ಕರ್ನಾಟಕದಲ್ಲಿ ಬಿಜೆಪಿ ಇದುವರೆಗೂ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳಿವು 

ಕರ್ನಾಟಕದಲ್ಲಿ ಬಿಜೆಪಿ ಇದುವರೆಗೂ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳಿವು 

 

ಸಕ್ಕರೆ ನಾಡು -ಬಿಜೆಪಿ ಪಕ್ಷವು ಪ್ರಪಂಚದ ಅತ್ಯಂತ ದೊಡ್ಡ ಪಕ್ಷ ಎಂದು ಹೇಳಿಕೊಂಡಿದೆ. 2014 ಮತ್ತು 2019ರ ಲೋಕಸಭಾ ಚುನಾವಣೆಗಳಲ್ಲಿ ಗೆದ್ದು ಕೇಂದ್ರದಲ್ಲಿ ಅಧಿಕಾರ ಹಿಡಿದಿದೆ. ಆದರೂ ದಕ್ಷಿಣದ ರಾಜ್ಯಗಳಲ್ಲಿ ಅದು ಪೂರ್ಣ ಬಹುಮತದಿಂದ ಗೆದ್ದು ಅಧಿಕಾರ ಹಿಡಿಯಲು ಸಾಧ್ಯವಾಗಿಲ್ಲ.

 

 

 

 

 

 

 

 

 

 

ಗೋವಾ ಮತ್ತು ಕರ್ನಾಟಕದಲ್ಲಿ ಅಲ್ಪ ಸ್ವಲ್ಪ ಅಧಿಕಾರ ನಡೆಸಿದರೂ ಕೂಡ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಅದು ಅಧಿಕಾರದ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗಿಲ್ಲ. ಏಕೆಂದರೆ ದಕ್ಷಿಣದ ಜನ ಅಷ್ಟು ಸುಲಭಕ್ಕೆ ಬಿಜೆಪಿಯ ರಾಷ್ಟ್ರೀಯತೆ ಮತ್ತು ಹಿಂದುತ್ವ ಸಿದ್ಧಾಂತಗಳನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ. ಇನ್ನೂ ಕರ್ನಾಟಕದಲ್ಲಿ ಬಿಜೆಪಿ 1983ರಲ್ಲಿ 18 ಸೀಟು ಗೆದ್ದು ಜನತಾಪಕ್ಷಕ್ಕೆ ಬೆಂಬಲ ನೀಡಿತ್ತು. ಆದರೆ ಅದು ಪದೇ ಪದೇ ತೊಂದರೆ ಕೊಡುತ್ತಿದೆ

 

 

 

 

 

 

 

 

ಎಂದು ಆರೋಪಿಸಿ 1985ರಲ್ಲಿ ಸರ್ಕಾರ ವಿಸರ್ಜಿಸಿ ಮತ್ತೆ ಚುನಾವಣೆ ಎದುರಿಸಿ ಸ್ವತಂತ್ರವಾಗಿ ಜನತಾಪಕ್ಷ ಅಧಿಕಾರ ಹಿಡಿದಿತ್ತು. ಆ ನಂತರ 2004ರಲ್ಲಿ 79 ಸ್ಥಾನ ಗೆದ್ದರೂ ಪ್ರತಿಪಕ್ಷದಲ್ಲಿ ಕೂರಬೇಕಾಗಿತ್ತು. 2006ರಲ್ಲಿ ಜೆಡಿಎಸ್ ಪಕ್ಷಕ್ಕೆ ಬೆಂಬಲ ಸೂಚಿಸುವ ಮೂಲಕ ಅಧಿಕಾರದಲ್ಲಿತ್ತು. ಆದರೆ ಕುಮಾರಸ್ವಾಮಿಯವರು ಕೊಟ್ಟ ಮಾತಿನಂತೆ ಅಧಿಕಾರ ಹಸ್ತಾಂತರಿಸದೇ ಸರ್ಕಾರ ವಿಸರ್ಜಿಸಿದರು. ಇದರಿಂದ ಯಡಿಯೂರಪ್ಪನವರ ಮೇಲಿನ ಅನುಕಂಪದಿಂದ 2008ರಲ್ಲಿ ಬಿಜೆಪಿ 110 ಸ್ಥಾನ ಗೆದ್ದಿತ್ತು.

