ದಲಿತ ಸಂಘರ್ಷ ಸಮಿತಿ ವತಿಯಿಂದ ಕ್ಷೆತ್ರದ ದಲಿತರ ಕುಂದು ಕೊರತೆ ಹಾಗೂ ವಿವಿಧ ವಿಚಾರಗಳ ಕುರಿತು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ

ದಲಿತ ಸಂಘರ್ಷ ಸಮಿತಿ ವತಿಯಿಂದ ಕ್ಷೆತ್ರದ ದಲಿತರ ಕುಂದು ಕೊರತೆ ಹಾಗೂ ವಿವಿಧ ವಿಚಾರಗಳ ಕುರಿತು ಪಟ್ಟಣದಲ್ಲಿ ಪತ್ರಿಕಾ ಗೋಷ್ಠಿ

 

ಹನೂರು :- ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಕಾರ್ಯಾಲಯದಲ್ಲಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಚಾಮರಾಜನಗರ ಜಿಲ್ಲಾ ಮತ್ತು ಮೈಸೂರು ವಿಭಾಗದ ಪದಾಧಿಕಾರಿಗಳು ಕರೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಹನೂರು ತಾಲೂಕು ವ್ಯಾಪ್ತಿಯಲ್ಲಿ ಬರುವ ಗ್ರಾಮಗಳಲ್ಲಿ ದಲಿತರ ಕುಂದು ಕೊರತೆ ಮತ್ತು ದಲಿತರ ಮೇಲೆ ಆಗುತ್ತಿರುವ ಅನ್ಯಾಯಗಳ ಕುರಿತು ಚರ್ಚೆ ಮಾಡಿದರು. ಹಾಗೂ ಹಲವಾರು ಮೂಲಭೂತ ಸೌಕರ್ಯ ಸೌಲಭ್ಯ ವಂಚಿತವಾಗಿರುವುದರ ಬಗ್ಗೆ ಚರ್ಚೆ ಮಾಡಿ ಮುಂದಿನ ನಡೆಯ ಬಗ್ಗೆ ಚರ್ಚಿಸಿದರು. ಇದೆ ವೇಳೆಯಲ್ಲಿ ಮಾತನಾಡಿದ. ಮೈಸೂರು ವಿಭಾಗಿಯ ದಲಿತ ಸಂಘರ್ಷ ಸಮಿತಿ ಸಂಚಾಲಕ ದೊಡ್ಡಿoದುವಾದಿ ಸಿದ್ದರಾಜು ಇತ್ತೀಚಿನ ದಿನಗಳಲ್ಲಿ ಹನೂರು ತಾಲೂಕಿನದ್ಯಂತ ದಲಿತರ ಮೇಲೆ ನಡೆಯುತ್ತಿರುವ ಶೋಷಣೆ ಮತ್ತು ದೌರ್ಜನ್ಯಗಳು ಮುಚ್ಚು ಹೋಗುತ್ತಿವೆ. ತಿಂಗಳ ಹಿಂದೆ ಗೋಪಿನತಮ್ ನಲ್ಲಿ ದಲಿತ ಹುಡುಗಿಯ ಅತ್ಯಾಚಾರವಾಗಿ ಪಡೆಯಾಚಿ ಸಮುದಾಯದ ಮೂವರನ್ನು ಜೈಲಿನಲ್ಲಿ ಇಟ್ಟಿದ್ದಾರೆ ಮತ್ತೊಂದು ಪ್ರಕರಣ ಸವರ್ಣಿಯರು ಇಪ್ಪತ್ತಕ್ಕೂ ಜನ ದಲಿತ ಸಮುದಾಯದ ಮೂರು ಜನರನ್ನು ಹಲ್ಲೇ ಮಾಡಿ ದೌರ್ಜನ್ಯ ವೆಸಗಿದ್ದರು ಇದೀಗ ಅವರು ಕೂಡ ಜೈಲುವಾಸದಲ್ಲಿದ್ದಾರೆ.

