ಹನೂರು ತಾಲೂಕಿನ ಇಪ್ಪತೈದು ಪಂಚಾಯತಿಗಳ ಎರಡನೇ ಅವಧಿಗೆ ಅಧ್ಯಕ್ಷರು ಉಪಾಧ್ಯಕ್ಷರ ಸ್ಥಾನಗಳ ಮೀಸಲಾತಿ ಪ್ರಕಟ
ಹನೂರು :- ಪಟ್ಟಣದ ಆರ್ ಎಸ್ ದೊಡ್ಡಿಯ ಗೌರಿಶಂಕರ ಕಲ್ಯಾಣ ಮಂಟಪ ನಡೆದ ಹನೂರು ತಾಲೂಕಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜಿಲ್ಲಾಧಿಕಾರಿ ಡಿ ಎಸ್ ರಮೇಶ್ ರವರ ಸಮ್ಮುಖದಲ್ಲಿ ನಡೆಯಿತು.
ಹನೂರು ತಾಲೂಕಿನ 25 ಪಂಚಾಯತಿಗಳ ಹಾಲಿ ಸದಸ್ಯರುಗಳು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಭಾಗಿಯಾಗಿದ್ದರು. ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕ್ರಿಯೆ ಎರಡುವರೆ ವರ್ಷ ನಿಗದಿ ಮುಗಿದ ಹಿನ್ನೆಲೆ ಶನಿವಾರದಂದು ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಾತಿವಾರು ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಮೀಸಲಾತಿ ಪ್ರಕಟಿಸಲಾಯಿತು. ಹನೂರು ತಾಲೂಕಿನ ಇಪ್ಪತೈದು ಗ್ರಾಮ ಪಂಚಾಯತಿಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಜಾತಿವಾರು ಮೀಸಲಾತಿ ಕೆಳಗಿನoತಿದೆ.
ಪಂಚಾಯತಿಗಳು – ಅಧ್ಯಕ್ಷರು – ಉಪಾಧ್ಯಕ್ಷರು
1) ಮಂಗಲ- ಎಸ್ ಸಿ ಮಹಿಳೆ – ಜನರಲ್
2)ಮಣಗಳ್ಳಿ- ಜನರಲ್ – ಜನರಲ್ ಮಹಿಳೆ
3)ಬಂಡಳ್ಳಿ – ಎಸ್ ಸಿ – ಕೇಟಗರಿ (ಎ) ಮಹಿಳೆ
4)ಶಾಗ್ಯ – ಜನರಲ್ – ಜನರಲ್ ಮಹಿಳೆ
5)ಎಲ್ಲೆಮಾಳ – ಜನರಲ್ ಮಹಿಳೆ – ಜನರಲ್
6) ಅಜ್ಜಿಪುರ – ಎಸ್ ಸಿ – ಕೇಟಗರಿ (ಬಿ)
7)ಸೂಳೆರಿಪಾಳ್ಯ – ಜನರಲ್ – ಜನರಲ್ ಮಹಿಳೆ
8)ರಾಮಪುರ – ಜನರಲ್ – ಎಸ್ ಸಿ ಮಹಿಳೆ
9)ಕೌದಳ್ಳಿ – ಜನರಲ್ ಮಹಿಳೆ – ಜನರಲ್ ಮಹಿಳೆ
10)ದೊಡ್ಡಲಾತ್ತೂರು – ಜನರಲ್ ಮಹಿಳೆ – ಎಸ್ ಸಿ
11)ಕುರಟ್ಟಿ ಹೊಸೂರು- ಎಸ್ ಟಿ – ಜನರಲ್ ಮಹಿಳೆ