 

 

 

 

 

 

 

 

 

ಆದರೂ ಬಹುಮತಕ್ಕೆ 03 ಸೀಟುಗಳ ಕೊರತೆಯಿತ್ತು. ಆಗ ಯಡಿಯೂರಪ್ಪನವರು ಆಪರೇಷನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು. ಇನ್ನು 2013ರಲ್ಲಿ ಬಿಜೆಪಿ 40 ಸ್ಥಾನಗಳಿಗೆ ಕುಸಿದಿತ್ತು. 2018ರಲ್ಲಿ 104 ಸ್ಥಾನ ಗೆದ್ದರೂ ಸರಳ ಬಹುಮತ ಸಿಗದೇ ವಿರೋಧ ಪಕ್ಷವಾಗಿತ್ತು. ಆದರೆ 2019ರಲ್ಲಿ ಮತ್ತೆ ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಧಿಕಾರಕ್ಕೆ ಬಂತು.

 

 

 

 

 

 

 

 

 

 

ಆದರೆ ಇತ್ತೀಚಿನ ಕರ್ನಾಟಕ ಚುನಾವಣೆಯಲ್ಲಿ ತೀವ್ರ ಮುಖಭಂಗ ಅನುಭವಿಸಿದೆ. ಕೇವಲ 66 ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಇಷ್ಟೆಲ್ಲ ಆದರೂ ಬಿಜೆಪಿ ಕರ್ನಾಟಕ ಸುಮಾರು 43 ಕ್ಷೇತ್ರಗಳಲ್ಲಿ ಒಮ್ಮೆಯೂ ಗೆದ್ದು ಖಾತೆ ತೆರೆಯಲು ಸಾಧ್ಯವಾಗಿಲ್ಲ.. ಅಂತಹ ಕ್ಷೇತ್ರಗಳ ಪಟ್ಟಿ ಇಲ್ಲಿದೆ.

 

ಬಿಜೆಪಿ ಒಮ್ಮೆಯೂ ಗೆಲ್ಲಲಾಗದ ಕ್ಷೇತ್ರಗಳು 

ಮಂಡ್ಯ.ಮದ್ದೂರು.ಮೇಲುಕೋಟೆ.ಶ್ರೀರಂಗಪಟ್ಟಣ. ನಾಗಮಂಗಲ.ಮಳವಳ್ಳಿ.ಕುಣಿಗಲ್.ಗುಬ್ಬಿ.ಮಧುಗಿರಿ.ಕೊರಟಗೆರೆ.ಪಾವಗಡ.ಚಿಂತಾಮಣಿ.ಶಿಡ್ಲಘಟ್ಟ.ಬಾಗೇಪಲ್ಲಿ.ಗೌರಿಬಿದನೂರು.ಮುಳಬಾಗಿಲು.ಶ್ರೀನಿವಾಸಪುರ.ಕೋಲಾರ.ದೇವನಹಳ್ಳಿ.ಹೆಚ್.ಡಿ ಕೋಟೆ.ಹನೂರು ವರುಣ.ಚಾಮುಂಡೇಶ್ವರಿ. ಹೊಳೆನರಸೀಪುರ.ಶ್ರವಣಬೆಳಗೊಳ.ಗುರುಮಠಕಲ್.ಹಳಿಯಾಳ.ದಾವಣಗೆರೆ ದಕ್ಷಿಣ.ಶಹಾಪುರ. ಮಾನ್ವಿ.ಸಿಂಧನೂರು.ಯಮಕನಮರಡಿ.ಸಂಡೂರು.ಭದ್ರಾವತಿ.ಬ್ಯಾಟರಾಯಪುರ.ಪುಲಿಕೇಶಿನಗರ.ವಿಜಯನಗರ.ಸರ್ವಜ್ಞನಗರ.ಬಿಟಿಎಂ ಲೇಔಟ್.ಗಾಂಧಿನಗರ.ರಾಮನಗರ.ಕನಕಪುರ ಇಷ್ಟು ಕ್ಷೇತ್ರಗಳಲ್ಲಿ ಒಮ್ಮೆಯೂ ಬಿಜೆಪಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇವುಗಳಲ್ಲಿ ಬಹುತೇಕ ಹಳೇ ಮೈಸೂರು ಪ್ರಾಂತ್ಯದ ಕ್ಷೇತ್ರಗಳಾಗಿವೆ.

 

 

 

 

 

 

 

ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ಇದೆ ಹೊರತು ಬಿಜೆಪಿಗೆ ಮೂರನೇ ಸ್ಥಾನ. ಬಿಜೆಪಿಗೆ ಲಿಂಗಾಯತ ಸಮುದಾಯ ಕೆಲವೊಮ್ಮೆ ಹೆಚ್ಚಿನ ಬೆಂಬಲ ನೀಡಿದೆ. ಆದರೆ ಹಳೇ ಮೈಸೂರು ಪ್ರಾಂತ್ಯದಲ್ಲಿ ಲಿಂಗಾಯತರ ಪ್ರಾಬಲ್ಯವಿಲ್ಲ. ಅದು ಕೂಡ ಬಿಜೆಪಿ ಸೋಲಿಗೆ ಒಂದು ಕಾರಣವಾಗಿದೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!