ಕೊಂಗರಹಳ್ಳಿ ಸಮೀಪದ ಜಮೀನೊಂದರಲ್ಲಿ ಚಿರತೆ ದಾಳಿ ಎರಡು ಕರುಗಳು ಸಾವು
ಕೊಳ್ಳೇಗಾಲ :- ಕಳೆದ ಎರಡು ದಿನಗಳ ಹಿಂದೆ ತಾಲೂಕಿನ ಮಧುವನಹಳ್ಳಿ ಗ್ರಾಮದ ಸಮೀಪದಲ್ಲಿರುವ ಸಿದ್ದೇಶ್ವರ ಬೆಟ್ಟದ ಹತ್ತಿರ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಸುತ್ತಮುತ್ತಲ ಜನಕ್ಕೆ ಚಿರತೆ ಬೋನಿಗೆ ಬಿದ್ದಿದ್ದನು ಕಂಡು ಜನ ನಿಟ್ಟುಸಿರು ಬಿಟ್ಟಿದ್ದರು. ಎರಡು ದಿನ ಕೆಳೆಯಲಿಲ್ಲ ಆಗಲೇ ಮತ್ತೊಂದು ಚಿರತೆಯು ಕೊಂಗರಹಳ್ಳಿ ಯಿಂದ ಗುಂಡಾಲ್ ಜಲಾಶಯಕ್ಕೆ ತೆರಳುವ ಮಾರ್ಗದಲ್ಲಿ ಪುರಾತನ ದೊಡ್ಡ ಪಾದಪ್ಪ ದೇವಸ್ಥಾನದ ಸಮೀಪದಲ್ಲಿ ಇರುವ ಬೆಂಗಳೂರು ಮೂಲದ ಬಾರತ್ ಎಂಬುವವರ ಜಮೀನಿನಲ್ಲಿ ಸೋಮವಾರ ರಾತ್ರಿ ಚಿರತೆಯೂ ಎರಡು ಕರುಗಳನ್ನು ಬಲಿ ತೆಗೆದುಕೊಂಡಿದೆ.
ಜಮೀನನಲ್ಲಿ ಕೆಲಸ ಮಾಡುವ ವ್ಯಕ್ತಿಯು ಮಂಗಳವಾರ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಕರುಗಳಿಗೆ ನೀರು ಕುಡಿಸಲು ನೋಡಿದಾಗ ಕರುಗಳು ಸತ್ತು ಬಿದ್ದಿರುವುದನ್ನು ನೋಡಿ ಗಾಬರಿಯಾಗಿದ್ದಾನೆ.ನಂತರ ವಿಚಾರ ತಿಳಿಯುತ್ತಿದ್ದಂತೆ ಕೊಳ್ಳೇಗಾಲ ಮತ್ತು ಬಿ ಆರ್ ಟಿ ಅರಣ್ಯ ಅಧಿಕಾರಿಗಳು ಅರಣ್ಯ ರಕ್ಷಕರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿ ಚಿರತೆ ಸೆರೆ ಹಿಡಿಯಲು ದೊಡ್ಡ ಬೋನನ್ನು ಜಮೀನಿನಲ್ಲಿ ಇರಿಸಿದ್ದಾರೆ.
ಇನ್ನು ಸಮೀಪದಲ್ಲಿ ಇರುವ ಕೊಂಗರಹಳ್ಳಿ ಕಾಮಗೆರೆ ಗ್ರಾಮಸ್ಥರು ಚಿರತೆ ದಾಳಿ ವಿಚಾರ ತಿಳಿದು ಬಯಭಿತರಾಗಿದ್ದಾರೆ.ಇನ್ನು ಈ ವೇಳೆಯಲ್ಲಿ ಡಿ ಎಫ್ ಓ ಸಂತೋಷ್ ಬಿ ಆರ್ ಟಿ ವಲಯ ಅರಣ್ಯಧಿಕಾರಿ ವಾಸು ಕೊಳ್ಳೇಗಾಲ ಉಪ ವಲಯ ಅರಣ್ಯಧಿಕಾರಿ ಪ್ರಭುಸ್ವಾಮಿ ಹನೂರು ವಲಯ ಉಪ ಅರಣ್ಯಧಿಕಾರಿ ಸಾಲನ್ ಸ್ಥಳಕ್ಕೆ ಆಗಮಿಸಿ ಚಿರತೆ ಸೆರೆ ಹಿಡಿಯಲು ಅರಣ್ಯ ರಕ್ಷಕರುಗಳ ಜೊತೆ ಹೆಚ್ಚಿನ ಕ್ರಮ ಕೈಗೊಂಡಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್