ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಪುಟ್ಟರಂಗಶೆಟ್ಟಿ ಬೆಂಬಲಿಗರಿಂದ ಪ್ರತಿಭಟನೆ
ಕೊಳ್ಳೇಗಾಲ :- ಚಾಮರಾಜನಗರ ಜಿಲ್ಲೆಯ ಉಪ್ಪಾರ ಸಮುದಾಯದ ಕಾಂಗ್ರೆಸ್ ಪಕ್ಷದ ಹಿರಿಯ ರಾಜಕಾರಣಿ ಪುಟ್ಟರಂಗಶೆಟ್ಟಿ ರವರಿಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಕೊಳ್ಳೇಗಾಲ ತಾಲೂಕಿನ ದೊಡ್ಡೊಂದುವಾಡಿ ಗ್ರಾಮದಲ್ಲಿ ಉಪ್ಪಾರ ಸಮುದಾಯದ ಮುಖಂಡರುಗಳು ಹಾಗೂ ಯುವಕರಿಂದ ಪ್ರತಿಭಟನೆ ಮಾಡಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದೆ ವೇಳೆ ಮಾತನಾಡಿದ ಉಪ್ಪಾರ ಸಮುದಾಯದ ಮುಖಂಡ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಚಪ್ಪಾಜಿ. ಈ ಬಾರಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಅತಿ ಹೆಚ್ಚು ಸಂಚಲನವನ್ನು ಉಂಟುಮಾಡಿದ್ದ ಕ್ಷೇತ್ರ ಚಾಮರಾಜನಗರ ಕ್ಷೇತ್ರ ಬಿಜೆಪಿ ಪಕ್ಷದಿಂದ ಮುಖ್ಯಮಂತ್ರಿ ರೇಸ್ನಲ್ಲಿದ್ದ ವಿ ಸೋಮಣ್ಣ ಎಂಬ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದರು ಅಂತಹ ಪ್ರಬಲ ಅಭ್ಯರ್ಥಿಯ ಮುಂದೆ ಭರ್ಜರಿ ಜಯ ಸಾಧಿಸಿದ ಪುಟ್ಟರಂಗಶೆಟ್ಟಿ ರವರಿಗೆ ಸಚಿವ ಸ್ಥಾನ ಕೊಡದಿರುವುದು ಬಾರಿ ಅನ್ಯಾಯ.
ನಮ್ಮ ಉಪ್ಪಾರ ಸಮುದಾಯ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ತುಂಬಾ ಹಿಂದುಳಿದಿದೆ ಇಂತಹ ಸಮಯದಲ್ಲಿ ನಮ್ಮ ಸಮುದಾಯದ ಶಕ್ತಿಯಾಗಿ ಪುಟರಂಗಶೆಟ್ಟಿ ಅವರ ನೇತೃತ್ವದಲ್ಲಿ ಸುಧಾರಣೆ ಆಗುವ ಭರವಸೆ ಇತ್ತು ಆದರೆ ನಮ್ಮ ಸಮುದಾಯದ ನಾಯಕನಿಗೆ ಮೋಸ ಆಗಿದೆ.
ಹಾಗೂ ಉಪ್ಪಾರ ಸಮುದಾಯದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಏಕೈಕ ವ್ಯಕ್ತಿ ಪುಟ್ಟರಂಗಶೆಟ್ಟಿ ರವರು ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲೂ ಕೂಡ ಮಂತ್ರಿ ಸ್ಥಾನದ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ನೆನ್ನೆ ಸ್ವತಃ ಪುಟ್ಟರಂಗಶೆಟ್ಟಿರವರು ದೆಹಲಿಗೆ ತೆರಳಿದಾಗ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಭರವಸೆಯನ್ನು ನೀಡಿದ್ದ ಹೈಕಮಾಂಡ್ ಇದೀಗ ಅವರಿಗೆ ಸಚಿವ ಸ್ಥಾನ ಸಿಕ್ಕದಿರುವುದು ಬಾರಿ ಆಘಾತ ಮತ್ತು ನೋವುಂಟು ಮಾಡಿದೆ.
ಇಡೀ ರಾಜ್ಯದಲ್ಲಿ ನಲವತ್ತು ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇರುವ ಸಮುದಾಯ ನಮ್ಮ ಉಪ್ಪಾರ ಸಮುದಾಯ ನಮ್ಮ ಸಮುದಾಯದ ಹಿರಿಯ ನಾಯಕನಿಗೆ ಮೋಸ ಆಗಿದೆ. ಎಂದು ಪುಟ್ಟರಂಗ ಶೆಟ್ಟಿ ಪರ ಜಯ ಘೋಷಣೆ ಕೂಗುತ್ತ ಸಚಿವ ಸ್ಥಾನ ನೀಡಲು ಒತ್ತಾಯಿಸಿ ಪ್ರತಿಭಟನೆ ಮಾಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರಾಚಪ್ಪ. ದೊಡ್ಡಿoದು ವಾಡಿ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಸುರೇಶ.ಮಾದೇಶ್. ಸೋಮಣ್ಣ. ಉಪಾಧ್ಯಕ್ಷರು. ನಾಗಭೂಷಣ್. ಶಿವರುದ್ರ .ಮಾಜಿ ರಂಗಸ್ವಾಮಿ ಮನ್ನಾ ಯಜಮಾನ್ರು ಪುಟ್ಟು.ಲೋಕೇಶ್. ಗುರುಸ್ವಾಮಿ. ಬಸವ ಶೆಟ್ಟಿ. Ac. ರಾಜು.ಪುಟ್ಟಸ್ವಾಮಿ ಕೆಪಿ.ನಿಂಗರಾಜು. ಹಾಗೂ ಯಜಮಾನರು ಯುವಕರು. ಮತ್ತಿತರರಿದ್ದರು.
ವರದಿ :- ನಾಗೇಂದ್ರ ಪ್ರಸಾದ್