12)ಶೆಟ್ಟಳ್ಳಿ – ಎಸ್ ಟಿ ಮಹಿಳೆ – ಜನರಲ್
13)ಮಾರ್ಟಳ್ಳಿ – ಜನರಲ್ – ಎಸ್ ಸಿ ಮಹಿಳೆ
14)ಪೊನ್ನಚಿ – ಜನರಲ್ ಮಹಿಳೆ – ಎಸ್ ಟಿ
15)ಹುಗ್ಯo- ಜನರಲ್ ಮಹಿಳೆ -ಜನರಲ್ ಮಹಿಳೆ
16) ದಿನ್ನಳ್ಳಿ – ಎಸ್ ಸಿ – ಜನರಲ್
17) ಮಿಣ್ಯo – ಕೇಟಗರಿ (ಎ) ಮಹಿಳೆ – ಎಸ್ ಸಿ
18)ಕಣ್ಣೂರು – ಎಸ್ ಸಿ ಮಹಿಳೆ – ಜನರಲ್ ಮಹಿಳೆ
19)ಚಿಕ್ಕಮಲಾಪುರ- ಎಸ್ ಸಿ ಮಹಿಳೆ – ಜನರಲ್
20)ಲೋಕ್ಕನಹಳ್ಳಿ – ಜನರಲ್ – ಎಸ್ ಸಿ
21) ಪಿ ಜಿ ಪಾಳ್ಯ – ಕೇಟಗರಿ (ಬಿ) – ಕೇಟಗರಿ(ಎ)ಮಹಿಳೆ
22)ಹುತ್ತೂರು – ಎಸ್ ಟಿ ಮಹಿಳೆ – ಜನರಲ್
23)ಬೈಲೂರು – ಜನರಲ್ – ಎಸ್ ಸಿ ಮಹಿಳೆ
24) ಮ. ಮ.ಬೆಟ್ಟ -ಜನರಲ್ ಮಹಿಳೆ- ಎಸ್ ಟಿ ಮಹಿಳೆ
25)ಗೋಪಿನಾಥo-ಕೇಟಗರಿ(ಎ)ಮಹಿಳೆ – ಜನರಲ್
ಇದರಲ್ಲಿ ಎಸ್ ಸಿ ಒಟ್ಟು ಆರು ಗ್ರಾಮ ಪಂಚಾಯಿತಿಗೆ ಮೀಸಲು ಮೂರು ಮಹಿಳೆ ಮೂರು ಪುರುಷರಿಗೆ ಹದಿಮೂರು ಸಾಮಾನ್ಯ ಏಳು ಪುರುಷರು ಆರು ಮಹಿಳೆಯರು. ಎಸ್ ಟಿ ನಾಲ್ಕು ಮೀಸಲು ಕೇಟಗರಿ (ಬಿ)ಕೇಟಗರಿ (ಎ) ಸೇರಿದಂತೆ ಮೀಸಲಾತಿ ಪ್ರಕಟಿಸಲಾಗಿದೆ. ಇದೇ ಸಂದರ್ಭದಲ್ಲಿ ಸುಮಾರು ಮೂರರಿಂದ ನಾಲ್ಕು ಪಂಚಾಯ್ತಿಗಳಿಗೆ ಜಾತಿವಾರು ಸಮಬಲ ಇರುವ ಕಾರಣ ಹಿಂದಿನ ಅವಧಿಯ ಲೆಕ್ಕಾಚಾರದ ಅನುಗುಣವಾಗಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ರವರು ಈ ವಿಚಾರವಾಗಿ ಸಭೆಯಲ್ಲಿ ಬಹಳ ಅಚ್ಚುಕಟ್ಟಾಗಿ ವಿವರಣೆ ನೀಡಿದರು. ಇನ್ನು ಈ ಸಂದರ್ಭದಲ್ಲಿ ಉಪ ವಿಭಾಗಧಿಕಾರಿಗಳು ಗೀತಾ ಹುಡೇದ್. ತಹಸೀಲ್ದಾರ್ ಗುರುಪ್ರಸಾದ್. ಕಾರ್ಯನಿರ್ವಾಹಕ ಅಧಿಕಾರಿ ಶ್ರೀನಿವಾಸ್. ಹಾಗೂ ಸಭೆಯಲ್ಲಿ ತಾಲೂಕಿನ ಎಲ್ಲಾ ಪಂಚಾಯತಿಯ ಸದಸ್ಯರುಗಳು ಪಿಡಿಒ ಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.
ವರದಿ :- ನಾಗೇಂದ್ರ ಪ್ರಸಾದ್