ಕೆರೆಯoತಾದ ಮಲೈ ಮಹದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯರಸ್ತೆ :- ಎದ್ದು ಬಿದ್ದು ಸಾಗುತ್ತಿರುವ ವಾಹನ ಸವಾರರು
ಕೊಳ್ಳೇಗಾಲ :- ಬುಧವಾರ ಸಂಜೆ ಸುಮಾರು ಎರಡು ಗಂಟೆಗಳ ಕಾಲ ನಿರಂತರವಾಗಿ ಸುರಿದ ಬಾರಿ ಮಳೆಯಿಂದಾಗಿ ಮಲೆ ಮಾದೇಶ್ವರ ಬೆಟ್ಟಕ್ಕೆ ತೆರಳುವ ಮುಖ್ಯ ರಸ್ತೆಯಲ್ಲಿ ಕೊಂಗರಹಳ್ಳಿ ಗ್ರಾಮದ ಬಸ್ ನಿಲ್ದಾಣ ಹತ್ತಿರ ಇರುವ ಮುಖ್ಯ ರಸ್ತೆಯು ದೊಡ್ಡ ದೊಡ್ಡ ಹೋಂಡಗಳಿಂದ ಕೂಡಿ ಕೆರೆಯoತಾಗಿದ್ದು ಸಾರ್ವಜನಿಕರು ಎದ್ದು ಬಿದ್ದು ತೆರಳಿ ಹರಸಹಾಸ ಪಡುತ್ತಿದ್ದಾರೆ. ಕೊಳ್ಳೇಗಾಲ ಮತ್ತು ಹನೂರು ರಸ್ತೆ ಅಭಿವೃದ್ಧಿ ಕೇಶಿಫ್ ಕಾಮಗಾರಿಯು ಸುಮಾರು 3-4 ವರ್ಷಗಳಿಂದಲೂ ಕೂಡ ಮಂದಗತಿಯಲ್ಲಿ ಸಾಗುತ್ತಿರುವುದು ಸ್ಥಳೀಯರು ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯನ್ನು ಉಂಟು ಮಾಡಿದೆ.ಕೇಶಿಫ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸಂಬಂಧಪಟ್ಟ ಅಧಿಕಾರಿಗಳು ಚರಂಡಿ ನೀರು ಸರಾಗವಾಗಿ ಚಲಿಸಲು ಯಾವುದೇ ಕ್ರಮ ಕೈಗೊಳ್ಳದಿರುವುದು ಈ ವ್ಯವಸ್ಥೆಗೆ ಕಾರಣವಾಗಿದೆ.
ಹಾಗೂ ಅಲ್ಲೇ ಇದ್ದಂತ ಸ್ಥಳೀಯ ಅಂಗಡಿ ಬಾಡಿಗೆದಾರರು ವಾಹನ ಸವಾರರು ಮತ್ತು ಸ್ಥಳೀಯರಿಗೆ ಯಾವುದೇ ತೊಂದರೆ ಆಗದಂತೆ ಗುಂಡಿಯಂತಾಗಿರುವ ಸ್ಥಳಕ್ಕೆ ಮರದ ತುಂಡಿಗೆ ಕೆಂಪು ಬಣ್ಣದ ಬಟ್ಟೆಯನ್ನು ಹೊದಿಸಿ ಜಾಗೃತಿಯಿಂದ ತೆರಳಲು ಸೂಚನೆ ನೀಡಿದ್ದಾರೆ ಈ ರಸ್ತೆಯಲ್ಲಿ ಶ್ರೀ ಮಲೆ ಮಾದೇಶ್ವರ ಬೆಟ್ಟ ಪುಣ್ಯ ಕ್ಷೆತ್ರಕ್ಕೆ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ತೇರಳುವುದರಿಂದ ಅಪಘಾತಗಳು ನಡೆಯುತ್ತಿರುವುದು ನೋಡಿಯೂ ಕೂಡ ಸಂಬಂಧಪಟ್ಟವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಸಾರ್ವಜನಿಕರು ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಈ ವಿಚಾರವಾಗಿ ಸಂಬಂಧಪಟ್ಟ ರಸ್ತೆ ಅಭಿವೃದ್ಧಿ ಇಲಾಖೆಯವರು ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲು ಕೊಂಗರಹಳ್ಳಿ ಗ್ರಾಮದ ಯಜಮಾನರು ಮತ್ತು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ವರದಿ :-ನಾಗೇಂದ್ರ ಪ್ರಸಾದ್