ಆರ್‌ ಅಶೋಕ್‌ ಅವರಿಂದ ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ಗೋಲ್ಡ್‌ ಮಾಲ್‌ ಉದ್ಘಾಟನೆ

ಕಂದಾಯ ಸಚಿವ ಆರ್‌ ಅಶೋಕ್‌ ಅವರಿಂದ ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ಗೋಲ್ಡ್‌ ಮಾಲ್‌ ಉದ್ಘಾಟನೆ ಹಾಗೂ ನೂತನ ಯೋಜನೆಗೆ ಚಾಲನೆ

 

ಬೆಂಗಳೂರು ಮಾರ್ಚ್‌ 05  ಶ್ರೀ ಸ್ಟಾರ್‌ ಗೋಲ್ಡ್‌ ಕಂಪನಿಯ ವತಿಯಿಂದ ದೇಶದಲ್ಲೇ ಮೊದಲ ಬಾರಿಗೆ ಅಡವಿಟ್ಟ ಚಿನ್ನವನ್ನು ಬಿಡಿಸಿ ಮಾಲೀಕರಿಗೆ ಬಾಡಿಗೆಗೆ ನೀಡುವ ವಿನೂತನ ಯೋಜನೆಗೆ *ಕಂದಾಯ ಸಚಿವರಾದ ಆರ್‌ ಅಶೋಕ್*‌ ಅವರು ಚಾಲನೆ ನೀಡಿದರು.

 

ದೇಶದಲ್ಲೇ ಮೊದಲ ಬಾರಿಗೆ ಆಭರಣಗಳ ಮೇಲೆ ತಕ್ಷಣ ಹಣ ನೀಡುವ ಪರಿಕಲ್ಪನೆಯನ್ನು ಪ್ರಾರಂಭಿಸಿದ ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ವತಿಯಿಂದ ಮಲ್ಲೇಶ್ವರಂ ನಲ್ಲಿ ನಿರ್ಮಿಸಿರುವ ಚಿನ್ನಾಭರಣಗಳ ಮಾರಾಟ ಹಾಗೂ ಚಿನ್ನಾಭರಣಗಳಿಗೆ ತಕ್ಷಣ ಹಣ ನೀಡುವ ಶ್ರೀಸ್ಟಾರ್ ಗೋಲ್ಡ್‌ ಮಾಲ್‌ ಗೆ ಇದೇ ವೇಳೆ ಚಾಲನೆ ನೀಡಲಾಯಿತು.

 

ನಂತರ ಮಾತನಾಡಿದ ಸಚಿವರು, ಚಿನ್ನಾಭರಣಗಳ ಮಾರಾಟ ಅಂಗಡಿ ಶ್ರೀ ಸ್ಟಾರ್‌ ಗೋಲ್ಡ್‌ ಮಾಲ್‌ ನ್ನು ಮಲ್ಲೇಶ್ವರಂ ನಲ್ಲಿ ಪ್ರಾರಂಭ ಮಾಡಿದ್ದು ಉತ್ತಮ ಯೋಜನೆಗಳನ್ನು ನೀಡಲಾಗುತ್ತಿದೆ. ಈ ಅಂಗಡಿ ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಅಭಿವೃದ್ದಿ ಹೊಂದಲಿ ಎಂದು ಹಾರೈಸಿದರು.

 

ಶ್ರೀಸ್ಟಾರ್‌ ಗೋಲ್ಡ್‌ ಕಂಪನಿಯ ಮಾಲೀಕರಾದ ಶ್ರೀಕಾಂತ್‌ ಮಾತನಾಡಿ, 1999 ರಲ್ಲಿ ಕೇವಲ ಲೇವಾದೇವಿಗಾರರು ಕಾರ್ಯನಿರ್ವಹಿಸುತ್ತಿದ್ದ ಸಂಧರ್ಭದಲ್ಲಿ ಜನರು ತಮಗೆ ಅಗತ್ಯವಿರದೇ ಇರುವ ಆಭರಣಗಳನ್ನು ಮಾರಾಟ ಮಾಡಲು ಇನ್ನಿಲ್ಲದ ಅಪಮಾನ, ಸಂಕೋಚ ಹಾಗೂ ಪ್ರಶ್ನೆಗಳನ್ನು ಎದುರಿಸಬೇಕಾಗಿತ್ತು. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ಪ್ರಾರಂಭಿಸಲಾದ ಕ್ರಾಂತಿಕಾರಿ ಪರಿಕಲ್ಪನೆಯಿಂದ ದೇಶದಲ್ಲೇ ಆಭರಣಗಳಿಗೆ ತಕ್ಷಣ ಹಣ ನೀಡುವ ಮೊದಲ ಕಂಪನಿಯಾಗಿ ಶ್ರೀಸ್ಟಾರ್‌ ಹೆಸರು ಪಡೆದಿದೆ. ಗ್ರಾಹಕರು ತಾವು ಅಡವಿಟ್ಟ ಚಿನ್ನವನ್ನು ಪೂರ್ತಿ ಹಣ ನೀಡದೆ ಬಿಡಿಸಿಕೊಳ್ಳಲು ಆಗುವುದಿಲ್ಲ. ಇದರಿಂದಾಗಿ ಅವರು ತಮ್ಮ ಆಭರಣಗಳು ಇದ್ದರೂ ಇಲ್ಲದ ಹಾಗೆ ಜೀವನ ಮಾಡಬೇಕಾಗುತ್ತದೆ. ಇದಕ್ಕೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾವು ದೇಶದಲ್ಲೇ ಮೊದಲ ಬಾರಿಗೆ ವಿನೂತನ ಯೋಜನೆಯೊಂದನ್ನು ಜಾರಿಗೊಳಿಸಿದ್ದೇವೆ.

 

ಜನರು ಅಡವಿಟ್ಟ ಚಿನ್ನವನ್ನು ನಾವು ಬಿಡಿಸಿ ಅದನ್ನು ಅದರ ಮಾಲೀಕರುಗಳೀಗೆ ಬಾಡಿಗೆ ರೂಪದಲ್ಲಿ ನೀಡುತ್ತೇವೆ. ಇದಕ್ಕಾಗಿ ನಾವು ಪಡೆಯುವುದು ಬಹಳ ಕಡಿಮೆ ಬಡ್ಡಿದರವನ್ನು. ಇದಲ್ಲದೆ, ಚಿನ್ನಾಭರಣಗಳಿಗೆ ತಕ್ಷಣ ಹಣ ನೀಡುವುದಲ್ಲದೆ, ಕೊಂಡುಕೊಂಡಂತಹ ಚಿನ್ನಾಭರಣಗಳನ್ನು ಕಡಿಮೆ ವೆಸ್ಟೇಜ್‌ ಹಾಗೂ ಮೇಕಿಂಗ್‌ ಚಾರ್ಜ್‌ ನಲ್ಲಿ ಗ್ರಾಹಕರು ಕೊಂಡುಕೊಳ್ಳಲು ಅವಕಾಶ ನೀಡಲು ಗೊಲ್ಡ್‌ ಮಾಲನ್ನು ಪ್ರಾರಂಭಿಸಿದ್ದೇವೆ ಎಂದು ಹೇಳೀದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!