ಮಹಿಳಾ ಅಧಿಕಾರಿಯ ತೇಜೋವಧೆ , ಆರೋಪ ತಳ್ಳಿ ಹಾಕಿದ ಮಾಜಿ ಎಪಿಎಂಸಿ ಸದಸ್ಯ,
ತುಮಕೂರು_ ತುಮಕೂರು ಎಪಿಎಂಸಿಯ ಕಾರ್ಯದರ್ಶಿಯಾಗಿರುವ ಮಹಿಳಾ ಅಧಿಕಾರಿ ವಿರುದ್ದ ಅಪಪ್ರಚಾರದ ಲೇಖನ ಪ್ರಕಟಿಸಿರುವ ಖಾಸಗಿ ವೆಬ್ಸೈಟ್ ಆರೋಪ ಆಧಾರ ರಹಿತವಾದದು,ಭ್ರಷ್ಟಾಚಾರ ಚಟುವಟಿಕೆಗಳಿಗೆ ಕಡಿವಾಣ ಹಾಕಿರುವ ಎಪಿಎಂಸಿ ಕಾರ್ಯದರ್ಶಿ ವಿರುದ್ದ ತೇಜೋವಧೆಗೆ ಮುಂದಾಗಿರುವುದನ್ನು ಮಾಜಿ ಎಪಿಎಂಸಿ ಸದಸ್ಯ ಯದುಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.
ಎಪಿಎಂಸಿ ಕಾರ್ಯದರ್ಶಿಯಾಗಿರುವ ಸುಮ ಅವರು ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ಉತ್ತಮ ಕೆಲಸ ನಿರ್ವಹಿಸುತ್ತಿದ್ದು ಜನಸ್ನೇಹಿ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ಇವರ ಏಳಿಗೆಯನ್ನ ಸಹಿಸದ ಕೆಲ ವ್ಯಕ್ತಿಗಳು ಅವರ ತೇಜೋವಧೆಗೆ ಮುಂದಾಗಿದ್ದು ಖಾಸಗೀ ವೆಬ್ಸೈಟ್ ಅಲ್ಲಿ ಅವರ ವಿರುದ್ದ ಅಪಪ್ರಚಾರ ಮಾಡಲಾಗುತ್ತಿದೆ, ಪ್ರಕಟವಾಗಿರುವ ಎಲ್ಲಾ ಅಂಶವು ಸತ್ಯಕ್ಕೆ ದೂರವಾಗಿವೆ. ಪ್ರಾಮಾಣಿಕ ಮಹಿಳಾ ಅಧಿಕಾರಿಯ ವಿರುದ್ಧ ಆರೋಪಗಳು ಮಾಡುವ ವ್ಯಕ್ತಿಗಳು ಇನ್ನಾದರೂ ಎಚ್ಚೆತ್ತುಕೊಳ್ಳಬೇಕು ಇಲ್ಲವಾದಲ್ಲಿ ಮುಂದಿನ ದಿನದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಸಹ ರವಾನಿಸಿದ್ದಾರೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಜಿ ಪರಮೇಶ್ವರ್ ಅವರ ಗಮನಕ್ಕೂ ತಂದು ಆ ಮೂಲಕ ಪ್ರಾಮಾಣಿಕ ಮಹಿಳಾ ಅಧಿಕಾರಿಯ ರಕ್ಷಣೆಗೆ ಎಪಿಎಂಸಿ ವರ್ತಕರು ಮುಂದಾಗಲಿದ್ದೇವೆ ಎಂದಿದ್ದಾರೆ