ನೆಚ್ಚಿನ ನಾಯಕನ ಭಾವಚಿತ್ರ ಹಚ್ಚೆ ಹಾಕಿಕೊಂಡ ಅಭಿಮಾನಿ 

ನೆಚ್ಚಿನ ನಾಯಕನ ಭಾವಚಿತ್ರ ಹಚ್ಚೆ ಹಾಕಿಕೊಂಡ ಅಭಿಮಾನಿ 

 

ಹನೂರು: ನೂತನ ಶಾಸಕ ಎಂಆರ್ ಮಂಜುನಾಥ್ ಮೇಲಿನ ಅಭಿಮಾನಕ್ಕಾಗಿ ಅಭಿಮಾನಿ ಯೋರ್ವ ಕೈ ಮೇಲೆ ಮಂಜುನಾಥ್ ರವರ ಭಾವಚಿತ್ರವನ್ನು ಅಚ್ಚೆ ಹಾಕಿಸಿಕೊಂಡಿದ್ದಾನೆ

 

 

 

 

 

 

 

ಪಟ್ಟಣದ ಆರನೇ ವಾರ್ಡಿನ ನಿವಾಸಿ ಷಣ್ಮುಗಂ ಕಳೆದ ಐದು ವರ್ಷಗಳಿಂದ ಪಟ್ಟಣದ ಜೆಡಿಎಸ್‌ ಅಭ್ಯರ್ಥಿಯಾಗಿದ್ದ,ಪ್ರಸ್ತುತ ಶಾಸಕರಾಗಿರುವ ಎಂ ಆರ್ ಮಂಜುನಾಥ್ ಅವರ ಕಚೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ, ಈತ ತನ್ನ ನೆಚ್ಚಿನ ನಾಯಕನ ಭಾವಚಿತ್ರವನ್ನು ತನ್ನ ಬಲಗೈ ಮೇಲೆ ಅಚ್ಚೆ ಹಾಕಿಸಿಕೊಂಡು ಅಭಿಮಾನ ಮೆರೆದಿದ್ದಾನೆ

 

 

 

 

 

 

 

 

ಶಾಸಕ ಮಂಜುನಾಥ್ ಮೇಲೆ ಅಪಾರ ಅಭಿಮಾನ ಇಟ್ಟುಕೊಂಡಿರುವ ಷಣ್ಮುಗಂ ತನ್ನ ಬಲಗೈಯಲ್ಲಿ ಅಚ್ಚೆ ಹಾಕಿಸಿಕೊಂಡು ಅದರ ಕೆಳಗಡೆ ಬಾಸ್ ಎಂದು ಬರೆಯಿಸಿಕೊಂಡಿರುತ್ತಾನೆ . ಈ ರೀತಿ ಹಾಕಿಸಿಕೊಂಡಿರುವ ಆತನ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆತನ ಗೆಳೆಯರು ಹರಿಬಿಟ್ಟಿದ್ದಾರೆ.

 

 

 

 

 

 

 

 

ತನ್ನ ನೆಚ್ಚಿನ ನಾಯಕನ ಭಾವಚಿತ್ರವನ್ನು ಕೈ ಮೇಲೆ ಅಚ್ಚೆ ಹಾಕಿಸಿಕೊಂಡಿರುವ ಷಣ್ಣುಗಂ ನಿಗೆ ಕ್ಷೇತ್ರದಂತ ಶಾಸಕ ಮಂಜುನಾಥ್ ಅಭಿಮಾನಿಗಳು, ಜೆಡಿಎಸ್ ಕಾರ್ಯಕರ್ತರು, ವಿವಿಧ ಗ್ರಾಮದ ಮುಖಂಡರುಗಳು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ

 

ವರದಿ : ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!