ತುಮಕೂರಿನ ಜಿ.ಪ0 ಕುಂದು ಕೊರತೆ ಪರಿಹಾರ ವೇದಿಕೆಯ ಮುಖ್ಯಸ್ಥ ಭುವನಹಳ್ಳಿ ನಾಗರಾಜ್ ಮನೆ ಮೇಲೆ ಲೋಕಾಯುಕ್ತ ದಾಳಿ.
ತುಮಕೂರು – ರಾಜ್ಯಾದ್ಯಂತ ಲೋಕಾಯುಕ್ತ ಅಧಿಕಾರಿಗಳು ಅಕ್ರಮವಾಗಿ ಬೇನಮ್ಮಿ ಆಸ್ತಿ ಮಾಡಿರುವ ಅಧಿಕಾರಿಗಳ ಮನೆ ಮೇಲೆ ನೆನ್ನೆ ರಾಜ್ಯದಾದ್ಯಂತ 40ಕ್ಕೂ ಹೆಚ್ಚು ಕಡೆ ಲೋಕಾಯುಕ್ತ ದಾಳಿ ನಡೆಸಲಾಗಿತ್ತು.
ಇನ್ನು ಲೋಕಾಯುಕ್ತ ದಾಳಿಗೆ ಸಂಬಂಧಿಸಿದಂತೆ ಅದರ ಮುಂದುವರಿದ ಭಾಗವಾಗಿ ತುಮಕೂರಿನ ಜಿಲ್ಲಾ ಪಂಚಾಯತ್ ನಲ್ಲಿ ಕುಂದುಕೊರತೆ ಪರಿಹಾರ ವೇದಿಕೆಯ ಮುಖ್ಯಸ್ಥರಾಗಿರುವ ಭುವನಹಳ್ಳಿ ನಾಗರಾಜ್ ರವರ ಮೇಲೆ ಶುಕ್ರವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮನೆಯನ್ನ ಜಾಲಾಡುತ್ತಿದ್ದಾರೆ.
ಇನ್ನು ನೆನ್ನೆ ಭುವನಹಲ್ಲಿ ನಾಗರಾಜ್ ಮನೆಗೆ ಭೇಟಿ ನೀಡಿದ್ದ ಅಧಿಕಾರಿಗಳು ಮನೆಯಲ್ಲಿ ಯಾರು ಇಲ್ಲದ ಕಾರಣ ವಾಪಸ್ ತೆರಳಿದರು ಇನ್ನು ಶುಕ್ರವಾರ ತುಮಕೂರಿಗೆ ಮನೆಯವರು ವಾಪಸ್ ಬಂದ ಕಾರಣ ಎಂದು ಲೋಕಾಯುಕ್ತ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.
ಶಿರಾ ತಾಲೂಕಿನ ಗ್ರಾಮದ ನಾಗರಾಜ್ ರವರು ನಿವೃತ್ತಿಯಾಗಿ ಎರಡು ವರ್ಷ ಕಳೆದಿದ್ದು ಹೆಚ್ಚುವರಿಯಾಗಿ ತುಮಕೂರಿನ ಜಿಲ್ಲಾ ಪಂಚಾಯತ್ ಕಚೇರಿಯಲ್ಲಿ ಕುಂದು ಕೊರತೆ ಪರಿಹಾರ ವೇದಿಕೆಯ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದರು.
ಬೆಂಗಳೂರು ಹಾಗೂ ತುಮಕೂರು ಲೋಕಾಯುಕ್ತ ಇಲಾಖೆಗೆ ಸೇರಿದ ಅಧಿಕಾರಿಗಳು ಮನೆ ಮೇಲೆ ದಾಳಿ ನಡೆಸಿದ್ದು ಮನೆಯನ್ನ ಶೋಧ ನಡೆಸುತ್ತಿದ್ದಾರೆ.
ಇನ್ನು ತುಮಕೂರಿನ ಆದರ್ಶ ನಗರದಲ್ಲಿ ಇರುವ ಭವ್ಯ ಬಂಗಲೆ ಮೇಲೆ ದಾಳಿ ನಡೆಸಿರುವ ಅಧಿಕಾರಿಗಳು ಮನೆಯನ್ನು ಇಂಚು ಬಿಡದೆ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಇನ್ನು ಲೋಕಾಯುಕ್ತ ದಾಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಇಂದು ಸಂಜೆ ಮಾಹಿತಿ ನೀಡುವ ನಿರೀಕ್ಷೆಯಿದ್ದು ಸಂಜೆವರೆಗೂ ಶೋಧ ಕಾರ್ಯ ಮುಂದುವರೆಯುತ್ತಿದೆ ಎನ್ನಲಾಗಿದೆ.
ಇನ್ನು ಗುರುವಾರ ತುಮಕೂರಿನ TUDA ಕಚೇರಿಯಲ್ಲಿ ಪ್ಲಾನಿಂಗ್ ವಿಭಾಗದ ಜಂಟಿ ನಿರ್ದೇಶಕರಾಗಿದ್ದ ನಾಗರಾಜ್ ರವರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಅಕ್ರಮ ಆಸ್ತಿ ಪತ್ತೆ ಹಚ್ಚಿದ್ದರು