ತುಮಕೂರು ತಹಸೀಲ್ದಾರ್ ಮೇಲೆ ಅಟ್ರಾಸಿಟಿ ಕಾಯ್ದೆ ಅಡಿ ದೂರು ದಾಖಲಿಸಲು ದೂರು ಸಲ್ಲಿಸಿದ ರೈತ ಕುಟುಂಬ .
ತುಮಕೂರು _ ತುಮಕೂರಿನ ರೈತ ಕುಟುಂಬ ಒಂದು ತುಮಕೂರು ತಹಸಿಲ್ದಾರ್ ಸೇರಿದಂತೆ ಮೂವರು ಅಧಿಕಾರಿಗಳ ಮೇಲೆ ಎಸ್ಸಿ ಎಸ್ಟಿ ದೌರ್ಜನ್ಯ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ದೂರು ಸಲ್ಲಿಸಿರುವ ಘಟನೆ ವರದಿಯಾಗಿದೆ.
ತುಮಕೂರು ತಾಲೂಕಿನ ಗುಳೂರು ಹೋಬಳಿಯ ಕೌತಮಾರನಹಳ್ಳಿ ಗ್ರಾಮದ ಯಲ್ಲಪ್ಪ ಎಂಬುವ ರೈತ ಗೌರಿಪುರ ಸರ್ವೆ ನಂಬರ್ ನ ಐದರಲ್ಲಿ 1.16 ಎಕರೆ ಕೃಷಿ ಜಮೀನಿಗೆ ಸಂಬಂಧಿಸಿದಂತೆ ಹಲವು ವರ್ಷದಿಂದ ಉಳಿಮೆ ಮಾಡುತ್ತಿದ್ದು 1988ನೇ ಸಾಲಿನಲ್ಲಿ ಸರ್ಕಾರವು ಸಾಗುವಳಿ ಚೀಟಿ ನೀಡಿದ್ದು ಇದಕ್ಕೆ ಸಂಬಂಧಿಸಿದಂತೆ ಇತರೆ ಇಡುವಳಿದಾರರ ಹೆಸರು ಜಂಟಿ ಪಾಣಿಯಲ್ಲಿ ನಮೂದಿಸಿರುವ ಹಿನ್ನೆಲೆಯಲ್ಲಿ ದುರಸ್ತು ಮಾಡಿ ಕೊಟ್ಟಿಲ್ಲದ ಕಾರಣ ದುರಸ್ತು ಮಾಡಿ ಕೊಡುವ ಸಂಬಂಧ ಕಳೆದ ಒಂದುವರೆ ವರ್ಷದ ಹಿಂದೆ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದು ಹಲವು ತಿಂಗಳುಗಳಿಂದ ಕೆಲಸಕ್ಕಾಗಿ ಅಲೆದು ಸಾಕಾಗಿರುವ ಕುಟುಂಬ ಕೊನೆಗೆ ಎಸ್ಸಿ ಎಸ್ಟಿ ಕಾಯ್ದೆ ಅನ್ವಯ ದೌರ್ಜನ್ಯ ಪ್ರಕರಣದ ಅಡಿಯಲ್ಲಿ ತುಮಕೂರು ತಾಸಿಲ್ದಾರ್ ಸಿದ್ದೇಶ್ ,ರಾಜಸ್ವ ನಿರೀಕ್ಷಕರಾದ ರಮೇಶ್ ಕುಮಾರ್ ಹಾಗೂ ಗ್ರಾಮ ಲೆಕ್ಕಿಗರಾದ ಭವ್ಯ ಸೇರಿದಂತೆ ಮೂವರು ಇಲಾಖೆ ಸಿಬ್ಬಂದಿಗಳ ಮೇಲೆ ಅಟ್ರಾಸಿಟಿ ಕಾಯ್ದೆ ಅಡಿ ಪ್ರಕರಣ ದಾಖಲಿಸಲು ಕೋರಿ ದೂರು ಸಲ್ಲಿಸಿರುವ ವಿಶೇಷ ಘಟನೆ ವರದಿಯಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿರುವ ರೈತ ಯಲ್ಲಪ್ಪ ಇದುವರೆಗೂ ತಾವು ಸಲ್ಲಿಸಿರುವ ಅರ್ಜಿಗೆ ಯಾವುದೇ ಅಧಿಕಾರಿಗಳು ಕಿವಿ ಗೊಡದ ಕಾರಣ ಹಲವು ತಿಂಗಳುಗಳಿಂದ ಕಚೇರಿಗೆ ಅಲೆದಾಡಿ ಸಾಕಾಗಿ ಕೊನೆಗೆ ತಾಸಿಲ್ದಾರ್, ಅರ್ ಐ ಸೇರಿದಂತೆ ಮೂವರ ಮೇಲೆ ಪ್ರಕರಣ ದಾಖಲಿಸಲು ದೂರು ಸಲ್ಲಿಸಿರುವದಾಗಿ ಮಾಹಿತಿ ನೀಡಿದ್ದಾರೆ.
ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನೀಡಿರುವ ಭೂಮಿ ಮತ್ತು ವಸತಿ ಹಕ್ಕು ಹೋರಾಟ ಸಮಿತಿಯ ಮುಖಂಡ ಹಂದ್ರಾಳ ನಾಗಭೂಷಣ್ ಮಾತನಾಡಿ ಪರಿಶಿಷ್ಟ ಜಾತಿಯ ಸಮುದಾಯದ ರೈತ ಎಲ್ಲಪ್ಪ ಎಂಬುವರಿಗೆ ಸರ್ಕಾರ 1.16 ಎಕರೆ ಕೃಷಿ ಜಮೀನು ಮಂಜೂರು ಮಾಡಿದ್ದು ಇದಕ್ಕೆ ಸಂಬಂಧಿಸಿದಂತೆ ದುರಸ್ತು ಮಾಡಲು ರೈತ ಯಲ್ಲಪ್ಪ ಸಲ್ಲಿಸಿರುವ ಅರ್ಜಿಯ ಹಿನ್ನೆಲೆಯಲ್ಲಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಸುಮ್ಮನಾಗಿದ್ದು ಇದಕ್ಕಾಗಿ ಹಲವು ತಿಂಗಳುಗಳಿಂದ ರೈತ ಕುಟುಂಬ ತಾಲೂಕು ಕಚೇರಿಗೆ ಅಲೆದು ಸಾಕಾಗಿದೆ ಹಿನ್ನಲೆಯಲ್ಲಿ ರೈತ ಕುಟುಂಬ ಯಾವುದೇ ಸರ್ಕಾರಿ ಸೌಲಭ್ಯ ಪಡೆಯದೆ ವಂಚಿತವಾಗಿದ್ದು ಸರ್ಕಾರದ ಅಟ್ರಾಸಿಟಿ ಕಾಯ್ದೆಯ ಆದೇಶದ ಅನ್ವಯ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ಪಡೆಯಲು ಪರಿಶಿಷ್ಟ ಜಾತಿಯ ಸಮುದಾಯದವರು ಅರ್ಹರಿದು ಅಂತಹ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ಪಡೆಯಲು ಮುಂದಾದ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯ ಪಡೆಯಲು ಸಹಾಯ ಮಾಡದೆ ಇರುವ ಅಧಿಕಾರಿಗಳ ಕೆಲಸವೂ ಸಹ ದೌರ್ಜನ್ಯ ಕಾಯ್ದೆಯ ಅಡಿಯಲ್ಲಿ ಬರುವ ಹಿನ್ನೆಲೆಯಲ್ಲಿ ಕಾಯಿದೆಯ ಅಡಿಯಲ್ಲಿಯೇ ತಸಿಲ್ದಾರ್ ವಿರುದ್ಧ ದೂರು ಸಲ್ಲಿಸಿದ್ದು ಕೂಡಲೇ ತಾಸಿಲ್ದಾರ್ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲು ಮಾಡಿ ನೊಂದ ರೈತ ಕುಟುಂಬಕ್ಕೆ ನ್ಯಾಯ ಒದಗಿಸಲು ಮನವಿ ಮಾಡಿರುವುದಾಗಿ ಮಾಹಿತಿ ನೀಡಿದ್ದಾರೆ.
ರೈತ ಕುಟುಂಬಗಳು ಸರ್ಕಾರಿ ಸೌಲಭ್ಯದಿಂದ ವಂಚಿತರಾಗುತ್ತಿದ್ದು ಇದರಿಂದ ಬಡವರು ಬಡವರಾಗಿಯೇ ಉಳಿಯುತ್ತಿದ್ದು ಅವುಗಳನ್ನು ಪುನಶ್ಚೇತನ ಗೊಳಿಸುವ ಹಿನ್ನೆಲೆಯಲ್ಲಿ ಇಂತಹ ರೈತ ಕುಟುಂಬಗಳ ನೋವಿಗೆ ಸಂಘಟನೆ ಬೆಂಬಲವಾಗಿ ನಿಂತಿದ್ದು ಕೂಡಲೇ ತಾವು ಸಲ್ಲಿಸಿರುವ ದೂರಿಗೆ ನ್ಯಾಯ ಒದಗಿಸುವ ಭರವಸೆಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದು ಇನ್ನೂ ತಾವು ಸಲ್ಲಿಸಿರುವ ದೂರು ಹಿನ್ನೆಲೆಯಲ್ಲಿ ಕೇಸ್ ದಾಖಲಾಗದೆ ಇದ್ದಲ್ಲಿ ಮುಂದಿನ ದಿನದಲ್ಲಿ ನಮ್ಮ ಹೋರಾಟ ಮುಂದುವರೆಯುವುದು ಎಂದು ಎಚ್ಚರಿಕೆಯ ಸಂದೇಶವನ್ನು ಸಹ ರವಾನಿಸಿದ್ದಾರೆ.
ಅದೇನೇ ಇರಲಿ ದೌರ್ಜನ್ಯ ಕಾಯ್ದೆ ಅಡಿ ನೊಂದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗಗಳ ಕುಟುಂಬಗಳಿಗೆ ಸರ್ಕಾರಿ ಸೌಲಭ್ಯಗಳು ವಂಚಿತವಾಗುತ್ತಿದ್ದು ಅವುಗಳ ಬೆನ್ನಲ್ಲೇ ಇಂತಹ ವಿಶೇಷ ಪ್ರಕರಣ ಹೊರಬಂದಿರುವುದು ಮತ್ತಷ್ಟು ಅಧಿಕಾರಿಗಳ ವರ್ಗಗಳಲ್ಲಿ ಚಿಂತೆಗೀಡು ಮಾಡಿದೆ ಎಂದರೆ ತಪ್ಪಾಗಲಾರದು