ಅಬ್ಬಾ..ಅದೃಷ್ಟ ಅಂದರೆ ಇದು ರೀ..! ದುಬೈ ಲಾಟರಿಯಲ್ಲಿ 24 ಕೋಟಿ ಗೆದ್ದ ಶಿವಮೊಗ್ಗದ ಇಂಜಿನಿಯರ್!ಹುಟ್ಟೂರಲ್ಲಿ ಮನೆ ಮಾಡುವ ಕನಸು ನನಸು
ದುಬೈ: ಅದೃಷ್ಟ ಅಂದರೆ ಸುಮ್ಮನೆ ಬರಲ್ಲ. ಕೋಟಿ ಕೋಟಿ ಜನ ತುತ್ತು ಊಟಕ್ಕೂ ಪರದಾಟ ನಡೆಸುವ ಈ ಕಾಲದಲ್ಲಿ ಶಿವಮೊಗ್ಗ ಮೂಲದ ಇಂಜಿನಿಯರ್ ಒಬ್ಬನಿಗೆ ದುಬೈನಲ್ಲಿ 24 ಕೋಟಿ ಹಣ ಲಾಟರಿಯಲ್ಲಿ ಬಂದಿದೆ.
ಪ್ರಸ್ತುತ ದುಬೈನಲ್ಲಿ ಉದ್ಯೋಗಿಯಾಗಿರುವ ಶಿವಮೊಗ್ಗ ಮೂಲದ ವ್ಯಕ್ತಿ ಗಲ್ಪ್ ನ ಬಿಗ್ ಟಿಕೆಟ್ ಲಾಟರಿಯಲ್ಲಿ ಬರೋಬ್ಬರಿ 24 ಕೋಟಿ ರೂ.ಗೆದ್ದಿದ್ದಾರೆ. ಕಳೆದ 15 ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಮೆಕ್ಯಾನಿಕಲ್ ಎಂಜಿನೀಯರ್ ಶಿವಮೂರ್ತಿ ಕೃಷ್ಣಪ್ಪ ಈ ಅದೃಷ್ಟವಂತ.
ಫೆ.17ರಂದು ಅವರು ಖರೀದಿಸಿದ 202511 ನಂಬರಿನ ಲಾಟರಿ ಟಿಕೆಟ್‌ಗೆ ಈ ಬಹುಮಾನ ಸಿಕ್ಕಿದೆ ಎಂದು ಗಲ್ಫ್ ನ್ಯೂಸ್ ವರದಿಮಾಡಿದೆ. ಮನೆಯಲ್ಲಿ ಕುಳಿತು ಲಕ್ಕಿ ಡ್ರಾ ಫಲಿತಾಂಶವನ್ನು ಟಿವಿಯಲ್ಲಿ ವೀಕ್ಷಿಸುತ್ತಿದ್ದ ಶಿವಮೂರ್ತಿ ಅವರಿಗೆ ಇವರ ನಂಬರ್ ಆಯ್ಕೆಯಾದಾಗ ನಂಬಲಸಾಧ್ಯವಾಗಿತ್ತಂತೆ. ಡ್ರಾ ಕಾರ್ಯಕ್ರಮವನ್ನು ಟಿವಿಯಲ್ಲಿ ನಡೆಸಿಕೊಡುತ್ತಿದ್ದ ರಿಚಾರ್ಡ್ ಎಂಬವರು ಇವರು ಬಹುಮಾನ ಗೆಲ್ಲುತ್ತಲೇ ಫೋನ್ ಕರೆ ಮಾಡಿದ್ದು
ಬಹುಮಾನದ ಹಣದಲ್ಲಿ ಹುಟ್ಟೂರು ಶಿವಮೊಗ್ಗದಲ್ಲಿ ದೊಡ್ಡ ಮನೆ ನಿರ್ಮಿಸಿ, ಮಕ್ಕಳ ಭವಿಷ್ಯಕ್ಕೆ ಠೇವಣಿ ಇಡಲು ನಿರ್ಧರಿಸಿದ್ದೇನೆ ಎಂದು ಶಿವಮೂರ್ತಿ ಹೇಳಿದ್ದಾರೆ. ಅವರಿಗೆ 10 ಮತ್ತು 4 ವರ್ಷದ ಇಬ್ಬರು ಮಕ್ಕಳಿದ್ದಾರೆ. ಕಳೆದ ಕೆಲ ವರ್ಷಗಳಿಂದ ಅವರು ಈ ಬಿಗ್ ಟಿಕೆಟ್ ಲಾಟರಿ ಟಿಕೆಟ್ ಖರೀದಿಸುತಿದ್ದರು. ಅಂತೇ
ಬಿಗ್ ಟಿಕೆಟ್ ಲಾಟರಿ ಪ್ರತಿ ತಿಂಗಳು ತಿಂಗಳು ಡ್ರಾ ನಡೆಸುತ್ತದೆ. ಈ ಹಿಂದೆ ನಿರಂತರವಾಗಿ ಈ ಲಾಟರಿ ಟಿಕೆಟ್ ಗಳನ್ನೂ ಖರೀದಿಸುತಿದ್ದವರಿಗೆ ಈ ಬಾರಿ ಡಿಸ್ಕೌಂಟ್ ಆಫರ್ ನೀಡಿತ್ತು ,ಹಾಗಾಗಿ ನಾನು ಈ ಬಾರಿ ಟಿಕೆಟ್ ಖರೀದಿಸಿದೆ ಎಂದು ಶಿವಮೂರ್ತಿ ತಿಳಿಸಿದ್ದಾರೆ. ಒಂದು ಟಿಕೆಟ್ ಶಿವಮೂರ್ತಿ ಅವರ ಬದುಕನ್ನೇ ಬದಲಾಯಿಸಿದೆ.