 

 

 

 

 

 

 

 

 

 

 

 

 

ಹಾಗೂ ಸುಳುವಾಡಿ ವಿಷ ಪ್ರಕರಣದಲ್ಲಿ ಮರಣ ಹೊಂದಿದ ಕುಟುಂಬಗಳಿಗೆ ಜ್ಯೋತಿಪುರ ಗ್ರಾಮದಲ್ಲಿ ನಿವೇಶನ ನೀಡಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ತಾತ್ಸಾರದಿಂದ ಫಲಾನುಭವಿಗಳಿಗೆ ನಿವೇಶನ ಇನ್ನೂ ಹಂಚಿಕೆಯಾಗಿಲ್ಲ. ಅದೇ ರೀತಿ ಅಂಬಿಕಾಪುರ ಗ್ರಾಮದ ದಲಿತ ಆದಿ ಜಾಂಬವ ಸಮುದಾಯದವರಿಗೆ ಸ್ಮಶನಕ್ಕಾಗಿ ಎರಡು ಎಕರೆ ಭೂಮಿ ಮಂಜೂರಾಗಿತ್ತು.

 

 

 

 

 

 

 

 

 

 

 

 

ಈ ಜಾಗದ ಸೂಕ್ತ ದಾಖಲೆ ನೀಡಲು ಅಧಿಕಾರಿಗಳು ವಿಳಂಬ ಮಾಡಿದ ಕಾರಣ ಅದೇ ಜಾಗವನ್ನು ಪರಿಶಿಷ್ಟರ ಇನ್ನೊಂದು ಸಮುದಾಯ ನಮಗೆ ಸೇರಿದ್ದು ಎಂದು ನಾಮಫಲಕ ಹಾಕಿರುವುದು ಗೊಂದಲಗಳಿಗೆ ಎಡೆಮಾಡಿದೆ. ಅದೇ ರೀತಿ ನಾಲ್ಕು ವರ್ಷಗಳ ಹಿಂದೆ ವಿಷ ಪ್ರಸಾದ ಪ್ರಕರಣದಲ್ಲಿ ಸುಮಾರು 17ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಸಂತ್ರಸ್ತ ಕುಟುಂಬದವರಿಗೆ ಜಮೀನು ಮತ್ತು ನಿವೇಶನ ಕೊಡಬೇಕೆಂದು ಸರ್ಕಾರದ ಆದೇಶದಂತೆ ಆಗಿನ ಜಿಲ್ಲಾಧಿಕಾರಿ ಕಾವೇರಿ ರವರ ಅವಧಿಯಲ್ಲಿ ಆದೇಶ ಹೊರಡಿಸಿತ್ತು. ಎಮ್ ಜಿ ದೊಡ್ಡಿ ಗ್ರಾಮದ ಇಬ್ಬರು ಸಂತ್ರಸ್ತರಿಗೆ ಜ್ಯೋತಿಪುರ ಗ್ರಾಮದಲ್ಲಿ ನಿವೇಶನ ನೀಡಿದ್ದು, ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳ ತಾತ್ಸಾರದಿಂದ ಫಲಾನುಭವಿಗಳಿಗೆ ನಿವೇಶನ ಇನ್ನೂ ಹಂಚಿಕೆಯಾಗಿಲ್ಲ.

 

 

 

 

 

 

 

 

 

 

 

 

 

 

 

ಇದೇ ರೀತಿ ಜಾಸ್ತಿ ವಿಳಂಬ ಆಗುತ್ತಿದ್ದರೆ ಅದು ಬೇರೆ ಬೇರೆ ತಿರುವುಗಳನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಹಾಗೂ ಸಮಸ್ತ ಹನುರು ಕ್ಷೇತ್ರದ ಅಟ್ರಾಸಿಟಿ ದೌರ್ಜನ್ಯಗಳಿಗೆ ಸಮಾಜ ಕಲ್ಯಾಣ ಇಲಾಖೆ ಹಾಗೂ ಪೊಲೀಸ್ ಇಲಾಖೆ ಶಾಸಕರು ಸೇರಿದಂತೆ ಎಸ್ ಸಿ ಎಸ್ ಟಿ ಸಭೆಗಳನ್ನು ನಿರಂತರವಾಗಿ ಮಾಡಬೇಕು. ತಾಲೂಕಿನ ಹುಗ್ಯಾo ಗ್ರಾಮದಲ್ಲಿ ದಲಿತರು ಗ್ರಾಮ ಪಂಚಾಯಿತಿ ಕಚೇರಿಗೆ ಬರಬೇಡಿ ಎಂದು ಸವರ್ಣಿಯರು ಹೇಳಿರುವ ಘಟನೆ ನಡೆದಿದೆ ಇಂತಹ ಜಾತಿ ತಾರತಮ್ಯ ಮಾಡುವವರಿಗೆ ಕಾನೂನಿನ ಅರಿವು ಮೂಡಿಸುವುದರ ಮೂಲಕ ಸಮಾಜ ಕಲ್ಯಾಣ ಇಲಾಖೆ ಸಭೆಗಳನ್ನು ಮಾಡಬೇಕು.

