ಬೃಹತ್ ಪ್ರತಿಭಟನೆ ಚಾಮರಾಜನಗರದಲ್ಲಿ ನೀಲಿಮಯ:ಸಂಜೀವ್ ರೆಡ್ಡಿ ಬಂಧಿಸಲು ಅಗ್ರಹ 

ಬೃಹತ್ ಪ್ರತಿಭಟನೆ ಚಾಮರಾಜನಗರದಲ್ಲಿ ನೀಲಿಮಯ:ಸಂಜೀವ್ ರೆಡ್ಡಿ ಬಂಧಿಸಲು ಅಗ್ರಹ 

ಚಾಮರಾಜನಗರ :-ಮೇ 25 ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ರುವ ಚಾಮರಾಜನಗರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಹಾಗೂ ನಿರ್ದೇಶಕ ಡಾ ಸಂಜೀವ್ ರನ್ನು ಕರ್ತವ್ಯದಿಂದ ವಜಾಗೊಳಿಸಬೇಕು. ಎಂದು ಆಗ್ರಹಿಸಿ ನಗರದಲ್ಲಿ ಬೃಹತ್‌ ಪ್ರತಿಭಟನೆ ನಡೆಯಿತು.ರಾಜ್ಯದ ವಿವಿಧ ಜಿಲ್ಲೆಯ ಬಾಬಾಸಾಹೇಬ್ ಅಂಬೇಡ್ಕರ್ ರ ಅನುಯಾಯಿಗಳು, ದಲಿತಪರ ಸಂಘಟನೆಗಳು ಬಹುಜನ ಸಮಾಜ ಪಾರ್ಟಿ, ಡಾ.ಬಿ.ಆರ್.ಅಂಬೇಡ್ಕರ್ ಆನುಯಾಯಿಗಳ ಒಕ್ಕೂಟ, ಛಲವಾದಿ ಮಹಾಸಭೆ : ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

 

 

 

 

 

 

 

 

 

 

ಅಂಬೇಡ್ಕರ್ ಭವನದಿಂದ ಹೊರಟ ಬೃಹತ್‌ ಮೆರವಣಿಗೆ ನಗರದ ಪ್ರವಾಸಿ ಮಂದಿರ, ಸುಲ್ತಾನ್ ಷರೀಫ್ ವೃತ್ತ, ಗುಂಡ್ಲುಪೇಟೆ ವ್ಯತ್ತ , ದೊಡ್ಡಂಗಡಿ ಬೀದಿ , ಚಿಕ್ಕಂಗಡಿ ಬೀದಿ, ಸಂತೇಮರಹಳ್ಳಿ ಸರ್ಕಲ್ ನಿಂದ ಸಾಗಿ ಬಿ . ರಾಚಯ್ಯ ಜೋಡಿ ರಸ್ತೆ ಮೂಲಕ ಜಮಾಯಿಸಿದ ಸಾವಿರಾರು ಜನರು ಜಿಲ್ಲಾಡಳಿತ ಭವನಕ್ಕೆ ಆಗಮಿಸಿದರು ಡಿನ್ ಮತ್ತು ನಿರ್ದೇಶಕ ಡಾ.ಸಂಜೀವ್ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು .

 

 

 

 

ಇದೇ ಸಂದರ್ಭದಲ್ಲಿ  ಕೆಲಕಾಲ ಧರಣಿ ನಡೆಸಿದರು ನಂತರ , ಕೂಡಲೇ ಡೀನ್ ಅವರನ್ನು ಹುದ್ದೆಯಿಂದ ಕೆಳಗಿಳಿಸಿ ಎಂದು ಚಾಮರಾಜನಗರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯ ಮಂತ್ರಿಗೆ ಮನವಿ ಸಲ್ಲಿಸಲಾಯಿತು. ವಜಾಗೊಳಿಸಿ, ಸೂಕ್ತ ಕಾನೂನು ಕ್ರಮ ಕೈಗೊಳುವಂತೆ ಅಂಬೇಡ್ಕರ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಸಂಜೀವ್ ರೆಡ್ಡಿಯನ್ನು ಸೇವೆಯಿಂದ ವಜಾ ಗೊಳಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು,

 

 

 

 

 

 

 

 

 

 

 

 

ಅಲ್ಲದೇ ಡಾ. ಮಾರುತಿ ಅವರ ಮೇಲೆ ದಾಖಲಾಗಿರುವ ದೂರನ್ನು ಸರ್ಕಾರ ಕೂಡಲೇ ವಾಪಸ್ಸು ತೆಗೆದುಕೊಂಡು ಮುಕ್ತಾಯ ಮಾಡಬೇಕು ಎಂದು ಆಗ್ರಹಿಸಿದರು. ಡಾ.ಸಂಜೀವ್‌ ಜೊತೆ ಶಾಮೀಲಾಗಿರುವ ಎ, ಎಎ, ಡಿವೈಎಸ್ಪಿ, ವರ್ಗಾವಣೆಗೊಳಸಿ, ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಸಿಮ್ಸ್ ಹಾಗೂ ಜಿಲ್ಲಾಸತ್ರೆಯನ್ನು ಬೇರ್ಪಡಿಸಿ ಪ್ರತ್ಯೇಕವಾಗಿ ಅಧಿಕಾರ ಹಂಚಿ ನಿಬಾಯಿಸಲು ಕ್ರಮವಹಿಸಬೇಕು.

