ಮಣಿಪುರ ಮಹಿಳೆಯರ ಬೆತ್ತಲೆ ಮೆರವಣಿಗೆ ಖಂಡಿಸಿದ ತುಮಕೂರಿನ ಪ್ರಗತಿಪರ ಸಂಘಟನೆಗಳು
ತುಮಕೂರು – ಕಣಿವೆರಾಜ್ಯ ಮಣಿಪುರದಲ್ಲಿ ಮೇ ತಿಂಗಳಿನಲ್ಲಿ ಮಹಿಳೆಯರನ್ನು ಅಮಾನುಷವಾಗಿ ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದ ಪ್ರಕರಣ ತಡವಾಗಿ ಬೆಳಕಿಗೆ ಬಂದ ಬೆನ್ನಲ್ಲೇ ದೇಶ ಹಾಗೂ ರಾಜ್ಯದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು ತುಮಕೂರಿನಲ್ಲೂ ಸಹ ಮಣಿಪುರದ ಘಟನೆಯನ್ನು ಖಂಡಿಸಿ ಪ್ರಗತಿ ಪರರ ವೇದಿಕೆ ಹಾಗೂ ಬೃಹತ್ ಸಂಖ್ಯೆಯ ಮಹಿಳೆಯರಿಂದ ಪ್ರತಿಭಟನೆ ನಡೆಸಲಾಯಿತು.
ಇನ್ನು ಮಣಿಪುರದ ಮಹಿಳೆಯರ ಮೇಲೆ ನಡೆದ ಅಮಾನುಷ ಘಟನೆ ಇಡೀ ದೇಶವೇ ತಲೆ ತಗ್ಗಿಸುವಂತೆ ಆಗಿದ್ದು ಕೂಡಲೇ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಹಾಗೂ ಮಣಿಪುರ ರಾಜ್ಯದ ಮುಖ್ಯಮಂತ್ರಿ ಕೂಡಲೇ ರಾಜೀನಾಮೆ ನೀಡಬೇಕು ಹಾಗೂ ಕೇಂದ್ರ ಸರ್ಕಾರ ಮಣಿಪುರದಲ್ಲಿ ನಡೆಯುತ್ತಿರುವ ಮೈಟಿ ಹಾಗೂ ಕುಕಿ ಸಮುದಾಯದ ನಡುವೆ ನಡೆಯುತ್ತಿರುವ ಘರ್ಷಣೆ ತಡೆಯಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು.
ಇಡೀ ಮಣಿಪುರದಲ್ಲಿ ಅಶಾಂತಿಯ ವಾತಾವರಣದ ನಡುವೆ ಹಲವರು ಪ್ರಾಣ ಕಳೆದುಕೊಂಡಿದ್ದಾರೆ ಇದರ ನಡುವೆ ಮಹಿಳೆಯರ ಮೇಲೆ ನಡೆದಿರುವ ಅಮಾನುಷ ಕೃತ್ಯ ನಿಜಕ್ಕೂ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಲೇಖಕಿ ಬಾ.ಹ ರಮಕುಮಾರಿ ಮಾತನಾಡಿ ಮಣಿಪುರದ ಘಟನೆ ಖಂಡನೀಯ ಇಂತಹ ಘಟನೆಗೆ ವಿಶ್ವದಾದ್ಯಂತ ತೀವ್ರ ಅಕ್ರೋಶ ವ್ಯಕ್ತವಾಗುತ್ತಿದ್ದು ಮಣಿಪುರದಲ್ಲಿ ಎರಡು ಬುಡಕಟ್ಟುಗಳ ನಡುವೆ ನಡೆಯುತ್ತಿರುವ ಪ್ರತಿಭಟನೆ ಯಲ್ಲಿ ಮಣಿಪುರದಲ್ಲಿ ಮಹಿಯೆಯರ ಮೇಲೆ ನಡೆದಿರುವ ಇಂತಹ ಅಮಾನುಷ ಘಟನೆಯನ್ನು ಯಾರು ಸಹ ಸಹಿಸಲು ಸಾಧ್ಯವಿಲ್ಲ ಇಂತಹ ಘಟನೆಗೆ ಅಲ್ಲಿನ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಕೈಕಟ್ಟಿ ಕುಳಿತಿದ್ದೆ ಇಂತಹ ಘಟನೆಗೆ ಕಾರಣ ಮುಂದಾದರೂ ಇಂತಹ ಘಟನೆಗಳು ನಡೆಯದಂತೆ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಇನ್ನು ಪ್ರತಿಭಟನೆಯಲ್ಲಿ ಪ್ರಗತಿಪರ ಮುಖಂಡರಾದ ಬಾ.ಹ ರಮಾಕುಮರಿ , ಸೈಯದ್ ಮುಜೀಬ್, ನರಸಿಂಹಮೂರ್ತಿ, ಅರುಣ್, ಸುಬ್ರಮಣ್ಯ ಕಲ್ಯಾಣಿ, ತಾಜುದ್ದೀನ್ ಶರೀಫ್ ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.