ಪಾಲಿಕೆಯ ಮೇಲೆ ಇದ್ದು ಪ್ರತಿನಿತ್ಯ ಪಾಲಿಕೆ ನೌಕರರಿಗೆ ಸರಬರಾಜು ಮಾಡುವ ಟೆಂಡರ್ ದಾರರು ಪ್ರತಿನಿತ್ಯ ಕುಡಿಯಲು ನೀರು, ಇಡ್ಲಿ, ದೋಸೆ ,ಪೂರಿ ಹೀಗೆ ಪ್ರತಿನಿತ್ಯವೂ ವಿವಿಧ ಬಗೆಯ ಆಹಾರ ಪೂರೈಕೆ ಮಾಡುವಂತೆ ಟೆಂಡರ್ ನಲ್ಲಿ ತಿಳಿಸಿದರು ಸಹ ಇದು ಯಾವುದನ್ನು ನಿರ್ವಹಿಸದೆ ಕೇವಲ ಒಂದು ಬಗೆಯ ಆಹಾರವನ್ನೇ ಪ್ರತಿನಿತ್ಯ ನೀಡುತ್ತಿದ್ದಾರೆ ಎನ್ನುವ ಗಂಭೀರ ಆರೋಪ ಸಹ ಕೇಳಿಬಂದಿದೆ.

 

 

 

 

ಇನ್ನು ಇದರ ಮೇಲುಸ್ತುವಾರಿಯನ್ನ ನಿಭಾಯಿಸುವ ಪಾಲಿಕೆಯ ಪರಿಸರ ಇಂಜಿನಿಯರ್ ಸಹ ಇದ್ಯಾವುದನ್ನು ಗಮನಿಸದೆ ಇರುವುದು ಕಳಪೆ ಆಹಾರ ಸರಬರಾಜು ಆಗುತ್ತಿರುವುದಕ್ಕೆ ಕಾರಣ ಎಂದು ಪಾಲಿಕೆಯ ಕೆಲ ಪೌರ ಕಾರ್ಮಿಕರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

 

 

 

 

 

ಇನ್ನಾದರೂ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡು ಹಿರಿಯ ಅಧಿಕಾರಿಗಳು ಕಳಪೆ ಆಹಾರಕ್ಕೆ ಕಡಿವಾಣ ಹಾಕಿ, ಉತ್ತಮ ಆಹಾರ ನೀಡುವಲ್ಲಿ ಕ್ರಮ ಕೈಗೊಳ್ಳುವರೆ ಕಾದುನೋಡಬೇಕಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!