ಕೊಳ್ಳೇಗಾಲದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಮುಖ್ಯ ರಸ್ತೆಗಳಲ್ಲಿ ಜಾಥ
ಕೊಳ್ಳೇಗಾಲ :- ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಕೊಳ್ಳೇಗಾಲ ಪಟ್ಟಣದಲ್ಲಿ ತಾಲೂಕಿನ ಕಾನೂನು ಸೇವೆಗಳ ಮುಖ್ಯ ನ್ಯಾಯದಿಶರು ಅರಣ್ಯ ಸಂರಕ್ಷಣಾ ಅಧಿಕಾರಿ ಸಿಬ್ಬಂದಿ ವರ್ಗದವರು ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹದೇಶ್ವರ ಕಾಲೇಜು ಎನ್ ಎಸ್ ಎಸ್ ವಿದ್ಯಾರ್ಥಿಗಳು ಹಾಗೂ ಅಧಿಕಾರಿಗಳು ಸೇರಿ ಮರಡಿ ಗುಡ್ಡ ದಿಂದ ಜಾಥ ಹೊರಟು ಪಟ್ಟಣದ ಪುನೀತ್ ರಾಜ್ ಕುಮಾರ್ ರಸ್ತೆಯ ಮೂಲಕ ಸಾಗಿ ರಸ್ತೆಯಲ್ಲಿ ಬಿದ್ದಿರುವ ಕಸ ಕಡ್ಡಿಗಳನ್ನು ಸ್ವಚ್ಛಗೋಳಿಸುತ್ತ ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಭಾರತೀಯ ಪ್ರಜೆಗಳ ಮೂಲ ಕರ್ತವ್ಯ ಪರಿಸರ. ನೀರು.ಗಾಳಿ. ಇವೆಲ್ಲವೂ ಮಾನವನ ಮುಖ್ಯ ಸರಪಳಿಗಳು.ಎಂಬ ಅರಿವು ಮೂಡಿಸುತ್ತ ಮಹದೇಶ್ವರ ಕಾಲೇಜು ತನಕ ನೂರಾರು ವಿದ್ಯಾರ್ಥಿಗಳ ಜೊತೆ ಸಾಗಿದರು.
ಇನ್ನು ಇದೆ ಸಂದರ್ಭದಲ್ಲಿ ಕೊಳ್ಳೇಗಾಲ ನ್ಯಾಯಾಲಯದ ಜಿಲ್ಲಾ ಮತ್ತು ಶತ್ರ ನ್ಯಾಯದಿಶಾರದ ಶ್ರೀಮತಿ ನಂದಿನಿ ಹಾಗೂ ಜಿ ಎಸ್ ರಘು.ಹಾಗೂ ಎನ್ ಎಸ್ ಎಸ್ ಅಧಿಕಾರಿಗಳು ವೇಣುಗೋಪಾಲ್ ಹಾಗೂ ದೀಪ. ಕೊಳ್ಳೇಗಾಲ ಮತ್ತು ಮಲೈ ಮಹದೇಶ್ವರ ವನ್ಯ ಜೀವಿ ಅರಣ್ಯ ವಲಯ ಸಿಬ್ಬಂದಿಗಳು ಮತ್ತು ಮಹದೇಶ್ವರ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ವರದಿ :- ನಾಗೇಂದ್ರ ಪ್ರಸಾದ್