*ಚಳಿ ಮತ್ತು ಮಂಜಿಗೆ ಗಡಿ ಜಿಲ್ಲೆ ಭಾಗ ಗಡಗಡ*
ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಕಳೆದ ವಾರದಿಂದ ಚಳಿಯ ಹುರುಪು ಹೆಚ್ಚಾಗಿದ್ದು, ಮಂಜಿನ ಜೊತೆ ಚಳಿಯ ತೀವ್ರತೆಯೂ ಹೆಚ್ಚಾಗಿದೆ…
ಜಿಲ್ಲೆಯಲ್ಲೆ ಶೇಕಡಾ ೫೦ ಕ್ಕೂ ಹೆಚ್ಚು ಅರಣ್ಯ ಪ್ರದೇಶ ಹಾಗೂ ಸುತ್ತಮುತ್ತಲಿನ ಕೆರೆಗಳು ತುಂಬಿರುವ ಕಾರಣ ಬೆಳಗಿನ ಜಾವದಲ್ಲಿ ಹಾಗೂ ರಾತ್ರಿಯ ವೇಳೆ ಚಳಿ ಹೆಚ್ಚಾಗಿರುತ್ತದೆ. ಅಲ್ಲದೇ ಇಬ್ಬನಿ ಹೆಚ್ಚಾಗಿ ಸುರಿಯುತ್ತಿದ್ದು, ಸಹಜವಾಗಿ ತಾಪಮಾನದಲ್ಲಿ ಇಳಿತವಾಗಿರುವ ಕಾರಣ ಕೊರೆವ ಚಳಿಯ ಹುರುಪು ಹೆಚ್ಚಾಗಿದೆ….
ಸಂಜೆ ಐದರಿಂದಲೇ ಪ್ರಾರಂಭವಾಗುವ ಚಳಿ ಬೆಳಿಗ್ಗೆ ೧೦ ಗಂಟೆಯಾದ್ರೂ ಇರುತ್ತದೆ. ಹೀಗಾಗಿ ಜನತೆ ಬೆಚ್ಚಗಿನ ಉಡುಪಿನೊಂದಿಗೆ ಕಾಲಕಳೆಯುತ್ತಿದ್ದಾರೆ….
ಗ್ರಾಮಾಂತರ ಪ್ರದೇಶಗಳಲ್ಲಿನ ಜನತೆ ಸಂಜೆ ಮತ್ತು ಬೆಳಗಿನ ಜಾವಗಳಲ್ಲಿ ಬೆಂಕಿ ಕಾಯಿಸಿಕೊಳ್ಳುವ ಮೂಲಕ ಚಳಿಯನ್ನು ತಡೆಯುತ್ತಿದ್ದಾರೆ..
ಇನ್ನು ಚಳಿಯ ತೀವ್ರತೆಯಿಂದಾಗಿ ವಾಯು ವಿಹಾರಕ್ಕೆ ತೆರಳುತ್ತಿದ್ದವರ ಸಂಖ್ಯೆ ಸಹಾ ಇಳಿಮುಖವಾಗಿದ್ದು, ಪೆಬ್ರವರಿಯವರೆಗೆ ಇಬ್ಬನಿಯುಕ್ತ ಚಳಿಯ ಆರ್ಭಟ ಹೆಚ್ಚಾಗಿರುತ್ತದೆಂದು ತಜ್ಞರ ಅಭಿಪ್ರಾಯ…
ಬೇಸಿಗೆಯಲ್ಲಿ ಜಿಲ್ಲೆಯ ತಾಪಮಾನ ೩೭ ಡಿಗ್ರಿ ಸೆಲ್ಸಿಯಸ್ ಇರುತ್ತಿದ್ದು, ಇದೀಗ ಗರಿಷ್ಟ ತಾಪಮಾನವೇ ೨೦ ರಿಂದ ೨೨ ಡಿಗ್ರಿ ಸೆಲ್ಸಿಯಸ್ ಇದೆ. ಕನಿಷ್ಟ ತಾಪಮಾನ ೨೫ ರಿಂದ ೧೨ ಡಿಗ್ರಿ ಸೆಲ್ಸಿಯಸ್ ವರೆಗೂ ಇಳಿಕೆಯಾಗುತ್ತಿದೆ.,.
ಕಳೆದ ವರ್ಷ ಜಿಲ್ಲೆಯಲ್ಲಿ ಕನಿಷ್ಠ ೧೦ ಡಿಗ್ರಿ ಸೆಲ್ಸಿಯಸ್ ವರೆಗೆ ಇಳಿದು ಗಮನಸೆಳೆದಿತ್ತು….
ಒಟ್ಟಾರೆಯಾಗಿ ಗಡಿ ಜಿಲ್ಲೆ ಸದ್ಯಕ್ಕಂತೂ ಎರಡನೇ ಊಟಿಯಾಗಿ ಪರಿವರ್ತನೆಯಾಗುವ ಮೂಲಕ ಜನರ ಗಮನ ಸೆಳೆದಿದೆ…