ನಿಧಿ ಹೆಸರಿನಲ್ಲಿ ಸಿಕ್ಕ ಚಿನ್ನದ ಹೆಸರೇಳಿ ಅಮಾಯಕರಿಗೆ ಖೆಡ್ಡ ತೋಡುತ್ತಿರುವ ಗ್ಯಾಂಗ್, ತುಮಕೂರಿನಲ್ಲಿ ಶುರುವಾಯಿತು ಮತ್ತೊಂದು ಮೋಸ ದಾಟ….???
ತುಮಕೂರು – ಇತ್ತೀಚಿನ ದಿನದಲ್ಲಿ ಅಮಾಯಕರಿಗೆ ವಂಚಿಸಲೆಂದು ನಾನ ಮಾರ್ಗಗಳನ್ನು ಅನುಸರಿಸುತ್ತಿರುವ ಮೋಸಗಾರರ ಗ್ಯಾಂಗ್ ಗಳು ಈಗ ಮತ್ತೊಂದು ವಿನೂತನ ಶೈಲಿಯಲ್ಲಿ ಅಮಾಯಕರಿಗೆ ಖೆಡ್ಡ ತೊಡುವ ಮೂಲಕ ಮತ್ತೊಂದು ಮೋಸದಟಕ್ಕೆ ಮುಂದಾಗಿರುವ ಘಟನೆ ತುಮಕೂರಿನಲ್ಲಿ ವರದಿಯಾಗಿದೆ.
ಇತ್ತೀಚಿನ ದಿನದಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ ಸೈಬರ್ ಕ್ರೈಂ ಹೆಸರಿನಲ್ಲಿ ಅಮಾಯಕರ ಅಕೌಂಟ್ಗಳು, ಓಟಿಪಿ ಮೂಲಕ, ನಕಲಿ ಎಟಿಎಂ ಕಾಡುಗಳು, ವಿಡಿಯೋ ಚಾಟ್ ,ವಿಡಿಯೋ ಕಾಲಿಂಗ್ , ಆನ್ಲೈನ್ ಜೂಜಾಟ ಹೀಗೆ ನಾನಾ ರೀತಿಯಲ್ಲಿ ಅಮಾಯಕರ ಖಾತೆಗಳಿಂದ ಕೋಟ್ಯಂತರ ರೂ ಗಳನ್ನು ಲಪಟಾಯಿಸಿರುವ ಘಟನೆಗಳು ದಿನನಿತ್ಯ ನಮ್ಮ ಕಣ್ಣೆದುರೆ ನಡೆಯುತ್ತಿದ್ದು ಇಂತಹ ಮೋಸದಾಟಕ್ಕೆ ಮತ್ತೊಂದು ಹೊಸ ಆಟವನ್ನು ಪರಿಚಯಿಸಿರುವ ಕಳ್ಳರ ಗ್ಯಾಂಗುಗಳು ಈಗ ವಿನುತನ ಶೈಲಿಯಲ್ಲಿ ಮುಗ್ಧರಿಗೆ ಮೋಸ ಮಾಡಲು ಮತ್ತೊಂದು ಹೊಸ ದಾರಿಯನ್ನ ಹುಡುಕುವ ಮೂಲಕ ದೊಡ್ಡ ಮೋಸ ಮಾಡಲು ಹೊರಟಿದ್ದಾರೆ ಅದೇನ್ ಅಂತೀರಾ…..????
ತುಮಕೂರಿನಲ್ಲಿ ಇತ್ತೀಚಿಗೆ ವ್ಯಕ್ತಿಯೊಬ್ಬ ತಾನು ಸುರೇಶ್ ಎಂಬಾತ ತಮ್ಮ ಹೋಟೆಲ್ ನಲ್ಲಿ ಹಲವು ಬಾರಿ ತಿಂಡಿ ತಿಂದಿದ್ದೇನೆ ಎಂದು ಹೋಟೆಲ್ ಮಾಲೀಕರೋಬ್ಬರಿಗೆ ದೂರವಾಣಿ ಕರೆ ಮಾಡಿ ಪರಿಚಯಿಸಿಕೊಳ್ಳುವ ಅನಾಮದೆಯಾ ವ್ಯಕ್ತಿ ಹೋಟೆಲ್ ಮಾಲೀಕನಿಗೆ ಪರಿಚಯವಿರುವ ಅವರ ಸ್ನೇಹಿತರ ಹೆಸರನ್ನು ಹೇಳಿ ಪರಿಚಯಿಸಿಕೊಂಡ ಅವನು ಹುಬ್ಬಳ್ಳಿಯಿಂದ ಕರೆ ಮಾಡುತ್ತಿದ್ದು ಇತ್ತೀಚೆಗೆ ನಮ್ಮ ತಾತನವರಿಗೆ ಕೋಟೆಯೊಂದರ ಬಳಿ ಮೂರು ಬಿಂದಿಗೆಯಷ್ಟು, ಚಿನ್ನದ ನಿಧಿ ಸಿಕ್ಕಿದ್ದು ಅದನ್ನು ಹಂತ ಹಂತವಾಗಿ ಮಾರುವ ಸಲುವಾಗಿ ತಮಗೆ ಕರೆ ಮಾಡಿದ್ದು ನಮ್ಮಲ್ಲಿ ಇರುವ ಚಿನ್ನವನ್ನು ಅರ್ಧ ಬೆಲೆಗೆ ಮಾರುತಿದ್ದೇವೆ ಒಮ್ಮೆ ಹುಬ್ಬಳ್ಳಿಗೆ ಬಂದು ಸ್ಯಾಂಪಲ್ ನೋಡಿ ಇಷ್ಟವಾದರೆ ತಮಗೆ ಬೇಕಾದಷ್ಟು ಚಿನ್ನವನ್ನು ಅರ್ಧ ಬೆಲೆಯಲ್ಲಿ ತೆಗೆದು ಕೊಂಡು ಹೋಗಿ ಎಂದು ಆಫರ್ ನೀಡುತ್ತಿದ್ದು ಆ ಮೂಲಕ ತಾವಿರುವ ಜಾಗಕ್ಕೆ ಕರೆಸಿಕೊಂಡು ಹೊಂಚು ಹಾಕಿ ತಮ್ಮಲ್ಲಿಗೆ ಬರುವ ವ್ಯಕ್ತಿಗಳ ಬಳಿ ಇರುವ ಚಿನ್ನ ,ಹಣ ,ಬೈಕ್, ಕಾರು ಲಪಟಾಯಿಸುವ ದೊಡ್ಡ ಜಾಲವೊಂದು ಕ್ರಿಯಾಶೀಲವಾಗಿರುವುದು ಕಂಡು ಬರುತ್ತದೆ.
ವ್ಯಾಪಾರ ಮಾಡುವ ಅಂಗಡಿ ಮಾಲೀಕರುಗಳು ತಮ್ಮ ಅಂಗಡಿಗಳ ಮುಂದೆ ಹಾಕಿರುವ ಫ್ಲೆಕ್ಸ್ ಗಳಲ್ಲಿರುವ ದೂರವಾಣಿ ಸಂಖ್ಯೆಗಳನ್ನೇ ಟಾರ್ಗೆಟ್ ಮಾಡುತ್ತಿರುವ ಕದೀಮರು ನಿಧಿ ಹೆಸರಿನಲ್ಲಿ ಸಿಕ್ಕ ಚಿನ್ನವನ್ನ ಮಾರುವ ಆಫರ್ ನೀಡುತ್ತಿದ್ದು ಇದರಿಂದ ತುಮಕೂರಿನ ಹಲವು ವರ್ತಕರು ,ಮುಗ್ಧ ಜನರು ಕಂಗಾಲಾಗಿದ್ದಾರೆ.
ಮುಂದೆ ದೊಡ್ಡ ಸಂಖ್ಯೆಯಲ್ಲಿ ಮುಗ್ಧ ಜನರನ್ನ ವಂಚಿಸಲು ಕಾಯುತ್ತಿರುವ ಇಂತಹ ಕದೀಮರು ಜಿಲ್ಲೆಯಿಂದ ಹೊರ ಜಿಲ್ಲೆಗಳಿಗೆ ಜನರನ್ನ ಕರೆಯಿಸಿಕೊಂಡು ಪ್ರಾಣ ಹಾನಿ, ಮಾನಹಾನಿ, ಬ್ಲಾಕ್ ಮೇಲ್ ಮೂಲಕ ಮುಗ್ಧ ಜನರಿಂದ ಹಣ ಪೀಕುವ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎಂದರೆ ತಪ್ಪಾಗಲಾರದು.
ಇನ್ನು ಇಂತಹ ದೂರುಗಳನ್ನು ಬೆನ್ನತ್ತಿದ ನಮ್ಮ ತಂಡ ದೂರವಾಣಿ ಮೂಲಕ ಕರೆ ಮಾಡಿದ ವ್ಯಕ್ತಿಗೆ ಪರಿಚಯಿಸಿಕೊಂಡ ಮೇಲೆ ಆತ ನೀಡುವ ಆಫರ್ ,ಜಾಗ ಅವುಗಳನ್ನು ಗಮನಿಸಿದರೆ ಇಂತಹ ಕಳ್ಳರ ಗ್ಯಾಂಗುಗಳು ಅಮಾಯಕ ರನ್ನ ಏನು ಮಾಡಲು ಸಹಿಸುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ.
ಇನ್ನಾದರೂ ಸಂಬಂಧಪಟ್ಟ ತುಮಕೂರು ಜಿಲ್ಲಾ ಪೊಲೀಸ್ ಇಲಾಖೆ ಜಾಗೃತ ವಾಗುವ ಮೂಲಕ ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಿ ಇಂತಹ ನಕಲಿ ಗ್ಯಾಂಗ್ಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವುದು ಅವಶ್ಯಕವಾಗಿದೆ.