 

 

 

 

 

 

 

 

 

 

 

 

 

 

 

ತಾಲೂಕಿನ ತಹಸೀಲ್ದಾರ್ ರವರು ಜಾತಿ ತಾರತಮ್ಯ ಮತ್ತು ದೌರ್ಜನಗಳು ಆಗುತ್ತಿರುವ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು ಆದರೆ ಒಮ್ಮೆಯೂ ಕೂಡ ಅವರು ಇಂತಹ ಕೆಲಸವನ್ನು ಮಾಡದಿರುವುದು ನೋವಿನ ಸಂಗತಿ. ಇಷ್ಟೆಲ್ಲ ಸಮಸ್ಯೆಗಳಿಗೆ ಶೀಘ್ರದಲ್ಲೇ ಜಿಲ್ಲಾ ಆಡಳಿತ ಮತ್ತು ತಾಲೂಕು ತಹಸೀಲ್ದಾರ್ ಅವರು ಒಂದು ವಾರದ ಒಳಗೆ ನಮ್ಮ ಬೇಡಿಕೆಗಳನ್ನ ಈಡೇರಿಸಲಿಲ್ಲವೆಂದರೆ ದಲಿತ ಸಂಘರ್ಷ ಸಮಿತಿಯ ವಿವಿಧ ತಾಲೂಕುಗಳ ಪದಾಧಿಕಾರಿಗಳು ಸಂಘ ಸಂಸ್ಥೆಗಳು ಸೇರಿ ಉಗ್ರವಾದ ಹೋರಾಟವನ್ನು ಕೈಗೊಳ್ಳಬೇಕಾಗುತ್ತದೆ ಎಂದು ತಿಳಿಸಿದರು. ಅದೇ ರೀತಿ ಕ್ಷೇತ್ರದ ಶಾಸಕರು ಬಂಡಳ್ಳಿ ಹಾಗೂ ಹನೂರು ರಸ್ತೆ ರಾಮಪುರ ಮತ್ತು ನಾಲ್ ರೋಡ್ ಗರಿಕೆಕಂಡಿ ತೆರಳುವ ರಸ್ತೆ ತೀರಾ ಹದಗೆಟ್ಟಿದ್ದು ತಾಲೂಕಿನ ಕಾಡಂಚಿನ ಗ್ರಾಮಗಳ ವಿವಿಧ ರಸ್ತೆಗಳನ್ನು ಸೇರಿ ಅಭಿವೃದ್ಧಿ ಪಡಿಸುವಂತೆ ಒತ್ತಾಯಿಸಿದರು.

 

 

 

 

 

 

 

 

 

 

 

 

ಇನ್ನು ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕರಾದ ಕೆ.ವೀರ, ಇಂಡಯ್ಯ, ಮಹದೇವಸ್ವಾಮಿ, ಹನೂರು ತಾಲ್ಲೂಕು ಸಂಚಾಲಕ ಭೈರನತ್ತ ಮಾದೇಶ್, ಯಳಂದೂರು ತಾ. ಸಂಚಾಲಕ ರಾಚಪ್ಪ, ಸಂಘಟನಾ ಸಂಚಾಲಕರಾದ ಶಿವಣ್ಣ, ಶಾಂತರಾಜು. ಬಣ್ಣಾರಿ, ಮುರುಗೇಶ್ ಮುಂತಾದವರು ಹಾಜರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!