 

 

 

 

 

 

 

 

 

 

 

 

 

ಸಿಮ್ಸ್ ಆಸ್ಪತ್ರೆಯನ್ನು ರಮಾಬಾಯಿ ಅಂಬೇಡ್ಕರ್ ಎಂದು ನಾಮಾಂಕಿತದಿಂದ ನಾಮಕರಣಗೊಳಿಸಬೇಕು ಎಂದರು. ಜಿಲ್ಲೆಯ ಪ್ರತಿ ತಾಲೂಕಿನಲ್ಲೂ ಅಂಬೇಡ್ಕರ್, ಅಧ್ಯಯನ, ಕೇಂದ್ರಗಳನ್ನು ತೆರೆಯಲು ಯೋಜನೆ ರೂಪಿಸಬೇಕು. ನ್ಯಾಯಾಲಯಗಳಲ್ಲಿ ಎಸ್ ಸಿ ವರ್ಗದವರ ಮೇಲಿನ ದೌರ್ಜನಗಳ ಪ್ರಕರಣಗಳಲ್ಲಿ ಶಿಕ್ಷೆ ವಿಧಿಸುವಲ್ಲಿ ವಿಫಲವಾಗಿರುವ ಪ್ರಕರಣಗಳಲ್ಲಿ ನ್ಯೂನತೆಗೆ ಕಾರಣಗಳೇನು ಪ್ರಕರಣ ಏಕೆ ದುರ್ಬಲವಾಯಿತು ಎಂಬುದರ ಬಗ್ಗೆ ಮೇಲುಸ್ತುವಾರಿ ಸಮಿತಿ, ನೇಮಿಸಿ ನ್ಯಾಯ ಕೂಡಿಸಿ ದೌರ್ಜನ್ಯ ತಡೆಗೆ ಶಕ್ತಿ ತುಂಬುವಂತೆ ಎಂದು ಒತ್ತಾಯಿಸಿದರು.

 

 

 

 

 

 

 

 

 

 

 

 

 

ಮೇ 18 ರಂದು ಸಿಮ್ಸ್‌ ಡೀನ್ ಸಂಜೀವ್‌ ಅವರು ಡಾ. ಬಿ. ಆರ್. ಅಂಬೇಡ್ಕರ್ ಅವರನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ಅಲ್ಲಿನ ಕೆಲ ವೈದ್ಯರು ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದರು.ಇದರಿಂದ ದಲಿತ ಪರ ಸಂಘಟನೆಗಳು ಡೀನ್ ಅವರ ಕಾರನ್ನು ಜಖಂಗೊಳಿಸಿ, ಅವರಿಗೆ ಕೆಸರು: ಎರಚಿ ಆಕ್ರೋ‌ ಹೊರಹಾಕಿದ್ದರು. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಸ್ಸಿ ಎಸ್ಟಿ ಕಾಯ್ದೆಯಡಿ ದೂರು ದಾಖಲಾಗಿತ್ತು. ಸಾವಿರಾರು ಸಂಖ್ಯೆಯ ಜನರು ಭಾಗಿಯಾಗಿ ಸಿಮ್ಸ್ ಡೀನ್ ಡಾ.ಸಂಜೀವ್ ವಜಾಕ್ಕೆ ಆಗ್ರಹಿಸಿ ನಗರದಲ್ಲಿ ನಡೆದ ಬೃಹತ್

 

 

 

 

 

 

 

 

 

 

 

 

ಪ್ರತಿಭಟನೆಯಲ್ಲಿ ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದರು ಇಡೀ ಚಾಮರಾಜನಗರ ಪಟ್ಟಣವೇ ನಿಲಿಮಯದಿಂದ ಕೂಡಿತ್ತು ಬಾಬಾಸಾಹೇಬರ ಚಿತ್ರ ಪಟಗಳು ನೀಲಿ ಬಾವುಟ ರಸ್ತೆಯುದ್ಧಕ್ಕೂ ರಾರಾಜಿಸಿದವು. ಸರ್ವ ಧರ್ಮದ ಅಂಬೇಡ್ಕರ್ ರ ಅನುಯಾಯಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!