ಯಲಿಯೂರು ನೂತನ ಶಾಲಾ ಕಟ್ಟಡದ ಅಗತ್ಯ ಮೂಲ ಸೌಕರ್ಯಗಳನ್ನು ಶೀಘ್ರವಾಗಿ ಪೂರೈಸಿ

ಯಲಿಯೂರು ನೂತನ ಶಾಲಾ ಕಟ್ಟಡದ ಅಗತ್ಯ ಮೂಲ ಸೌಕರ್ಯಗಳನ್ನು ಶೀಘ್ರವಾಗಿ ಪೂರೈಸಿ

ದೇವನಹಳ್ಳಿ:ಯಲಿಯೂರು ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್ ಎಂಬ ಸಂಸ್ಥೆಯ ಅನುದಾನದಲ್ಲಿ ನಿರ್ಮಿಸಿರುವ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ತರಾತುರಿಯಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಉದ್ಘಾಟನೆ ನಡೆಸಲಾಗಿದೆ. ಈ ಶಾಲೆಯು ತಕ್ಷಣವೇ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಮೂಲಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ ,ಆಟದ ಮೈದಾನ ,ಪ್ರಾರ್ಥನೆಯ ಸ್ಥಳ ಮತ್ತು ಆಟದ ಮೈದಾನದಲ್ಲಿ ಸಮತಟ್ಟವಲ್ಲದ ಕಲ್ಲು ಮುಳ್ಳುಗಳಿಂದ ಕೂಡಿದ ಮೈದಾನವಾಗಿದೆ ಆದ್ದರಿಂದ ಈ ಎಲ್ಲಾ ಮೂಲ ಸೌಕರ್ಯಗಳು 15 ದಿನದೊಳಗೆ ಪೂರೈಸಿ ಮಕ್ಕಳನ್ನು ನಂತರದಲ್ಲಿ ಹೊಸ ಕಟ್ಟಡಕ್ಕೆ ವರ್ಗಾಯಿಸಿ ಎಂದು ಸಂಬಂಧಿಸಿದ ಜಿಲ್ಲಾ ಅಧಿಕಾರಿಗಳಲ್ಲಿ ಮನವಿ ಮಾಡಲಾಗುತ್ತಿದೆ ಎಂದು ಎಸ್.ಡಿ.ಎಂ.ಸಿ ಅಧ್ಯಕ್ಷ ವಿಜಯ್ ಕುಮಾರ ಹೇಳಿದರು.

 

ದೇವನಹಳ್ಳಿ ತಾಲೂಕಿನ ಯಲಿಯೂರು ಗ್ರಾಮ ಪಂಚಾಯಿತಿಯ ನೂತನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಮೂಲಸೌಕರ್ಯಗಳನ್ನು ಒದಗಿಸುವಂತೆ ಎಸ್.ಡಿ.ಎಂ.ಸಿ.ಸದಸ್ಯರು ಹಾಗೂ ಊರಿನ ಗ್ರಾಮಸ್ಥರು ಅಧಿಕಾರಿಗಳಲ್ಲಿ ಮನವಿ ಮಾಡಿದರು ಕ್ರಮ‌ವಹಿಸದ ಕಾರಣ ಪ್ರತಿಭಟಿಸಿದರು”.

 

ಎಸ್. ಡಿ.ಎಂ.ಸಿ.ನಿರ್ದೇಶಕ ಮಂಜುನಾಥ್ ಮಾತನಾಡಿ ನಮ್ಮ ಊರಿನಲ್ಲಿ ಇಂಡಿಯನ್ ಆಯಿಲ್ ಸ್ಕೈಟ್ಯಾಂಕಿಂಗ್ ಸಂಸ್ಥೆಯು ನಿರ್ಮಿಸಿರುವ ಸರ್ಕಾರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ನಿರ್ಮಾಣ ಸುಸಜ್ಜಿತವಾಗಿದ್ದು ಯಾವುದೇ ಅನುಮಾನವಿಲ್ಲ ಆದರೆ ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕಾಗಿ ಅಗತ್ಯ ಮೂಲ ಸೌಲಭ್ಯಗಳನ್ನು ಆದಷ್ಟು ಬೇಗ ಪೂರ್ಣಗೊಳಿಸಿ ನಂತರ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡಬೇಕು ಅಲ್ಲಿಯವರೆಗೂ ಸ್ವಲ್ಪ ದಿನಗಳ ಕಾಲ ನೂತನ ಕಟ್ಟಡಕ್ಕೆ ಮಕ್ಕಳ ವರ್ಗಾವಣೆಯನ್ನು ತಡೆಹಿಡಿಯಬೇಕು ಆದರೆ ಅಧಿಕಾರಿಗಳಲ್ಲಿ ಮನವಿ ಮಾಡಿದರು ಸಹ ನಮ್ಮ ಎಸ್. ಡಿ ಎಮ್. ಸಿ ಯ ಅಭಿಪ್ರಾಯವನ್ನು ಕಡೆಗಣಿಸಿ ಇಲ್ಲಿನ ಶಾಲೆಯ ಶಿಕ್ಷಕರ ಮೇಲೆ ಶೀಘ್ರವೇ ವರ್ಗಾಯಿಸುವಂತೆ ಒತ್ತಡವನ್ನು ತರುತ್ತಿರುವುದು ಸಮಂಜಸವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

ಇದೇ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷರು ಮಾಜಿ ಇಂದ್ರಮ್ಮ ,ಉಪಾಧ್ಯಕ್ಷರು ಮಮತಾರಾಜಣ್ಣ, ನಿರ್ದೇಶಕರುಗಳಾದ ಚನ್ನಪ್ಪ ಮತ್ತು ಮುನಿವೀರಪ್ಪ, ಸುಜಾತಮ್ಮ, ಶಾಂತಕುಮಾರ, ದೊಡ್ಡಣ್ಣ,ಔರ ನಾರಾಯಣಪ್ಪ ಸೇರಿದಂತೆ‌ ಊರಿನ ಗ್ರಾಮಸ್ಥರು ಉಪಸ್ಥಿತರಿದ್ದರು.

 

ವರದಿ : ಮಂಜು ಬೂದಿಗೆರೆ

9113813926

Leave a Reply

Your email address will not be published. Required fields are marked *

You cannot copy content of this page

error: Content is protected !!