ಪ್ರಯಾಣಿಕನ ಜೋಬಿನಲ್ಲಿದ್ದ ಹಣ ಪಿಕ್ ಪ್ಯಾಕೆಟ್ , ಕಳ್ಳನ ಹುಡುಕಲು ಪೊಲೀಸ್ ಠಾಣೆಗೆ ಬಸ್ ತಂದ ಡ್ರೈವರ್ ಮುಂದೆ ಏನಾಯಿತು…..????
ತುಮಕೂರು – ಬಸ್ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬನ ಜೇಬಿನಲ್ಲಿದ್ದ ಹಣ ಪಿಕ್ ಪ್ಯಾಕೆಟ್ ಆಗಿದ್ದು ಕಳ್ಳನನ್ನ ಹುಡುಕಲು ಬಸ್ಸನ್ನು ಪೊಲೀಸ್ ಠಾಣೆಗೆ ಡ್ರೈವರ್ ತೆಗೆದುಕೊಂಡು ಹೋದ ಘಟನೆ ತುಮಕೂರು ನಗರದಲ್ಲಿ ನಡೆದಿದೆ.
ತುಮಕೂರಿನಿಂದ ಪಾವಗಡಕ್ಕೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಬಸ್ KA 06 F 1101 ಶನಿವಾರ ಮಧ್ಯಾನ ತುಮಕೂರಿನಿಂದ ಪಾವಾಗಡ ಕ್ಕೆ ಹೊರಟಿದ್ದು ಬಸ್ ನಿಲ್ದಾಣ ಬಿಟ್ಟ ಕೆಲವೇ ಕ್ಷಣದಲ್ಲಿ ಪಾವಗಡದ ಪ್ರಯಾಣಿಕ ಮಾರುತಿ ಎಂಬುವವರ ಜೇಬಿನಲ್ಲಿದ್ದ ಹಣವು ಕ್ಷಣಾರ್ಧದಲ್ಲಿ ಕಳ್ಳರ ಕೈ ಸೇರಿದ್ದು ಕೂಡಲೇ ಕಂಡಕ್ಟರ್ ಗಮನಕ್ಕೆ ತಂದ ಪ್ರಯಾಣಿಕ ಮಾರುತಿ ಬಸ್ಸನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲು ಮನವಿ ಮಾಡಿದ ಹಿನ್ನೆಲೆಯಲ್ಲಿ ಬಸ್ ನ ಡ್ರೈವರ್ ಬಸ್ ಅನ್ನು ತುಮಕೂರು ಡಿವೈಎಸ್ಪಿ ಕಚೇರಿಗೆ ತೆಗೆದುಕೊಂಡು ಹೋದ ಘಟನೆ ನಡೆದಿದ್ದು.
ನಂತರ ಪೊಲೀಸ್ ಠಾಣೆಗೆ ಬಂದ ಬಸ್ನಲ್ಲಿದ್ದ ಸುಮಾರು 60ಕ್ಕೂ ಹೆಚ್ಚು ಪ್ರಯಾಣಿಕರನ್ನು ಬಸ್ಸಿನಿಂದ ಕೆಳಗಿಳಿಸಿ ಪ್ರತಿಯೊಬ್ಬರನ್ನ ತಪಾಸಣೆಗೆ ಒಳಪಡಿಸಿದ ನಂತರ ಬಸ್ಸನ್ನ ಇಂಚಿಂಚು ಬಿಡದೆ ಪೊಲೀಸರು ಜಾಲಾಡಿದರು ಸಹ ಬಸ್ಸಿನಲ್ಲಿ ಯಾವುದೇ ಹಣ ದೊರೆಯಲಿಲ್ಲ.
ಇನ್ನು ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಯಾಣಿಕ ಮಾರುತಿ ಬಸ್ ನಿಲ್ದಾಣ ಬಿಟ್ಟ ಕೆಲವೇ ಕ್ಷಣದಲ್ಲಿ ಜೋಬಿನಲ್ಲಿದ್ದ 13,000 ಹಣ ನಾಪತ್ತೆಯಾಗಿದೆ ಎಂದಿದ್ದು ಘಟನೆಗೆ ಸಂಬಂಧಿಸಿದಂತೆ ಯಾವುದೇ ದೂರು ದಾಖಲಾಗಿಲ್ಲ.
ಇನ್ನು ಬಸ್ ಅನ್ನು ಪೊಲೀಸ್ ಠಾಣೆಗೆ ಕರೆ ತಂದ ಹಿನ್ನೆಲೆಯಲ್ಲಿ ಸುಮಾರು 10 ಮಂದಿ ಪೊಲೀಸರು ಬಸ್ಸು ಹಾಗೂ ಪ್ರಯಾಣಿಕರನ್ನ ತಪಾಸಣೆಗೆ ಒಳಪಡಿಸಿದ್ದು ಸ್ಥಳದಲ್ಲಿದ್ದ ಸಾರ್ವಜನಿಕರ ಹುಬ್ಬಿರುವಂತೆ ಮಾಡಿತ್ತು.
ತುಮಕೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