ಉಪಯೋಗಕ್ಕೆ ಬಾರದ ಶುದ್ಧ ನೀರಿನ ಘಟಕ ದುರಸ್ಥಿಗೊಳಿಸಲು ಗ್ರಾಮಸ್ಥರ ಅಗ್ರಹ
ಹನೂರು: ತಾಲ್ಲೂಕಿನ ಚಿಕ್ಕಮಾಲಪೂರ ಗ್ರಾಮದಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕವು ಉಪಯೋಗಕ್ಕೆ ಬಾರದಂತೆ ಕೆಟ್ಟು ನಿoತಿದೆ. ಘಟಕದ ಸುತ್ತ ಮುತ್ತ ಮುಳ್ಳು ಗಿಡ ಗಂಟೆಗಳು ಬೆಳೆದು ಅವ್ಯವಸ್ತೆಯಿಂದ ಕೂಡಿದೆ. ಇದರಿಂದ ಗ್ರಾಮದ ಜನರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ.
ಈ ಬಗ್ಗೆ ಗ್ರಾಮದ ಜನರನ್ನು ವಿಚಾರಿಸಿದಾಗ ಕೆಟ್ಟು ನಿಂತು ವರ್ಷವೇ ಕಳೆದಿದೆ ಈ ಬಗ್ಗೆ ಗ್ರಾಮ ಪಂಚಾಯತಿ ಆಡಳಿತ ವಾಗಲಿ ಅಥವಾ ಸಂಬಂದಿಸಿದ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಅಧಿಕಾರಿಗಳಾಗಲಿ ಸ್ಪಂದಿಸುತ್ತಿಲ್ಲ ಅವರ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದಿಂದ ಸೌಲಭ್ಯದಿಂದ ವಂಚಿತವಾಗಿದೆ.
ಸರ್ಕಾರವು ಗ್ರಾಮೀಣ ಜನತೆಯ ಅರೋಗ್ಯ ದೃಷ್ಟಿಯಿಂದ ಈ ಯೋಜನೆಯನ್ನು ಜಾರಿ ಮಾಡಿದ್ದೂ ಬಳಕೆಗೆ ಬಾರದಿರುವುದು ದುರದೃಷ್ಟಕರವಾಗಿದೆ.
ಈ ಬಗ್ಗೆ ಗ್ರಾಮೀಣ ಕುಡಿಯುವ ನೀರು ಇಲಾಖೆ ಅಧಿಕಾರಿ ಪೂರ್ಣಿಮಾರವರನ್ನು ಸಂಪರ್ಕಿಸಿದಾಗ ಘಟಕ ನಿರ್ಮಾಣ ಮಾಡುವ ಟೆಂಡರ್ ದಾರರು ಐದು ವರ್ಷದ ತನಕ ನಿರ್ವಹಣೆ ಮಾಡುವ ಹೊರೆ ಹೊತ್ತಿರುತ್ತಾರೆ. ಆದರೇ ಅವರು ವಿದ್ಯುತ್ ಶುಲ್ಕ ಪಾವತಿ ಮಾಡದಿರುವುದಕ್ಕೆ. ಸ್ಥಗಿತವಾಗಿದೆ. ಈ ಬಗ್ಗೆ ಶೀಘ್ರದಲ್ಲಿ ಕ್ರಮವಹಿಸಿ ಮರು ಚಾಲನೆ ಮಾಡುವುದಾಗಿ ತಿಳಿಸಿದ್ದಾರೆ.
ವರದಿ :- ನಾಗೇಂದ್ರ ಪ್ರಸಾದ್